ಬೈಸೆಪ್ಸ್ ತೋರಿಸಿ… ನಾನು ಯಾರ್ಗೂ ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟ ನಟಿ, ನಿರೂಪಕಿ ಚೈತ್ರಾ ವಾಸುದೇವನ್

First Published | Sep 27, 2024, 2:23 PM IST

ನಟಿ, ನಿರೂಪಕಿ ಚೈತ್ರಾ ವಾಸುದೇವನ್ ಜಿಮ್ ನಲ್ಲಿ ಸಖತ್ ವರ್ಕ್ ಔಟ್ ಮಾಡಿ, ಬಾಡಿ ಬಿಲ್ಡರ್ ತರ ಪೋಸ್ ಕೊಟ್ಟಿದ್ದು, ಅಭಿಮಾನಿಗಳು ಶಾಖ್ ಆಗಿದ್ದಾರೆ. 

ನಟಿ ಹಾಗೂ ನಿರೂಪಕಿಯಾಗಿ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಚೈತ್ರಾ ವಾಸುದೇವನ್ (Chaitra Vasudevan) ಹೆಚ್ಚಾಗಿ ತಮ್ಮ ಸ್ಟೈಲಿಶ್ ಲುಕ್ ನಿಂದ ಸದ್ದು ಮಾಡ್ತಿರ್ತಾರೆ. ಯಾವಾಗ್ಲೂ ತಮ್ಮ ಟ್ರೆಡಿಶನಲ್ ಮತ್ತು ಮಾಡರ್ನ್ ಲುಕ್ ನಿಂದ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. 

ಹಲವು ವರ್ಷಗಳಿಂದ ಕಿರುತೆರೆಯಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಚೈತ್ರಾ, ಸದ್ಯ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ನಲ್ಲಿ ನಿರೂಪಕಿಯಾಗಿದ್ದಾರೆ. 

Tap to resize

ಬಿಗ್ ಬಾಸ್ ಮನೆಗೂ ಎಂಟ್ರಿ ಕೊಟ್ಟಿದ್ದ ಚೈತ್ರಾ, ತಮ್ಮ ವಯಕ್ತಿಕ ವಿಚಾರವಾಗಿ ಹೆಚ್ಚು ಸುದ್ದಿಯಲ್ಲಿದ್ದರು. ಸಣ್ಣ ವಯಸ್ಸಿನಲ್ಲೇ ಮದುವೆಯಾದ ಚೈತ್ರಾ, ಬಳಿಕ ಡೀವೋರ್ಸ್ ಪಡೆದು ಸದ್ಯ ಸಿಂಗಲ್ ಆಗಿದ್ದಾರೆ. ಸದ್ಯಕ್ಕಂತೂ ನಿರೂಪಣೆಯಲ್ಲಿ ಬ್ಯುಸಿಯಾಗಿದ್ದಾರೆ. 
 

ಬ್ಯುಸಿನೆಸ್ ಫ್ಯಾಮಿಲಿಯಿಂದ ಬಂದಿರುವ ಚೈತ್ರಾ ವಾಸುದೇವನ್ ಹೊಟೇಲ್ ಒಂದನ್ನು ನಡೆಸುತ್ತಿದ್ದಾರೆ, ಜೊತೆಗೆ ಈವೆಂಟ್ ಮ್ಯಾನೆಜ್ ಮೆಂಟ್ ಕೂಡ ನೋಡಿಕೊಳ್ಳುತ್ತಿದ್ದಾರೆ. ಮಿಲನಾ ನಾಗರಾಜ್, ನೇಹಾ ಗೌಡ ಮೊದಲಾವರ ಸೆಲೆಬ್ರಿಟಿಗಳ ಸೀಮಂತದ ಅರೇಂಜ್ ಮೆಂಟ್ ಪೂರ್ತಿ ಇವರ ಕಂಪನಿಯಿಂದವೇ ನಡೆದಿತ್ತು. 
 

ಇನ್ನು ಚೈತ್ರಾ ತಮ್ಮ ಫಿಟ್ನೆಸ್ (fitness)ಬಗ್ಗೆ ತುಂಬಾನೆ ಸ್ಟ್ರಿಕ್ಟ್ ಆಗಿದ್ದಾರೆ. ಒಳ್ಳೆಯ ಲೈಫ್ ಸ್ಟೈಲ್ ಹೊಂದಿರುವ ಚೈತ್ರಾ, ಡಯಟ್ ಮತ್ತು ಫಿಟ್ನೆಸ್ ಸರಿಯಾಗಿ ಮೈಂಟೇನ್ ಮಾಡುತ್ತಿದ್ದು, ಜಿಮ್ ಮಾಡುವ ಮೂಲಕ ದೇಹವನ್ನು ಸದೃಢವಾಗಿರಿಸಿಕೊಂಡಿದ್ದಾರೆ. 
 

ಇತ್ತೀಚೆಗೆ ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಜಿಮ್ ನ ಒಂದಿಷ್ಟು ಫೋಟೊಗಳನ್ನು ಅಪ್ ಲೋಡ್ ಮಾಡಿ, ತಮ್ಮ ಬೈಸೆಪ್ಸ್ ಗಳನ್ನು ಪ್ರದರ್ಶಿಸಿ, ಬಾಡಿ ಬಿಲ್ಡರ್ ನಲ್ಲಿ ಪೋಸ್ ಕೊಟ್ಟಿದ್ದರು. ಚೈತ್ರಾ ಕಟ್ಟುಮಸ್ತು ದೇಹವನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದು, ಫೈರ್ ಎಂದಿದ್ದಾರೆ. 
 

ಹೆಚ್ಚಾಗಿ ತಾವು ಸ್ಲಿಮ್ ಆಗಿ ಫಿಟ್ ಆಗಿರಬೇಕು ಎಂದು ಬಯಸುವ ಹುಡುಗಿಯರು ಮಸಲ್ಸ್ ಬಿಲ್ಡ್ ಮಾಡೋದು ಕಡಿಮೆಯೇ. ಆದರೆ ಚೈತ್ರಾ ಸಖತ್ ಫಿಟ್ ಆಗಿ ಬಾಡಿ ಬಿಲ್ಡ್ (body build) ಮಾಡುವ ಮೂಲಕ, ಹುಡುಗಿಯರು ಯಾರಿಗೂ ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಜೊತೆಗೆ ಜಿಮ್ ಮಾಡೋ ಹೆಣ್ಣುಮಕ್ಕಳಿಗೆ ಪ್ರೇರಣೆಯಾಗಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 
 

Latest Videos

click me!