Shravani Subramanya: ಧಾರಾವಾಹಿಯಲ್ಲಿ ಇದೀಗ ಹೊಸದಾಗಿ ಎಂಟ್ರಿ ಕೊಡ್ತಿದ್ದಾರೆ ಕಾಂತಮ್ಮನ ಗಂಡ. ಗಂಡ ಹೆಂಡತಿಯನ್ನು ನೋಡಿ ವೀಕ್ಷಕರಂತೂ ಫುಲ್ ಖುಷಿ ಆಗಿದ್ದಾರೆ. ಕಾಂತಮ್ಮನಿಂದಲೇ ಸೀರಿಯಲ್ ಇಷ್ಟೊಂದು ಮಜವಾಗಿರೋದು, ಅವರು ಇರೋದ್ರಿಂದಾನೆ ಸೀರಿಯಲ್ ನೋಡ್ತಿರೋದು ಅಂತಿದ್ದಾರೆ.
ಜೀ ಕನ್ನಡ ವಾಹಿನಿಯ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಇದೀಗ ಶ್ರಾವಣಿ ಮತ್ತು ಸುಬ್ರಹ್ಮಣ್ಯನ ಪ್ರೀತಿ ಒಬ್ಬರಿಗೊಬ್ಬರಿಗೂ ಗೊತ್ತಾಗುವ ದಾರಿಯಲ್ಲಿ ಕಥೆ ಸಾಗುತ್ತಿದೆ. ಆದರೆ ಅದು ಯಾವಾಗ ಇಬ್ಬರಿಗೂ ಪ್ರೀತಿ ಅರ್ಥ ಆಗುತ್ತೆ ಅನ್ನೋದು ಮಾತ್ರ ಗೊತ್ತಾಗ್ತಿಲ್ಲ. ಜನ ಮಾತ್ರ ಇವತ್ತು ಗೊತ್ತಾಗುತ್ತೆ, ನಾಳೆ ಗೊತ್ತಾಗುತ್ತೆ ಅಂತ ಕಾಯುತ್ತಲೇ ಇದ್ದಾರೆ.
26
ಕಾಂತಮ್ಮನೇ ಹೈಲೈಟ್
ಪ್ರತಿದಿನವೂ ಶ್ರಾವಣಿ-ಸುಬ್ರಹ್ಮಣ್ಯ ಪ್ರೀತಿ ರಿವೀಲ್ ಆಗುತ್ತಾ ಎಂದು ಕಾದು ಕಾದು ಬೇಜಾರಾಗಿರೋ ಜನರಿಗೆ ಸೀರಿಯಲ್ ನ ನಿಜವಾದ ಹೈಲೈಟ್ ಅಂದ್ರೆ ಅದು ಕಾಂತಮ್ಮ. ಸೀರಿಯಲ್ ಆರಂಭವಾದಂದಿನಿಂದ ಹಿಡಿದು, ಇಲ್ಲಿವರೆಗೆ ಕಾಂತಮ್ಮನ ಪಾತ್ರ ಸಾಗುತ್ತಿರುವ ರೀತಿ ಮಾತ್ರ ಸೂಪರ್ ಎಂಟರ್ಟೈನಿಂಗ್ ಆಗಿದೆ.
36
ಕಾಂತಮ್ಮನ ಪಂಚಿಂಗ್ ಡೈಲಾಗ್
ಕಾಂತಮ್ಮನದು ಕಾಮಿಡಿ ಪಾತ್ರ, ಯಾವುದೇ ಸೀರಿಯಸ್ ಸಿಚುವೇಷನ್ ಇರಲಿ, ಕಾಮಿಡಿ ಇರಲಿ, ಕಾಂತಮ್ಮನ ಪಂಚಿಂಗ್ ಡೈಲಾಗ್ ಗೆ ವೀಕ್ಷಕರು ಫಿದಾ ಆಗಿದ್ದಾರೆ. ಕಾಂತಮ್ಮ ಇದ್ದರೆ, ಅಲ್ಲಿ ಕಾಮಿಡಿಗೆ ಕೊರತೆಯೇ ಇಲ್ಲ ಎನ್ನುತ್ತಿದ್ದಾರೆ ಜನ.
ಈ ಹಿಂದೆ ಕಾಂತಮ್ಮನ ಜೊತೆಗೆ ಮಗ ಸುಂದ್ರ ಮನರಂಜನೆ ನೀಡುತ್ತಿದ್ದರು. ಇದೀಗ ಇಲ್ಲಿವರೆಗೆ ಪತ್ತೆಯೇ ಇಲ್ಲದ ಕಾಂತಮ್ಮನ ಯಜಮಾನ್ರು ಇದೀಗ ಎಂಟ್ರಿ ಕೊಟ್ಟಿದ್ದಾರೆ. ಬಂದರೋ, ಬಂದರೋ ಭಾವ ಬಂದರೋ ಹಾಡಿಗೆ ಕಾಂತಮ್ಮನ ಗಂಡನ ಎಂಟ್ರಿಯಾಗಿದೆ.
56
ಲವ್ ಯು ಕಾಂತ
ತಮ್ಮ ಪ್ರಾಣಕಾಂತ ಸೂಟ್ ಬೂಟು ಧರಿಸಿ ಬರುತ್ತಾರೆ ಎಂದು ಅಂದುಕೊಂಡ ಕಾಂತಮ್ಮಂಗೆ ಚಮಕ್ ಕೊಟ್ಟು ಪ್ರಾಣಕಾಂತ ಸನ್ಯಾಸಿಯಂತೆ ವೇಷ ತೊಟ್ಟು ಎಂಟ್ರಿ ಕೊಟ್ಟು ತಮ್ಮ ಪ್ರಾಣ ಕಾಂತೆಗೆ ಲವ್ ಯೂ ಎಂದಿದ್ದಾರೆ. ಕಾಂತಮ್ಮ ಕೂಡ ಲವ್ ಯೂ ಟೂ ಎಂದಿದ್ದಾರೆ.
66
ವೀಕ್ಷಕರು ಫುಲ್ ಹ್ಯಾಪಿ
ಕಾಂತಮ್ಮನ ಜೋಡಿಯನ್ನು ನೋಡಿ ವೀಕ್ಷಕರು ಸಖತ್ ಖುಷಿಪಟ್ಟಿದ್ದಾರೆ. ಕರೆಕ್ಟ್ ಆಗಿರೋ ಜೋಡಿನೇ ಹುಡುಕಿದ್ದೀರಾ, ಅಮ್ಮ, ಮಗ, ಅಪ್ಪ ಎಲ್ಲರೂ ಒಂದೇ ಥರ ಇದ್ದಾರೆ. ಸೂಪರ್ ಫ್ಯಾಮಿಲಿ. ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ ಓಡ್ತಾ ಇರೋದು ಕಾಂತಮ್ಮ ಅತ್ತೆಯಿಂದ ಸೂಪರ್ ಕಾಂತಮ್ಮ ಎಂದಿದ್ದಾರೆ. ಒಟ್ಟಲ್ಲಿ ಹೇಳೊದಾದರೆ ಈಗ ಕಾಂತಮ್ಮನ ಗಂಡ ಬಂದ ಮೇಲೆ ಎಲ್ಲರೂ ಒಟ್ಟಿಗೆ ಸೇರಿದ್ರೆ ಮನರಂಜನೆಗೆ ಭರ ಇಲ್ಲ ಎಂದಿದ್ದಾರೆ.