ಬಿಗ್ ಬಾಸ್‌ನಲ್ಲಿ ಬಿಗ್ ಟ್ವಿಸ್ಟ್, 5 ಜನ ಅಲ್ಲ 9 ಜನ ವೈಲ್ಡ್‌ ಕಾರ್ಡ್ ಎಂಟ್ರಿ!, ಕನ್ನಡಿಗರು ಮತ್ತೆಷ್ಟು ಮಂದಿ?

First Published | Sep 27, 2024, 3:01 PM IST

ವೈಲ್ಡ್ ಕಾರ್ಡ್‌ನಲ್ಲಿ ಬಿಗ್ ಟ್ವಿಸ್ಟ್  ಇಟ್ಟಿದ್ದಾರೆ ಬಿಗ್‌ಬಾಸ್‌ . ಐದು ಜನ ವೈಲ್ಡ್ ಕಾರ್ಡ್ ಮೂಲಕ ಬರುತ್ತಾರೆ ಅಂತ ಪ್ರಚಾರ ನಡೀತಿತ್ತು. ಆದ್ರೆ ಈಗ ಅದೆಲ್ಲಾ ಸುಳ್ಳು ಮಾಡಿ ಬಿಗ್ ಬಾಸ್ ಶಾಕ್ ಕೊಟ್ಟಿದ್ದಾರೆ. ಬರೋಬ್ಬರಿ 9 ಜನ ಬರಲಿರುವ ಬಗ್ಗೆ ಹಿಂಟ್‌ ಕೊಟ್ಟಿದ್ದಾರೆ. ಇನ್ನೆಷ್ಟು ಜನ ಕನ್ನಡದವರು ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
 

ಬಿಗ್ ಬಾಸ್ ತೆಲುಗು 8ನೇ ಸೀಸನ್ ನಾಲ್ಕನೇ ವಾರ ಯಶಸ್ವಿಯಾಗಿ ಮುಂದುವರೆದಿದೆ. ಆದ್ರೆ ಈ ವಾರ ಅಷ್ಟಾಗಿ ಕಿಕ್ ಇಲ್ಲ. ನಾಮಿನೇಷನ್‌ನಲ್ಲಿ ರಂಪಾಟ ಮಾಡಿದ್ದ ಕಂಟೆಸ್ಟೆಂಟ್‌ಗಳು ಆಮೇಲೆ ಸೈಲೆಂಟ್ ಆಗಿಬಿಟ್ಟಿದ್ದಾರೆ. ಟಾಸ್ಕ್‌ಗಳನ್ನೆಲ್ಲಾ ಕೂಲ್ ಆಗಿ ಮಾಡ್ತಿದ್ದಾರೆ. ಅದೇ ರೀತಿ ಬಿಗ್ ಬಾಸ್ ಕೂಡ ಈ ವಾರ ಅಷ್ಟೇನೂ ಕಷ್ಟದ ಟಾಸ್ಕ್‌ಗಳನ್ನೇನೂ ಕೊಡ್ತಿಲ್ಲ. ಹೀಗಾಗಿ ಷೋ ಅಷ್ಟಾಗಿ ಇಂಟರೆಸ್ಟ್ ಆಗಿ ಸಾಗ್ತಿಲ್ಲ. ಆದ್ರೆ ಮನೆಯಲ್ಲಿ ಸೋನಿಯಾ ಸುತ್ತ ಲವ್ ಟ್ರ್ಯಾಕ್ ಮಾತ್ರ ಮುಂದುವರೆದಿದೆ. ಪೃಥ್ವಿರಾಜ್ ಜೊತೆ, ನಿಖಿಲ್ ಜೊತೆ ಆಕೆಯ ಆಟ ಮುಂದುವರೆದಿದೆ.

