ನಿಮ್ಮ ನೆಚ್ಚಿನ ಕಿರುತೆರೆ ತಾರೆಯರ ವರಮಹಾಲಕ್ಷ್ಮಿ ಸಂಭ್ರಮ ಹೀಗಿತ್ತು… ನಿಮ್ಮ ಮನೆಯಲ್ಲಿ ಹಬ್ಬ ಹೇಗಾಯ್ತು?

First Published | Aug 16, 2024, 3:41 PM IST

ರಾಜ್ಯಾದ್ಯಂತ ವರಮಹಾಲಕ್ಷ್ಮೀ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಕನ್ನಡ ಕಿರುತೆರೆಯ  ನಟಿಯರಾದ ಅನುಪಮಾ ಗೌಡ, ಮೋಕ್ಷಿತಾ ಪೈ, ಪ್ರಕೃತಿ ಪ್ರಸಾದ್, ಸಾರಾ ಅಣ್ಣಯ್ಯ ಸೇರಿದಂತೆ ಹಲವರು ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ನಿಮ್ಮ ನೆಚ್ಚಿನ ಸೀರಿಯಲ್ ತಾರೆಯರು ಹಬ್ಬಕ್ಕೆ ಹೇಗೆ ತಯಾರಾಗಿದ್ರು ನೀವೂ ನೋಡಿ. 
 

ಇಂದು ಮಹಿಳೆಯರಿಗೆ ಸಂಭ್ರಮದ ಹಬ್ಬ. ರಾಜ್ಯಾದ್ಯಂತ ಮನೆ ಮನೆಯಲ್ಲೂ ವರಮಹಾಲಕ್ಷ್ಮೀ ದೇವಿಯನ್ನು ಅಲಂಕೃತಗೊಳಿಸಿ, ಸಂಭ್ರಮದಿಂದ ಹಬ್ಬ ಆಚರಿಸ್ತಾರೆ. ನಿಮ್ಮ ಮೆಚ್ಚಿನ ಸೀರಿಯಲ್ ತಾರೆಯರೂ (serial actresses) ಕೂಡ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದು ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೇಗಿತ್ತು ಅವರ ಹಬ್ಬದ ಸಂಭ್ರಮ ನೋಡೋಣ. 
 

ಮೋಕ್ಷಿತಾ ಪೈ : ಪಾರು ಸೀರಿಯಲ್ ಖ್ಯಾತಿಯ ಮೋಕ್ಷಿತಾ ಪೈ (Mokshitha Pai) ತಮ್ಮ ಮನೆಯಲ್ಲಿ ಲಕ್ಷ್ಮಿಯನ್ನು ಕೂರಿಸಿ, ಅಮ್ಮನ ಜೊತೆ ಹಬ್ಬ ಆಚರಿಸಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನೇರಳೆ ಬಣ್ಣದ ಸೀರೆ ಧರಿಸಿರುವ ಮೋಕ್ಷಿತಾ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಎಂದು ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. 
 

Tap to resize

ಸಂಜನಾ ಬುರ್ಲಿ :  ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸಂಜನಾ (Sanjana Burli), ನೇರಳ ಬಣ್ಣದ ಸೀರೆಯುಟ್ಟು, ಅದಕ್ಕೆ ಬಿಳಿ ಬಣ್ಣದ ಕಾಂಟ್ರಾಸ್ಟ್ ಬ್ಲೌಸ್ ಧರಿಸಿದ್ದು, ಅಪ್ಸರೆಯಂತೆ ಕಾಣಿಸ್ತಿದ್ದಾರೆ. ನಟಿ ತಮ್ಮ ಫೋಟೊಗಳ ಜೊತೆಗೆ ವರಮಹಾಲಕ್ಷ್ಮಿ ದೇವಿ ನಮ್ಮೆಲ್ಲರ ಮೇಲೆ ಅಷ್ಟಲಕ್ಷ್ಮಿಯ ಎಲ್ಲಾ ಕೃಪೆ ಇಡಲಿ ಎಂದು ಬರೆದುಕೊಂಡಿದ್ದಾರೆ. 

ಅನುಪಮಾ ಗೌಡ : ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಪಮಾ ಗೌಡ (Anupama Gowda) ಸಾಂಪ್ರಾದಾಯಿಕ ಉಡುಗೆ ಧರಿಸಿ, ಸುಖ, ಶಾಂತಿ, ಸಂಪತ್ತು ಹಾಗೂ ಐಶ್ವರ್ಯ ವೃದ್ಧಿಸಲಿ ಎಂದು ಆಶಿಸುತ್ತಾ , ಸಮಸ್ತ ಜನರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಶುಭ ಕೋರಿದ್ದಾರೆ. 

