ಸೀತಾರಾಮ: ಮಧುಮಗ ಅಶೋಕ್ ರಿಯಲ್ ಲೈಫಲ್ಲಿ ಮದ್ವೆ ಆಗಿದ್ದಾರಾ? ನಿಮಗೆ ಗೊತ್ತಿರದ ವಿಷ್ಯಗಳು!

Published : Apr 20, 2024, 06:10 PM IST

ಸೀತಾರಾಮ ಸೀರಿಯಲ್‌ನ ಹೊಸ ಮಧುಮಗ, ಹಾಗೂ ಸಿಕ್ಕಿದ್ರೆ ಇಂಥದ್ದೇ ಗಂಡ ಸಿಗಬೇಕು ಎನ್ನುವಷ್ಟು ಒಳ್ಳೆಯವರಾಗಿರುವ ಅಶೋಕ್ ರಿಯಲ್ ಲೈಫಲ್ಲಿ ಮದ್ವೆ ಆಗಿದ್ದಾರಾ?    

PREV
17
ಸೀತಾರಾಮ: ಮಧುಮಗ ಅಶೋಕ್ ರಿಯಲ್ ಲೈಫಲ್ಲಿ ಮದ್ವೆ ಆಗಿದ್ದಾರಾ? ನಿಮಗೆ ಗೊತ್ತಿರದ ವಿಷ್ಯಗಳು!

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಹಲವು ಸೀರಿಯಲ್ ಗಳಲ್ಲಿ ಸೀತಾ ರಾಮ (Seetha Rama) ಸೀರಿಯಲ್ ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪ್ರತಿಯೊಂದು ಪಾತ್ರವೂ ಜನರಿಗೆ ಹಿಡಿಸಿದ್ದು, ಅದರಲ್ಲೂ ರಾಮನ ಬೆಸ್ಟ್ ಫ್ರೆಂಡ್, ಪ್ರಿಯಾಳ ಲವ್ ಅಶೋಕ್ ಪಾತ್ರವಂತೂ ಜನರ ಫೇವರಿಟ್. 
 

27

ಅಶೋಕ್ ಪಾತ್ರದಲ್ಲಿ ನಟಿಸ್ತಿರೋರು ಅಶೋಕ್ ಶರ್ಮಾ (Ashok Sharma). ಹಲವಾರು ಸೀರಿಯಲ್, ಸಿನಿಮಾಗಳಲ್ಲಿ ಬಹಳ ವರ್ಷಗಳಿಂದ ಗುರುತಿಸಿಕೊಂಡಿರುವ ಅಶೋಕ್, ಸದ್ಯ ಸೀತಾರಾಮದ ಅಶೋಕ್ ಪಾತ್ರದ ಮೂಲಕ ಕನ್ನಡದ ಮನೆಮನಗಳಿಗೆ ತಲುಪಿದ್ದಾರೆ.
 

37

ಅಶೋಕ್ ಒಬ್ಬ ಅದ್ಭುತ ನಟ ಅನ್ನೋದನ್ನು ನಾವು ಈಗಾಗಲೇ ನೋಡಿದ್ದೇವೆ, ಅದರ ಜೊತೆಗೆ ಇವರೊಬ್ಬ ಸಿಂಗರ್ ಕೂಡ ಹೌದು. ಹಲವಾರು ಆಕ್ರೆಸ್ಟ್ರಾ ಕಾರ್ಯಕ್ರಮಗಳಿಗೆ ಹಾಡಿದ್ದ ಅಶೋಕ್, ಕನ್ನಡ ಸಿನಿಮಾಗಳಿಗೂ ಹಾಡಿದ್ದಾರೆ. ಅಲ್ಲದೇ ಭಾರಿ ವೈರಲ್ ಆಗಿದ್ದ ಜಿಂಗ್ ಚಿಕ, ಜಿಂಗ್ ಚಿಕಾ ಹಾಡನ್ನು ಹಾಡಿದ್ದು ಕೂಡ ಇದೇ ಅಶೋಕ್. 
 

