ಗಂಡನ ಮೇಲೆ ಅನೈತಿ*ಕ ಸಂಬಂಧದ ಆರೋಪ ಮಾಡಿ ತಾವೇ ಮರು ಮದ್ವೆಯಾದ್ರಾ ಬಿಗ್‌ಬಾಸ್ ಒಟಿಟಿ ಸ್ಪರ್ಧಿ

Published : Feb 11, 2026, 05:40 PM IST

ಬಿಗ್ ಬಾಸ್ ಖ್ಯಾತಿಯ ವಡಾ ಪಾವ್ ಗರ್ಲ್ ಚಂದ್ರಿಕಾ ದೀಕ್ಷಿತ್, ತನ್ನ ಪತಿ ಯುಗಮ್ ಗೆರಾ ವಿರುದ್ಧ ಮೋಸದ ಆರೋಪ ಮಾಡಿದ ಬೆನ್ನಲ್ಲೇ, ತಾವೇ ನಿಗೂಢ ವ್ಯಕ್ತಿಯೊಂದಿಗೆ ಮದುವೆಯಾದಂತೆ ಕಾಣುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

PREV
16
ಮರು ಮದುವೆಯಾದ್ರಾ ವಡಾ ಪಾವ್ ಗರ್ಲ್

ಬಿಗ್ ಬಾಸ್ ಒಟಿಟಿ 3 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ವಡಾ ಪಾವ್ ಗರ್ಲ್ ಎಂದೇ ಖ್ಯಾತಿ ಪಡೆದ ಚಂದ್ರಿಕಾ ದೀಕ್ಷಿತ್ ಕೆಲ ದಿನಗಳ ಹಿಂದಷ್ಟೇ ತಮ್ಮ ಪತಿ ಯುಗಮ್ ಗೇರಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ತನ್ನ ಗಂಡ ಕೆಲ ಹುಡುಗಿಯರ ಜೊತೆ ಅನೈತಿಕ ಸಂಬಂಧವನ್ನು ಹೊಂದಿದ್ದಾನೆ. ತನಗೆ ಮೋಸ ಮಾಡಿದ್ದಾನೆ ಎಂದು ವಿಡಿಯೋ ಮಾಡುವ ಮೂಲಕ ಗೋಳು ಹೇಳಿಕೊಂಡಿದ್ದರು. ಆದರೆ ಈಗ ಅವರೇ ಮತ್ತೊಂದು ಮದುವೆಯಾದಂತೆ ಕಾಣುತ್ತಿದೆ.

26
ಗಂಡನ ವಿರುದ್ಧ ಅನೈತಿಕ ಸಂಬಂಧದ ಆರೋಪ ಮಾಡಿದ್ದ ಚಂದ್ರಿಕಾ

ಹೌದು ಹಿಂದಿ ಬಿಗ್ಬಾಸ್ ಒಟಿಟಿ-3ಯಲ್ಲಿ ಹಲವರ ಹೃದಯ ಗೆದ್ದ ವಡಾ ಪಾವ್‌ ಗರ್ಲ್‌, ತನ್ನ ಪತಿ ಯುಗಮ್ ಗೆರಾ ತನಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿರುವ ವೀಡಿಯೊಗಳು ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡ ನಂತರ ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಆದರೆ ಈಗ ಅವರೇ ಸ್ವತಃ ನಿಗೂಢ ವ್ಯಕ್ತಿಯೊಂದಿಗೆ ಮದುವೆಯಾದಂತೆ ಕಾಣುವ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆ ಫೋಟೋಗಳು ವೈರಲ್ ಆಗಿವೆ.

36
ಇನ್ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡ ಚಂದ್ರಿಕಾ

ಚಂದ್ರಿಕಾ ದೀಕ್ಷಿತ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮದುವೆ ಸಮಾರಂಭದಂತೆ ಕಾಣುವ ಚಿತ್ರಗಳನ್ನು ಹಂಚಿಕೊಂಡು ಕೊನೆಗೂ ಎಂದು ಬರೆದಿದ್ದಾರೆ. ಹಿಂದಿನ ವೀಡಿಯೊಗಳಲ್ಲಿ, ಅವರು ತಮ್ಮ ಪತಿ ಯುಗಮ್ ಗೆರಾ ಅವರು ತನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು. ಆದರೆ ಈಗ ಇವರೇ ನಿಗೂಢ ವ್ಯಕ್ತಿಯೊಂದಿಗೆ ವೀಡಿಯೊಗಳನ್ನು ಹಂಚಿಕೊಂಡು ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದ್ದಾರೆ. ಹೀಗಾಗಿ ಇದೊಂದು ಪಬ್ಲಿಸಿಟಿ ಗಿಮಿಕ್ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

46
ಗಂಡನ ವಿರುದ್ಧ ಆರೋಪ ಮಾಡಿದ್ದ ಚಂದ್ರಿಕಾ

ಇನ್ನೊಂದು ವಿಡಿಯೋದಲ್ಲಿ, ಚಂದ್ರಿಕಾ ತನ್ನ ಗಂಡನ ಬಗ್ಗೆ ಮಾತನಾಡುತ್ತಾ, ನೀನು ನಮ್ಮ ಜಗಳ ಮತ್ತು ವಾದಗಳನ್ನು ತೋರಿಸುತ್ತಿದ್ದೀಯಾ. ಕಳೆದ ಎರಡು ತಿಂಗಳಿನಿಂದ ನಾನು ಏನೆಲ್ಲಾ ಸಹಿಸಿಕೊಂಡಿದ್ದೇನೆಂದು ನಿನಗೆ ತಿಳಿದಿದೆಯೇ? ಎರಡು ತಿಂಗಳಿಗಿಂತ ಹೆಚ್ಚು ಕಾಲವಾಯಿತು. ನಾನು ಮಾತನಾಡುತ್ತಿರಲಿಲ್ಲ; ನಾನು ಮೌನವಾಗಿದ್ದೆ. ನಾನು ಅದನ್ನು ತೋರಿಸಬೇಕೇ? ಇದು ಸಾಕ್ಷಿ.

