Kannada Channel: ಇತ್ತೀಚೆಗಷ್ಟೇ ಶುರುವಾದ ಜೀ ಪವರ್ ವಾಹಿನಿಯಲ್ಲಿ ಹೊಸ ಹೊಸ ಸೀರಿಯಲ್ ಗಳು ಸಹ ಅದ್ಧೂರಿಯಾಗಿ ಪ್ರಸಾರ ಕಂಡವು. ಇದೀಗ ಇದ್ದಕ್ಕಿದ್ದಂತೆ ಎರಡು ಸೀರಿಯಲ್ ಗಳು ಅರ್ಧದಲ್ಲೇ ಅಂತ್ಯ ಕಂಡಿದೆ. ಶೀಘ್ರದಲ್ಲೇ ಚಾನೆಲ್ ಕೂಡ ಮುಚ್ಚಗಲಾಗುವುದು ಎನ್ನಲಾಗುತ್ತಿದೆ.
ಜೀ ಮೂವೀಸ್ ಎನ್ನುವ ಹೆಸರಿನಲ್ಲಿ ಪ್ರಸಾರವಾಗುತ್ತಿದ್ದ ವಾಹಿನಿ, ಕೆಲವು ತಿಂಗಳ ಹಿಂದೆಯಷ್ಟೇ ಜೀ ಪವರ್ ಎನ್ನುವ ಹೆಸರಿಗೆ ಬದಲಾಯಿಸಿ, ಸೀರಿಯಲ್ ಪ್ರಸಾರಕ್ಕೆ ಇಳಿದಿತ್ತು. ಇದೀಗ ಇದ್ದಕ್ಕಿದ್ದಂತೆ ಎರಡು ಸೀರಿಯಲ್ ಗಳನ್ನು ಚಾನೆಲ್ ಅರ್ಧದಲ್ಲೇ ನಿಲ್ಲಿಸಿದೆ. ಚಾಲೆನ್ ಪ್ರಸಾರ ಕೂಡ ನಿಲ್ಲಿಸುತ್ತೆ ಎನ್ನುತ್ತಿದೆ ಸೋಶಿಯಲ್ ಮೀಡಿಯಾ.
26
ಯಾವ ಸೀರಿಯಲ್ ಅಂತ್ಯ?
ಜೀ ಪವರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗೌರಿ ಮತ್ತು ರಾಜಕುಮಾರಿ ಧಾರಾವಾಹಿ, ಕಳೆದ ಫೆಬ್ರವರಿ 4ರಿಂದ ಪ್ರಸಾರ ಕಾಣುತ್ತಿಲ್ಲ. ಹೆಚ್ಚು ಟಿಆರ್ ಪಿ ಇಲ್ಲದ ಕಾರಣ ಧಾರಾವಾಹಿಯನ್ನು ನಿಲ್ಲಿಸಲಾಗಿದೆ ಎನ್ನಲಾಗುತ್ತಿದೆ. ಜೀ ಕನ್ನಡ, ಮತ್ತು ಕಲರ್ಸ್ ಕನ್ನಡ ಧಾರಾವಾಹಿಗಳ ಮಧ್ಯೆ ಜೀ ಪವರ್ ಹೆಚ್ಚು ಸದ್ದು ಮಾಡುತ್ತಿಲ್ಲ ಎಂದು ಸಹ ಹೇಳಲಾಗುತ್ತದೆ.
36
ಗೌರಿ ಸೀರಿಯಲ್ ಕಥೆ ಏನು?