ಇನ್ನೊಂದೆಡೆ ಯಶ್ಮಿನಿ ಸೀನ್‌ಗೆ ಎಳೆದು ತರ್ತಿದ್ದಾರೆ. ವಿಷ್ಣು ಪ್ರಿಯಾ ಕೂಡ ಪೃಥ್ವಿ ಜೊತೆ ಆಟ ಆಡೋಕೆ ಟ್ರೈ ಮಾಡ್ತಿದ್ದಾಳೆ. ಇನ್ನೊಂದೆಡೆ ಎಲ್ಲರೂ ಸೇರಿ ನಾಗಮಣಿಕಂಠ ಅವರನ್ನ ಕೈಗೊಂಬೆಯಂತೆ ಆಡಿಸಿಕೊಳ್ಳುತ್ತಿದ್ದಾರೆ. ಅವರನ್ನೇ ಟಾರ್ಗೆಟ್ ಮಾಡ್ತಿದ್ದಾರೆ. ಇತ್ತೀಚಿನ 25ನೇ ದಿನದ ಸಂಚಿಕೆಯಲ್ಲೂ ಅದೇ ಆಯ್ತು. ಸರ್ವೈವಲ್ ಆಫ್ ದಿ ಫಿಟೆಸ್ಟ್‌ನಲ್ಲಿ ವೀಕ್ ಕಂಟೆಸ್ಟೆಂಟ್‌ನ ತಗಲಾಕಿಸಬೇಕು ಅಂತ ಬಿಗ್ ಬಾಸ್ ಟಾಸ್ಕ್ ಕೊಟ್ಟಾಗ ಶಕ್ತಿ ತಂಡ ಮಣಿಕಂಠ ಅವರನ್ನ ಪಕ್ಕಕ್ಕೆ ಇಡೋಣ ಅಂದುಕೊಂಡಿತ್ತು.

ಆದ್ರೆ ಅವರು ಯೋಚಿಸ್ತಿದ್ದಂತೆ ಅವರೇ ಮೊದಲು ತಪ್ಪು ಒಪ್ಪಿಕೊಂಡ್ರು ಅಂತ ಮಣಿಕಂಠ ಹೇಳಿದ್ದೇ ತಡ, ವಿಷಯ ದೊಡ್ಡದಾಗಿ ಸ್ಫೋಟಗೊಂಡು ಬಿಡ್ತು. ನೀನೇ ಹೇಳಿದ್ಯಾ ಅಂತ ಶಕ್ತಿ ತಂಡ, ಇಲ್ಲಾ ಸುಮ್ನೆ ಆರೋಪ ಮಾಡ್ತಿದ್ದಾರೆ ಅಂತ ಕಾಂತಾರ ತಂಡ ವಾದ ಮಾಡಿತು. ಆದ್ರೆ ಕಾಂತಾರ ತಂಡದಿಂದ ನಬೀಲ್‌ರನ್ನ ತೆಗೆದು ಹಾಕಿದ ಮೇಲೆ ಈ ಜಗಳ ಇನ್ನೂ ಜೋರಾಯ್ತು. 

Tap to resize

ಇದರಲ್ಲಿ ಎಲ್ಲರೂ ಸೇರಿ ಮಣಿಕಂಠ ಅವರನ್ನ ಟಾರ್ಗೆಟ್ ಮಾಡಿದ್ದರಿಂದ ಬೇಜಾರಾದ ಮಣಿಕಂಠ ಅತ್ತೇ ಬಿಟ್ಟರು. ಮೈಕ್‌ನ ಎಸೆದು ರೂಮಿಗೆ ಹೋಗಿ ಕೂತುಬಿಟ್ಟರು. ಸೋನಿಯಾ, ಯಶ್ಮಿ ಜೊತೆ ಜೋರಾಗಿಯೇ ವಾದ ಮಾಡಿದರು. ಆದ್ರೆ ಈ ಇಬ್ಬರೂ ಮಣಿಕಂಠ ಅವರನ್ನ ಚೆನ್ನಾಗಿಯೇ ಕಾರ್ನರ್ ಮಾಡ್ತಿದ್ದಾರೆ ಅಂತ ಅರ್ಥ ಆಗ್ತಿದೆ. ಆಮೇಲೆ ನಬೀಲ್ ಮುಂದೆ ತಮ್ಮ ನೋವನ್ನೆಲ್ಲಾ ಹೇಳಿಕೊಂಡರು ಮಣಿಕಂಠ.