ಇದನ್ನೂ ಓದಿ: ಪೊಲೀಸ್ ಪರೀಕ್ಷೆಗೆ ಸಿದ್ಧಗೊಳ್ಳುತ್ತಿದ್ದವನ ಅಪಹರಿಸಿ ಮದುವೆ 

56
ಮದುವೆಯಾದಂತೆ ಫೋಟೋ ಹಂಚಿಕೊಂಡಿರುವ ಬಿಗ್‌ಬಾಸ್ ಒಟಿಟಿ ಸ್ಟಾರ್

ನಾನು ಕೆಲಸ ಮಾಡುತ್ತಿದ್ದೇನೆ, ಮಗುವನ್ನು ನೋಡಿಕೊಳ್ಳುತ್ತಿದ್ದೇನೆ, ಮನೆಯನ್ನು ನಿರ್ವಹಿಸುತ್ತಿದ್ದೇನೆ, ನಾನು ಎಲ್ಲವನ್ನೂ ನಿರ್ವಹಿಸುತ್ತಿದ್ದೇನೆ. ಮತ್ತು ನೀವು ಎದ್ದು ಇದನ್ನು ಮಾಡಲು ನಿರ್ಧರಿಸುತ್ತೀರಾ? ಯಾರನ್ನು ಕೇಳಿದ ನಂತರ? ದಿನವಿಡೀ ನಿನ್ನ ಸುತ್ತಲೂ ನನ್ನ ಗಂಡ, ನನ್ನ ಪ್ರೀತಿ, ನನ್ನ ಮನೆ, ನನ್ನ ಇದು, ನನ್ನ ಅದು ಎಂದು ಸುತ್ತುತ್ತಿರುವ ಆ ಹುಡುಗಿಯನ್ನು ಕೇಳಿಯೇ? ಎಂದು ಅವರು ಪ್ರಶ್ನಿಸಿದ್ದರು.

ಇದನ್ನೂ ಓದಿ: ಸಿಬಿಎಸ್‌ಇ 12ನೇ ತರಗತಿ ಮಕ್ಕಳ ಉತ್ತರ ಪತ್ರಿಕೆ ಡಿಜಿಟಲ್‌ ಮೂಲಕ ಮೌಲ್ಯಮಾಪನ : ಸಿಬಿಎಸ್ಇ ಬೋರ್ಡ್

66
ಪತ್ನಿಯ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಚಂದ್ರಿಕಾ ಪತಿ

ಅಲ್ಲದೇ ಚಂದ್ರಿಕಾ ತನ್ನ ಫೋನ್‌ನಲ್ಲಿ ಫೋಟೋಗಳನ್ನು ತೋರಿಸಿ, ಇದು ಕೇವಲ ಫೋಟೋಗಳಲ್ಲ. ನನ್ನ ಮನಸ್ಸನ್ನು ಹರಿದು ಹಾಕುತ್ತಿರುವ ಫೋಟೋಗಳಿಗಿಂತ ಕೆಟ್ಟದಾಗಿದೆ. ನನಗೆ ಕೆಲಸ ಮಾಡಲು ಸಾಧ್ಯವಿಲ್ಲ ನನಗೆ ಏನೂ ಮಾಡಲು ಸಾಧ್ಯವಿಲ್ಲ ಏಕೆ ಎಂದು ಪ್ರಶ್ನಿಸಿದ್ದರು. ಮತ್ತೊಂದೆಡೆ, ಯುಗಮ್ ಗೆರಾ ತನ್ನ ಪತ್ನಿ ಚಂದ್ರಿಕಾ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಆರೋಪಿಸಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇವರಲ್ಲಿ ಯಾರು ಸತ್ಯ ಹೇಳುತ್ತಿದ್ದಾರೆ ಯಾರೂ ಸುಳ್ಳು ಹೇಳುತ್ತಿದ್ದಾರೆ ಎಂಬುದನ್ನು ಕಾಲವೇ ನಿರ್ಣಯ ಮಾಡಬೇಕು. ಇತ್ತ ಚಂದ್ರಿಕಾ ದೀಕ್ಷಿತ್ ಒಟಿಟಿ3 ನಂತರ ಸಾಮಾಜಿಕ ಮಾಧ್ಯಮದಲ್ಲಿಯೂ ಸಹ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕುರ್ಚಿ ಮೇಲೆ ಮಲಗಿ ಗಾಢ ನಿದ್ದೆಗೆ ಜಾರಿದ ನಾಯಿ: ವೀಡಿಯೋ ವೈರಲ್ ಆಗ್ತಿದ್ದಂತೆ ಆಕ್ರೋಶ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories