Bigg Boss ಸ್ಕ್ರಿಪ್ಟೆಡ್ಡಾ? ದೊಡ್ಮನೆಯ ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ಟ್ಯಾಟೂ ಆರ್ಟಿಸ್ಟ್​ ಮನೋಜ್​ ಕುಮಾರ್​

Published : Dec 14, 2025, 04:24 PM IST

ಬಿಗ್​ಬಾಸ್ ಶೋ ಸ್ಕ್ರಿಪ್ಟೆಡ್ ಎಂಬ ಆರೋಪ ಸಾಮಾನ್ಯವಾಗಿದ್ದು, ಈ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಲೇ ಇವೆ. ಇತ್ತೀಚೆಗೆ ಸ್ಪರ್ಧಿ ರಜತ್​ ಅವರಿಗೆ ಟ್ಯಾಟೂ ಹಾಕಲು ಮನೆಗೆ ಹೋಗಿದ್ದ ಕಲಾವಿದ ಮನೋಜ್ ಕುಮಾರ್, ತಮ್ಮ ಅನುಭವ ಹಂಚಿಕೊಂಡಿದ್ದಾರೆ.  

PREV
17
ಸ್ಕ್ರಿಪ್ಟೆಡ್​ ಷೋ

ಬಿಗ್​ಬಾಸ್​ (Bigg Boss) ಎಂದಾಕ್ಷಣ ಇದರಲ್ಲಿ ಎಲ್ಲವೂ ಸ್ಕ್ರಿಪ್ಟೆಡ್​ ಎನ್ನುವ ಮಾತು ಎಲ್ಲಾ ಭಾಷೆಗಳ ಷೋನಲ್ಲಿಯೂ ಇದೆ. ಹೀಗೆಯೇ ಮಾತನಾಡಬೇಕು ಎನ್ನುವುದರಿಂದ ಹಿಡಿದು, ಗಲಾಟೆ-ಗದ್ದಲ, ಲವ್​ ಹೀಗೆ ಅಲ್ಲಿ ನಡೆಯುವ ಪ್ರತಿಯೊಂದನ್ನೂ ಮೊದಲೇ ಹೇಳಿರುತ್ತಾರೆ ಎಂಬ ಆರೋಪ ಇದ್ದೇ ಇದೆ.

27
ಬಿಗ್​ಬಾಸ್​ ಮೇಲೆ ಆರೋಪ

ಇದಾಗಲೇ ಕೆಲವು ಭಾಷೆಗಳ ಸ್ಪರ್ಧಿಗಳು ಇದೊಂದು ರೀತಿಯಲ್ಲಿ ಸ್ಕ್ರಿಪ್ಟೆಡ್​ ಎಂಬುದಾಗಿ ಹೇಳಿದ್ದರೆ, ಮತ್ತೆ ಕೆಲವರು ಅದನ್ನು ನಿರಾಕರಿಸಿದ್ದಾರೆ. ಅಲ್ಲಿ ಎಲ್ಲವೂ ತಂತಾನೇಯಾಗಿಯೇ ನಡೆಯುವುದು, ಏನೂ ಮೊದಲೇ ಹೇಳಿಕೊಟ್ಟಿರುವುದಿಲ್ಲ ಎಂದಿದ್ದಾರೆ.

37
ಕೆಲವರು ಹೇಳೋದು ಬೇರೆ

ಇನ್ನು ಕೆಲವರು, ಅಲ್ಲಿ ಹೀಗೆಯೇ ಮಾಡಿ ಅನ್ನುವುದಿಲ್ಲ, ಬದಲಿಗೆ ಆ ರೀತಿಯ ವಾತಾವರಣವನ್ನು ಸೃಷ್ಟಿ ಮಾಡಲಾಗುತ್ತದೆ. ನೀವು ಗೆಲ್ಲಲೇಬೇಕಾದರೆ, ಗಲಾಟೆ, ಗದ್ದಲ, ಕಿರುಚಾಟ ಎಲ್ಲವೂ ಮಾಡಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿ ಮಾಡಲಾಗುತ್ತದೆ ಎಂದಿದ್ದಾರೆ.

47
ಟ್ಯಾಟೂ ಆರ್ಟಿಸ್ಟ್​

ಇದೀಗ ಟಾಸ್ಕ್​ ಒಂದರಲ್ಲಿ ಬಿಗ್​ಬಾಸ್​​ 12 ಸ್ಪರ್ಧಿ ರಜತ್​ ಅವರಿಗೆ ಟ್ಯಾಟೂ ಹಾಕಲು ಹೋಗಿದ್ದ ಟ್ಯಾಟೂ ಆರ್ಟಿಸ್ಟ್​ ಮನೋಜ್​ ಕುಮಾರ್​ ಈ ಬಗ್ಗೆ ಮಾತನಾಡಿದ್ದಾರೆ. ಮನೆಯೊಳಗೆ ಹೋದಾಗ ಕಂಡಿದ್ದೇನು ಎನ್ನುವ ಬಗ್ಗೆ ಅವರು ಬಾಸ್​ಟಿವಿಗೆ ನೀಡಿರುವ ಸಂದರ್ಶನದಲ್ಲಿ ರಿವೀಲ್​ ಮಾಡಿದ್ದಾರೆ.

57
ಷರತ್ತು ಹಾಕಿದ್ರು

ಬಿಗ್​ಬಾಸ್​ ಮನೆಗೆ ಹೋದಾಗ ನನಗೆ ತುಂಬಾ ಷರತ್ತು ಹಾಕಲಾಗಿತ್ತು. ಯಾರ ಜೊತೆಯೂ ಮಾತನಾಡುವಂತೆ ಇರಲಿಲ್ಲ. ಕಣ್ಣುಗಳನ್ನು ಕಟ್ಟಿ ಒಳಗಡೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ತುಂಬಾ ಸ್ಟ್ರಿಕ್ಟ್​ ಇದೆ ಎಂದು ಹೇಳಿದ್ದಾರೆ.

67
ಎಲ್ಲರ ಎದುರೇ...

ಎಲ್ಲರ ಎದುರೇ ನಾನು ಟ್ಯೂಟೂ ಹಾಕಬೇಕಿತ್ತು. ಕ್ಯಾಮೆರಾ ಎದುರು ಹಾಕುವಾಗ ಸ್ವಲ್ಪ ಭಯ ಆಯ್ತು. ರಜತ್​ ಅವರಿಗೆ ಇದಾಗಲೇ ಟ್ಯಾಟೂ ಹಾಕಿಸಿಕೊಂಡು ಗೊತ್ತಿರುವ ಕಾರಣ ನನಗೂ ಈಸಿಯಾಯಿತು. ಅವರು ತುಂಬಾ ಸಹಕರಿಸಿದರು ಎಂದರು.

77
ಸ್ಕ್ರಿಪ್ಟೆಡ್ಡಾ?

ಉಳಿದ ಸ್ಪರ್ಧಿಗಳು ನನ್ನ ಬಳಿ ಹಲವು ಪ್ರಶ್ನೆ ಕೇಳಿದ್ರು, ಆದರೆ ನಾನು ಮಾತನಾಡುವಂತೆ ಇರಲಿಲ್ಲ ಎಂದಿದ್ದಾರೆ. ಅದೇ ವೇಳೆ ಬಿಗ್​ಬಾಸ್​​ನಲ್ಲಿ ಇರುವಷ್ಟು ಸಮಯ ಅದೊಂದು ಸ್ಕ್ರಿಪ್ಟೆಡ್​ ಎಂದು ಅನ್ನಿಸಿತಾ ಕೇಳಿದಾಗ, ಖಂಡಿತ ಇಲ್ಲ. ಹಾಗೇನೂ ಇಲ್ಲ. ಅಲ್ಲಿ ಎಲ್ಲವೂ ಸಹಜವಾಗಿ ತನ್ನಿಂದ ತಾನೇ ನಡೆಯುತ್ತದೆ ಎಂದು ಹೇಳಿದ್ದಾರೆ.

Read more Photos on
click me!

Recommended Stories