ಮಾತಾಡೋಕೂ ಭಯ ಆಗ್ತಿದೆ ಅಂತ ಹೇಳಿದ್ರು. ನಬೀಲ್ ಕೊಟ್ಟ ಧೈರ್ಯ, ಎನರ್ಜಿಯಿಂದ ಮತ್ತೆ ಖುಷಿಯಾದರು. ಆದ್ರೆ ಒಟ್ಟಾರೆಯಾಗಿ ಎಲ್ಲರೂ ಮಣಿಕಂಠ ಅವರನ್ನ ಟಾರ್ಗೆಟ್ ಮಾಡೋದು ಅಂದ್ರೆ ಪರೋಕ್ಷವಾಗಿ ಅವರನ್ನ ಹೀರೋ ಮಾಡ್ತಿದ್ದಾರೆ ಅಂತಲೇ ಅರ್ಥ. ಅವರ ಸುತ್ತಲೇ ಕಂಟೆಂಟ್ ಸುತ್ತುತ್ತಿರೋದು ನೋಡಿದ್ರೆ ಅವರೇ ಹೀರೋ ಅನ್ನೋದ್ರಲ್ಲಿ ಅತಿಶಯೋಕ್ತಿ ಇಲ್ಲ. 

ಇನ್ನೊಂದೆಡೆ ಸರ್ವೈವಲ್ ಆಫ್ ದಿ ಫಿಟೆಸ್ಟ್ ಟಾಸ್ಕ್‌ನಲ್ಲಿ ಐದು ಸುತ್ತುಗಳು ನಡೆದವು. ಇದರಲ್ಲಿ ಒಂದು ಕಾಂತಾರ ತಂಡ, ಎರಡು ಶಕ್ತಿ ತಂಡ ಗೆದ್ದುಕೊಂಡಿತು. ಬಹುಮಾನದ ಮೊತ್ತವನ್ನು ಹೆಚ್ಚಿಸಿಕೊಂಡಿತು. ಈ ಆಟದ ಭಾಗವಾಗಿ ವೈಲ್ಡ್ ಕಾರ್ಡ್ ಎಂಟ್ರಿಗಳನ್ನು ಇವರು ತಡೆಯಬೇಕಿತ್ತು. 12 ವೈಲ್ಡ್ ಕಾರ್ಡ್ ಎಂಟ್ರಿಗಳಲ್ಲಿ ಎಷ್ಟು ಜನರನ್ನ ತಡೆಯುತ್ತಾರೋ ಅಷ್ಟು ಜನ ಸೇಫ್ ಆಗಿರುತ್ತಾರೆ ಅನ್ನೋದು ಬಿಗ್ ಬಾಸ್ ಆಟ. ಆದ್ರೆ ಇದರಲ್ಲಿ ಕೇವಲ ಮೂರು ಜನ  ಮಾತ್ರ ಗೆದ್ದರು.

ಮೂರು ವೈಲ್ಡ್ ಕಾರ್ಡ್ ಎಂಟ್ರಿಗಳನ್ನು ತಡೆದರು. ಈ ಲೆಕ್ಕದಲ್ಲಿ ವೈಲ್ಡ್ ಕಾರ್ಡ್ ಮೂಲಕ ಇನ್ನೂ ಒಂಬತ್ತು ಜನ ಬರುತ್ತಾರಾ ಅನ್ನೋ ಚರ್ಚೆ ಶುರುವಾಗಿದೆ. ಐದು ಜನರನ್ನ ವೈಲ್ಡ್ ಕಾರ್ಡ್ ಮೂಲಕ ಕರೆ ತರುತ್ತಿದ್ದಾರೆ, ಇದರಲ್ಲಿ ಹಳೆಯ ಕಂಟೆಸ್ಟೆಂಟ್‌ಗಳೇ ಇರ್ತಾರೆ ಅನ್ನೋ ಪ್ರಚಾರವಿತ್ತು. ಅವಿನಾಶ್, ರೋಹಿಣಿ, ಹರಿತೇಜ, ಕನ್ನಡತಿ ಶೋಭಾ ಶೆಟ್ಟಿ ಬರ್ತಿದ್ದಾರೆ ಅಂತ ಗೊತ್ತಾಗಿತ್ತು. ಆದ್ರೆ ಗುರುವಾರದ ಸಂಚಿಕೆಯಲ್ಲಿ ಬಿಗ್ ಬಾಸ್ ಹೇಳಿದ್ದನ್ನ ನೋಡಿದ್ರೆ ಒಂಬತ್ತು ಜನ ಬರುತ್ತಾರಾ ಅನ್ನೋ ಅನುಮಾನ ಶುರುವಾಗಿದೆ. ಮತ್ತೆ ಏನು ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕು.  ಈಗಾಗಲೇ 4 ಮಂದಿ ಕನ್ನಡಿಗರು ಇದ್ದಾರೆ. ಈ ನಡುವೆ 9 ಮಂದಿ ವೈಲ್ಡ್ ಕಾರ್ಡ್ ಎಂಟ್ರಿನಲ್ಲಿ ಎಷ್ಟು ಮಂದಿ ಕನ್ನಡಗಿರು ಇದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
 

ಬಿಗ್ ಬಾಸ್ ತೆಲುಗು 8ನೇ ಸೀಸನ್ ಸೆಪ್ಟೆಂಬರ್ 1 ರಿಂದ ಶುರುವಾಯ್ತು ಅನ್ನೋದು ಗೊತ್ತೇ ಇದೆ. ನಾಗಾರ್ಜುನ ಈ ಷೋನ ನಿರೂಪಕರು. ಇದರಲ್ಲಿ 14 ಜನ ಕಂಟೆಸ್ಟೆಂಟ್‌ಗಳು ಎಂಟ್ರಿ ಕೊಟ್ಟಿದ್ರು. ಬೇಬಿಕ್ಕ, ಶೇಖರ್ ಬಾಷಾ, ಅಭಯ್ ನವೀನ್, ನಿಖಿಲ್, ಯಶ್ಮಿ, ಆದಿತ್ಯ ಓಂ, ಪ್ರೇರಣ, ಮಣಿಕಂಠ, ಪೃಥ್ವಿರಾಜ್, ನಬೀಲ್, ನೈನಿಕಾ, ಕಿರ್ರಾಕ್ ಸೀತಾ, ವಿಷ್ಣು ಪ್ರಿಯಾ, ಸೋನಿಯಾ ಮನೆ ಸೇರಿದ್ರು.

ಇವರಲ್ಲಿ ಬೇಬಿಕ್ಕ, ಶೇಖರ್ ಬಾಷಾ, ಅಭಯ್ ಎಲಿಮಿನೇಟ್ ಆಗಿದ್ದಾರೆ. ಈಗ 11 ಜನ ಕಂಟೆಸ್ಟೆಂಟ್‌ಗಳು ಇದ್ದಾರೆ. ನಾಲ್ಕನೇ ವಾರ ಸೋನಿಯಾ, ಪ್ರೇರಣ, ಮಣಿಕಂಠ, ಆದಿತ್ಯ ಓಂ, ಪೃಥ್ವಿರಾಜ್, ವಿಷ್ಣು ಪ್ರಿಯಾ ನಾಮಿನೇಷನ್‌ನಲ್ಲಿದ್ದಾರೆ. ಇವರಲ್ಲಿ ಈ ವಾರ ಯಾರು ಹೊರಗೆ ಹೋಗ್ತಾರೆ ಅನ್ನೋದನ್ನ ಕಾದು ನೋಡಬೇಕು. 

Latest Videos

click me!