ಅಪ್ಸರೆಯಂತಿರೋ ಇವಳನ್ನು ಕೆಟ್ಟದಾಗಿ ತೋರಿಸೋದ್ಯಾಕೆ? ದೃಷ್ಟಿಬೊಟ್ಟು ವೀಕ್ಷಕರು ಗರಂ!

Published : Sep 19, 2024, 03:57 PM ISTUpdated : Sep 19, 2024, 04:45 PM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ದೃಷ್ಟಿ ಬೊಟ್ಟು ಧಾರಾವಾಹಿಯಲ್ಲಿ ಕೃಷ್ಣಸುಂದರಿ ದೃಷ್ಟಿಯಾಗಿ ನಟಿಸುತ್ತಿರುವ ನಟಿ ರಿಯಲ್ ಆಗಿ ಅಪ್ಸರೆಯನ್ನು ಮೀರಿಸುವಷ್ಟು ಸುಂದರಿ.   

PREV
17
ಅಪ್ಸರೆಯಂತಿರೋ ಇವಳನ್ನು ಕೆಟ್ಟದಾಗಿ ತೋರಿಸೋದ್ಯಾಕೆ? ದೃಷ್ಟಿಬೊಟ್ಟು ವೀಕ್ಷಕರು ಗರಂ!

ವಿಜಯ್ ಸೂರ್ಯ (Vijay Surya) ನಾಯಕನಾಗಿ ನಟಿಸುತ್ತಿರುವ ದೃಷ್ಟಿ ಬೊಟ್ಟು ಧಾರಾವಾಹಿ ಈಗಷ್ಟೇ ಆರಂಭವಾಗಿದ್ರೂ ತನ್ನ ಹೊಸತನದ ಕಥೆ ಮೂಲಕ ಪ್ರೇಕ್ಷಕರನ್ನು ಸೆಳೆದಿದೆ. ಸೀರಿಯಲ್ ಕಥೆಯು ಕೃಷ್ಣ ಸುಂದರಿ ದೃಷ್ಟಿಯ ಸುತ್ತಲೂ ನಡೆಯುತ್ತಿದ್ದು, ದೃಷ್ಟಿ ಮತ್ತು ದತ್ತಾ ಭಾಯ್ ಒಂದಾಗುವುದೇ ಕಥೆಯ ಮೂಲವಾಗಿದೆ. 
 

27

ದೃಷ್ಟಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಅರ್ಪಿತಾ ಮೋಹಿತೆ (Arpitha Mohite). ಇವರು ಈಗಾಗಲೇ ಆನಂದ ರಾಗ ಸೀರಿಯಲ್ ನಲ್ಲಿ ನಟಿಸಿದ್ದರು. ಇದೀಗ ಮೊದಲ ಬಾರಿಗೆ ಪೂರ್ಣಪ್ರಮಾಣದ ನಾಯಕಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಅರ್ಪಿತಾ. ಸೀರಿಯಲ್ ಸಂದರ್ಶನದಲ್ಲಿ, ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ದೃಷ್ಟಿ ಬೊಟ್ಟು ಧಾರಾವಾಹಿಯ ಕಪ್ಪು ಸುಂದರಿ ದೃಷ್ಟಿಯಾಗಿಯೇ ಕಾಣಿಸಿಕೊಂಡಿರುವ ಅರ್ಪಿತಾ ರಿಯಲ್ ಆಗಿ ಹೇಗಿದ್ದಾರೆ ನೋಡೋದಕ್ಕೆ ಅನ್ನೋ ಕುತೂಹಲ ಕೂಡ ಜನರಲ್ಲಿ ಹೆಚ್ಚಾಗಿದೆ. 
 

37

ದೃಷ್ಟಿ ಬೊಟ್ಟು (Drusti Bottu) ಸೀರಿಯಲ್ ನೋಡುತ್ತಿರುವ ವೀಕ್ಷಕರು ತನ್ನನ್ನು ಪಾತ್ರದ ಮೂಲಕವೇ ಗುರುತು ಹಿಡಿಯಬೇಕು ಎನ್ನುವ ಕಾರಣದಿಂದಾಗಿ ನಟಿ ಅರ್ಪಿತಾ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳನ್ನು ಡೀಲಿಟ್ ಮಾಡಿದ್ದಾರೆ. ಇನ್’ಸ್ಟಾಗ್ರಾಂನಲ್ಲಿನ ಎಲ್ಲಾ ರೀತಿಯ ಫೋಟೊಗಳನ್ನು ಡಿಲಿಟ್ ಮಾಡಿದ್ದಾರೆ. 
 

