ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಲಕ್ಷ್ಮೀ ಬಾರಮ್ಮ(Lakshmi Baramma) ಧಾರಾವಾಹಿಯಲ್ಲಿ ಕಥೆಗೆ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು ಯಾವಾಗಂದ್ರೆ ಕಾವೇರಿಯ ಮೋಸವನ್ನು ಬಯಲು ಮಾಡಲು ಬಂದಂತಹ ಕೀರ್ತಿಯನ್ನೇ ಪ್ರಪಾತಕ್ಕೆ ಕಾವೇರಿ ನೂಕಿ, ತಾನೆಷ್ಟು ಅಮಾಯಕಿ ಎಂದು ಮನೆಯವರ ಮುಂದೆ ಅತ್ತಾಗ.
ಇನ್ನೇನು ಕಾವೇರಿಯ ಎಲ್ಲಾ ಮೋಸ ಮನೆಯವರ ಮುಂದೆ ತಿಳಿಯುತ್ತೆ, ಎಂದು ವೀಕ್ಷಕರು ಕಾಯುತ್ತಿದ್ದಂತೆ, ಧಾರಾವಾಹಿಯಲ್ಲಿ ಮಹಾತಿರುವು ನೀಡಿದ್ರು, ಆದ್ರೆ ಜನ ಮಾತ್ರ ಕಥೆ ಹಳ್ಳ ಹಿಡಿತಿದೆ. ನಮಗೂ ಇದನ್ನೆಲ್ಲಾ ನೋಡಿ ನೋಡಿ ಸಾಕಾಯ್ತು ಅಂದಿದ್ದಾರೆ.
ಕೀರ್ತಿಯ (Keerthi) ಪಾತ್ರಕ್ಕೆ ನ್ಯಾಯ ಸಿಗದೆ ಕೊನೆ ಮಾಡಿರೋದಕ್ಕೆ ಕೋಪಗೊಂಡಿರುವ ವೀಕ್ಷಕರು ನಿರ್ದೇಶಕರ ವಿರುದ್ಧ ಕಿಡಿಕಾರಿದ್ದಾರೆ. ಕೀರ್ತಿಗೆ ನ್ಯಾಯ ಸಿಗಲೇಬೇಕು, ಇಲ್ಲಾಂದ್ರೆ ಧಾರಾವಾಹಿಗೆ ಅರ್ಥವೇ ಇಲ್ಲ ಎಂದಿದ್ದಾರೆ. ಕೀರ್ತಿ ಪರ ಬ್ಯಾಟ್ ಮಾಡುತ್ತಿರೋ ವೀಕ್ಷಕರು ಏನೇನು ಹೇಳಿದ್ದಾರೆ ನೋಡೋಣ.
ಕೀರ್ತಿ ಪಾತ್ರ ಮುಗಿದರೆ ಧಾರಾವಾಹಿ (serial) ಮುಗಿದಂತೆ, ಆಮೇಲೆ ಸೀರಿಯಲ್ ನೋಡೋದು ವೆಸ್ಟ್, ಕೀರ್ತಿಗೆ ಒಳ್ಳೆಯ ವಿದಾಯ ಕೊಡಿ. ಕೀರ್ತಿಗೆ ನ್ಯಾಯ ಕೊಟ್ಟು ಸೀರಿಯಲ್ ಎಂಡ್ ಮಾಡಿ. ಕೀರ್ತಿ ಹೀಗೆ ಸಾಯೋದು ಬೇಡ, ಆಕೆಯ ಕೊನೆಯನ್ನ ಒಳ್ಳೆಯ ರೀತಿಯಲ್ಲಿ ಮಾಡಿ. ಕೀರ್ತಿನೇ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಬೇಕು ಎಂದು ವೀಕ್ಷಕರು ಹೇಳಿದ್ದಾರೆ.