ಗೌರಿ ಧಾರಾವಾಹಿಯಲ್ಲಿ ಕಾವ್ಯಾ ಗೌಡ, ಸುಷ್ಮಿತ್ ಜೈನ್, ಕರಣ್, ಸಿರಿಜಾ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದರು. ಇದು ಐತಿಹಾಸಿಕ ಮತ್ತು ಸಾಮಾಜಿಕ ಕಥೆಯ ಮಿಶ್ರಣ ಎನ್ನುವಂತೆ ತೋರಿಸಲಾಗಿತ್ತು. ಇದರಲ್ಲಿ ಭೂತ, ಪ್ರೇತ, ದೈವ ಎಲ್ಲವೂ ಇತ್ತು. ಜನ ಸೀರಿಯಲ್ ಇಷ್ಟಪಟ್ಟಿದ್ದರು. ಆದರೆ ಇದ್ದಕ್ಕಿದ್ದಂತೆ ಧಾರಾವಾಹಿ ಯಾಕೆ ಅಂತ್ಯ ಮಾಡಿದರು ಎನ್ನುವ ಬಗ್ಗೆ ಮಾಹಿತಿ ಇಲ್ಲ.
ಇನ್ನು ರಾಜಕುಮಾರಿ ಧಾರಾವಾಹಿಯಲ್ಲಿ ಗಗನ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಸಿಹಿ ತಿಂಡಿ ಮಾಡುವ ಹುಡುಗಿ, ಸಮಯದ ಗೊಂಬೆಯಾಗಿ ಶ್ರೀಮಂತನ ಮನೆಯ ಹುಡುಗನನ್ನು ಮದುವೆಯಾಗುತ್ತಾಳೆ. ಆದರೆ ಅದು ಯಾರಿಗೂ ಗೊತ್ತಿರುವುದಿಲ್ಲ. ಬಳಿಕ ಗೊತ್ತಾಗಿ, ಆತನು ಪ್ರೀತಿಸುತ್ತಿದ್ದ ಹುಡುಗಿ ಸಹ ತನ್ನನ್ನು ಮದುವೆಯಾಗಲೇಬೇಕು ಎನ್ನುತ್ತಾಳೆ. ಇಬ್ಬರನ್ನು ಶೌರ್ಯ ಮದುವೆಯಾಗಿ, ಇಬ್ಬರ ಜೊತೆಯೂ ಸಂಸಾರ ಮಾಡುವ ವಿಚಿತ್ರ ಕಥೆ ಇದಾಗಿತ್ತು.
56
ಎರಡು ಸೀರಿಯಲ್ ಪ್ರಸಾರ
ಎರಡು ಸೀರಿಯಲ್ ಅಂತ್ಯ ಮಾಡಿದ ಜೀ ಪವರ್ ನಲ್ಲಿ ಶುಭಸ್ಯ ಶೀಘ್ರಂ ಮತ್ತು ಜೋಡಿ ಹಕ್ಕಿ ಧಾರಾವಾಹಿಗಳು ಇನ್ನೂ ಪ್ರಸಾರವಾಗುತ್ತಿವೆ. ಉಳಿದ ಸಮಯದಲ್ಲಿ ಹಳ್ಳಿ ಪವರ್ ಪ್ರಸಾರವಾಗುತ್ತಿದೆ. ಹಾಗಾಗಿ ವೀಕ್ಷಕರು ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಇದ್ದಕ್ಕಿದ್ದಂತೆ ಯಾಕೆ ನಿಲ್ಲಿಸಿರುವುದಾಗಿ ಪ್ರಶ್ನಿಸಿದ್ದಾರೆ.
66
ಪ್ರಸಾರ ನಿಲ್ಲಿಸುತ್ತಾ ಜೀ ಪವರ್
ಇನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಮಾಹಿತಿ ಪ್ರಕಾರ ಜೀ ಪವರ್ ಪ್ರಸಾರ ನಿಲ್ಲಿಸುತ್ತಿದೆಯಂತೆ. ಹೆಚ್ಚಿನ ಟಿಆರ್ ಪಿ ಬಾರದೆ ಇರುವ ಕಾರಣ ಚಾನೆಲ್ ಬಂದ್ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಆದರೆ ಅದೆಷ್ಟು ನಿಜಾ? ಸುಳ್ಳು ಅನ್ನೋದನ್ನು ಚಾನೆಲ್ ಮುಂದಿನ ದಿನಗಳಲ್ಲಿ ಹೇಳಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.