47

ದೃಷ್ಟಿ ಪಾತ್ರಧಾರಿ ಅರ್ಪಿತಾ ಮೋಹಿತೆ ಬಗ್ಗೆ ಹೇಳೋದಾದ್ರೆ ರಿಯಲ್ ಲೈಫಲ್ಲಿ ಈಕೆ ಮುದ್ದು ಮುಖದ ಸುಂದರಿ, ಅಪ್ಸರೆಯನ್ನು ಮೀರಿಸುವ ಸೌಂದರ್ಯ ಇವರಿಗಿದೆ ಎಂದರೆ ತಪ್ಪಾಗಲ್ಲ. ಈಗಾಗಲೇ ಬಿಕಾಂ ಮುಗಿಸಿರುವ ಹುಡುಗಿ ಅರ್ಪಿತಾಗೆ ಸಾಕಷ್ಟು ಆಫರ್ ಗಳು ಬಂದಿತ್ತಂತೆ, ಇದೀಗ ದೃಷ್ಟಿ ಬೊಟ್ಟು ಸೀರಿಯಲ್ ಗೆ ಆಯ್ಕೆಯಾಗಿದ್ದಾರೆ ಬೆಡಗಿ. 
 

57

ಅರ್ಪಿತಾ ಮೋಹಿತೆ ಕನಕಪುರದ ಹುಡುಗಿ. ಬೆಂಗಳೂರಿನಲ್ಲೇ ವಾಸವಾಗಿದ್ದಾರೆ. ದೃಷ್ಟಿ ಪಾತ್ರದ ಬಗ್ಗೆ ತುಂಬಾನೆ ನಿರೀಕ್ಷೆಇಟ್ಟಿರುವ ಬೆಡಗಿ ಕಿರುತೆರೆಯಲ್ಲಿ ಇದುವರೆಗೂ ಯಾವ ನಟಿಯೂ ಮಾಡದ ಸಾಹಸಕ್ಕೆ ತಾನು ಕೈಹಾಕಿದ್ದೇನೆ ಎನ್ನುವ ಹೆಮ್ಮೆ ಇದೆಯಂತೆ. ಹಾಗಂತ ಈ ಪಾತ್ರ ನಿರ್ವಹಿಸೋದೇನೂ ಅಷ್ಟೊಂದು ಸುಲಭ ಅಲ್ವೇ ಅಲ್ಲ. 
 

67

ದೃಷ್ಟಿ ಪಾತ್ರಕ್ಕಾಗಿ ಅರ್ಪಿತಾ ಅವರಿಗೆ ಬರೋಬ್ಬರಿ 2 ಗಂಟೆಗಳ ಕಾಲ ಪ್ರತಿದಿನ ಮೇಕಪ್ ಮಾಡಲಾಗುತ್ತಂತೆ. ಕೈಕಾಲು, ಮುಖ, ದೇಹ ಎಲ್ಲವೂ ಒಂದೇ ಬಣ್ಣದಲ್ಲಿ ಕಾಣಿಸಿಕೊಳ್ಳಬೇಕಾಗಿರೋದ್ರಿಂದ ಎರಡು ಗಂಟೆಗಳ ಮೇಕಪ್ ಅಗತ್ಯ. ಅದಕ್ಕಾಗಿಯೇ ಆ ಪಾತ್ರಕ್ಕೆ ಡೆಡಿಕೇಟ್ ಆಗಿರುವ ದೃಷ್ಟಿ ಎಲ್ಲಿಯೂ ತನ್ನ ನಿಜ ರೂಪ ಕಾಣಿಸದಂತೆ ದೃಷ್ಟಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಅಪ್ಸರೆಯಂತೆ ಸುಂದರಿಯಾಗಿರೋ ನಟಿಯನ್ನು ಕಪ್ಪಾಗಿ ಕೆಟ್ಟದಾಗಿ ತೋರಿಸಿರೋದಕ್ಕೆ ವೀಕ್ಷಕರು ಗರಂ ಆಗಿದ್ದಾರೆ. 

77

ಇನ್ನು ದೃಷ್ಟಿ ಬೊಟ್ಟು ಕಥೆಯ ಬಗ್ಗೆ ಹೇಳೋದಾದ್ರೆ ಬಡವರಿಗೆ ಸೌಂದರ್ಯವೇ ಶಾಪವೆನ್ನುವಂತೆ, ತನ್ನ ಸೌಂದರ್ಯವನ್ನು ಕಪ್ಪು ಬಣ್ಣದಿಂದ ಮುಚ್ಚಿ ಬದುಕುತ್ತಿದ್ದಾಳೆ ದೃಷ್ಟಿ. ಇನ್ನೊಂದೆಡೆ ಮೊದಲು ಮೆಕಾನಿಕ್ ಆಗಿ ಈಗ ರೌಡಿಯಾಗಿರುವ ದತ್ತ, ಸುಂದರವಾಗಿರುವ ಹೆಣ್ಣುಗಳನ್ನ ಕಂಡರೆ ಉರಿದು ಬೀಳುತ್ತಾನೆ. ಈ ಎರಡು ವಿರುದ್ಧ ದಿಕ್ಕುಗಳು ಹೇಗೆ ಒಂದಾಗುತ್ತೆ ಅನ್ನೋದೆ ಕಥೆ. 
 

click me!

Recommended Stories