ದಿಯಾ ಪಾಲಕ್ಕಲ್ : ಬ್ರಹ್ಮಗಂಟು ಧಾರಾವಾಹಿಯಲ್ಲಿ ನಾಯಕಿ ದೀಪಾ ಆಗಿ ನಟಿಸುತ್ತಿರುವ ದಿಯಾ ಪಾಲಕ್ಕಲ್ ಕೆಂಪು ಬಣ್ಣದ ಸೀರೆಯುಟ್ಟು, ಅದರೊಂದಿಗೆ ಜ್ಯುವೆಲ್ಲರಿ ಧರಿಸಿ ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. 
 

ಮಲೈಕಾ ವಸುಪಾಲ್ : ವಿಭಿನ್ನ ಡಿಸೈನರ್ ಅವರ ಸುಂದರವಾದ ರೇಷ್ಮೆ ಸೀರೆಯುಟ್ಟಿರುವ ಹಿಟ್ಲರ್ ಕಲ್ಯಾಣದ ಚೆಲುವೆ ಮಲೈಕಾ ವಸುಪಾಲ್, ಅದಕ್ಕೆ ಮ್ಯಾಚ್ ಆಗುವಂತಹ ಕೆಂಪು ಬಣ್ಣದ ಶೋಲ್ಡರ್ ಲೆಸ್ ಬ್ಲೌಸ್ ಧರಿಸಿದ್ದು,ಸರ್ವರಿಗೂ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಶುಭ ಕೋರಿದ್ದಾರೆ. 
 

ಸಾರಾ ಅಣ್ಣಯ್ಯ : ಅಮೃತಧಾರೆಯ ಬೋಲ್ಡ್ ಬ್ಯೂಟಿ ಸಾರಾ ಅಣ್ಣಯ್ಯ (Sara Annaiah) ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದಲ್ಲಿ ಪೂರ್ತಿ ಟ್ರೆಡಿಶನಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ತಿಳಿ ಗುಲಾಬಿ ಸೀರೆ, ವೈನ್ ಬಣ್ಣದ ಬ್ಲೌಸ್ ಧರಿಸಿರೋ ಫೋಟೊಗಳನ್ನ ಹಂಚಿಕೊಂಡಿದ್ದು, ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು ಎಂದಿದ್ದಾರೆ. 
 

ಚೈತ್ರಾ ವಾಸುದೇವನ್ : ನಟಿ ಹಾಗೂ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಚೈತ್ರಾ ವಾಸುದೇವನ್ ಲಂಗ ದಾವಣಿ ಧರಿಸಿ, ಅದರ ಜೊತೆಗೆ ಹೆವಿ ಆಂಟಿಕ್ ಜ್ಯುವೆಲ್ಲರಿ ಧರಿಸಿ ಹಬ್ಬವನ್ನು ಸಂಭ್ರಮಿಸಿದ್ದು ಹಬ್ಬ ಜೋರಾ ಎಂದು ಅಭಿಮಾನಿಗಳನ್ನ ಕೇಳಿದ್ದಾರೆ. 
 

ಪ್ರಕೃತಿ ಪ್ರಸಾದ್ : ಕನ್ನಡ, ತಮಿಳು, ಮಲಯಾಲಂ ಸೀರಿಯಲ್ ಗಳಲ್ಲಿ ಮಿಂಚಿ ಸದ್ಯ ಲಕ್ಷ್ಮೀ ನಿವಾಸದಲ್ಲಿ ನಟಿಸುತ್ತಿರುವ ಪ್ರಕೃತಿ ಪ್ರಸಾದ ಹಬ್ಬದ ಹಿನ್ನೆಲೆಯಲ್ಲಿ ಕೆಂಪು ಬಣ್ಣದ ಸೀರೆಯುಟ್ಟು, ಲಕ್ಷ್ಮಿ ದೇವಿ ನಿಮ್ಮ ಜೀವನದಲ್ಲಿ ಸುಖ, ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ತುಂಬಲಿ ಎಂದು ಹಾರೈಸಿ ದೀಪ ಬೆಳಗಿದ್ದಾರೆ.

Latest Videos

click me!