ಅಷ್ಟೇ ಅಲ್ಲ ಈ ಸಿರಿಯಲ್ ನಲ್ಲಿ ಅವರ ಪಾತ್ರ ಮುಗಿಯೋದೇ ಆದರೆ ಅವರು ಸತ್ತೋದರು ಅನ್ನೋ ಸೀನಲ್ಲಿ ಮುಗಿಯೋದು ಬೇಡ. ಅವರು ಮತ್ತೆ ವಾಪಸ್ ಬಂದು ತಪ್ಪು ಮಾಡಿದವರಿಗೆ ಶಿಕ್ಷೆ ಆಗಿ ಈ ಪಾತ್ರಕ್ಕೆ ಒಂದು ಒಳ್ಳೆ ಎಂಡಿಂಗ್ (good ending) ಸೀಗಬೇಕು ಅವರಿಗೆ ಎಂದಿದ್ದಾರೆ ಜನರು.
ಕೀರ್ತಿ ಇದ್ರೇನೆ ಧಾರಾವಾಹಿಗೆ ಒಂದು ಮೆರುಗು. ಕೀರ್ತಿಗೋಸ್ಕರ ಸೀರಿಯಲ್ ನೋಡೋದು, ಅವರೇ ಇಲ್ಲ ಅಂದ್ರೆ ಬೋರ್ ಹೊಡಿಯುತ್ತೆ. ಕೀರ್ತಿ ಪಾತ್ರ ಮುಗಿಸಿದರೆ ಧಾರಾವಾಹಿ ಮುಗಿದಂತೆ, ಕೀರ್ತಿ ಇಲ್ಲದೇ ಇದ್ರೆ ಈ ಸೀರಿಯಲ್ ಝೀರೋ ಎಂದು ಹಲವರು ಕೀರ್ತಿ ಪಾತ್ರದ ಮೇಲಿನ ಒಲವು ವ್ಯಕ್ತಪಡಿಸಿದ್ದಾರೆ.
ಇನ್ನೂ ಒಬ್ಬರು ಕೀರ್ತಿ ಪಾತ್ರ ಮಾಡುತ್ತಿರುವ ತನ್ವಿ ರಾವ್ (Tanvi Rao) ಕನ್ನಡ ಕಿರುತೆರೆಯ ಅತ್ಯುತ್ತಮ ನಟಿ. ಈ ಧಾರಾವಾಹಿಯಲ್ಲಿ ಅವರು ಅನೇಕ ಶೇಡ್ ಗಳಲ್ಲಿ ನಟಿಸಿದ್ದಾರೆ. ಅವರು ಮಾಡರ್ನ್ ಗರ್ಲ್, ಸಾಂಪ್ರದಾಯಿಕ ಹುಡುಗಿ, ಅಳುವುದು, ನಗುವುದು, ಪ್ರೀತಿಸುವುದು, ಕಾಳಜಿ ವಹಿಸುವುದು, ಮಗಳು, ಪ್ರೇಮಿ, ಭಾವನಾತ್ಮಕ, ಒರಟು, ಮೃದು, ಖಳನಾಯಕಿ, ನೃತ್ಯಗಾರ್ತಿ ಮತ್ತು ಇನ್ನೂ ಅನೇಕರಾಗಿ ನಟಿಸಿದ್ದಾರೆ. ಪರಕಾಯ ಪ್ರವೇಶದೊಂದಿಗೆ ಅವರು ಎಲ್ಲಾ ಶೇಡ್ ಗಳ ಪಾತ್ರಗಳನ್ನು ಪರಿಪೂರ್ಣವಾಗಿ ನಿರ್ವಹಿಸಿದರು. ಅವರು ತಮ್ಮ ಅದ್ಭುತ ನೈಸರ್ಗಿಕ ನಟನೆಗಾಗಿ ಎಲ್ಲಾ ಪ್ರಶಸ್ತಿಗಳು ಮತ್ತು ಪ್ರಶಂಸೆಗಳಿಗೆ ಅರ್ಹರಾಗಿದ್ದಾರೆ ಎಂದಿದ್ದಾರೆ.