47

ಇಲೆಕ್ಟ್ರಾನಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಶೋಕ್, ಬಳಿಕ ಹಣಕ್ಕಾಗಿ ಆಕ್ರೆಸ್ಟ್ರಾ ಗಾಯಕರಾದರು, ಬಳಿಕ ಕೀಬೋರ್ಡ್ ಕಲಿತು, ಮಕ್ಕಳಿಗೆ ಹೇಳಿಯೂ ಕೊಡುತ್ತಿದ್ದರು, ಅದಾದ ಬಳಿಕ ನಿರೂಪಕರಾಗಿಯೂ ಅಶೋಕ್ ಗುರುತಿಸಿಕೊಂಡಿದ್ದಾರೆ. ಸುವರ್ಣ, ರಾಜ್ ಮ್ಯೂಸಿಕ್ ನಲ್ಲಿ ಕಾರ್ಯಕ್ರಮಗಳ ನಿರೂಪಣೆ ಮಾಡಿದ ಅನುಭವ ಕೂಡ ಇವರಿಗಿದೆ. 
 

57

ರಾಕಿಂಗ್ ಸ್ಟಾರ್ ಯಶ್ ಅವರ ಖಾಸಾ ದೋಸ್ತ್ ಆಗಿರುವ ಅಶೋಕ್ ಶರ್ಮಾ, ಇವರಿಬ್ಬರ ಸ್ನೇಹ 20 ವರ್ಷಗಳಷ್ಟು ಹಳೆಯದ್ದೆಂದು ಹೇಳುತ್ತಾರೆ. ಯಶ್ ಅಭಿನಯದ ಮಿ, ಆಂಡ್ ಮಿಸಸ್ ರಾಮಾಚಾರಿಯಿಂದ ಹಿಡಿದು ಕೆಜಿಎಫ್ ವರೆಗೂ ಹಲವು ಸಿನಿಮಾಗಳಲ್ಲಿ ಸಹ ಅಶೋಕ್ ನಟಿಸಿದ್ದಾರೆ.
 

67

ಅವಲಕ್ಕಿ ಪವಲಕ್ಕಿ, ವಾತ್ಸಲ್ಯ, SSLC ನನ್ ಮಕ್ಕಳು, ಮರಳಿ ಮನಸಾಗಿದೆ ಸೇರಿ ಹಲವು ಸೀರಿಯಲ್ ಗಳಲ್ಲಿ ನಟಿಸಿರುವ ಅಶೋಕ್ ಗೆ ಭರ್ಜರಿ ಜನಪ್ರಿಯತೆ ತಂದುಕೊಟ್ಟಿದ್ದು ಸೀತಾ ರಾಮ ಸೀರಿಯಲ್ ನ ಅಶೋಕ್ ಪಾತ್ರ. ಒಬ್ಬ ಬೆಸ್ಟ್ ಫ್ರೆಂಡ್ ಹೇಗಿರಬೇಕು? ಒಳ್ಳೆಯ ಗಂಡ ಹೇಗಿರಬೇಕು, ಅಣ್ಣನಾದವನು ಹೇಗಿರಬೇಕು ಅನ್ನೋದನ್ನು ಅದ್ಭುತವಾಗಿ ವೀಕ್ಷಕರಿಗೆ ತಿಳಿಸಿಕೊಟ್ಟಿತ್ತು. ಹಾಗಾಗಿಯೇ ಈ ಪಾತ್ರ ವೀಕ್ಷಕರಿಗೆ ಅಚ್ಚು ಮೆಚ್ಚು. 
 

77

ಸೀತಾರಾಮ ಸೀರಿಯಲ್ ನಲ್ಲಿ ಈಗಷ್ಟೇ ಪ್ರೀತಿಸಿದ ಹುಡುಗಿ ಪ್ರಿಯಾ ಜೊತೆ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಶೋಕ್ ಗೆ ನಿಜಜೀವನದಲ್ಲಿ ಮದುವೆ ಆಗಿದ್ಯಾ? ಈ ಬಗ್ಗೆ ಹೆಚ್ಚಿನ ಜನ ಪ್ರಶ್ನೆ ಕೇಳುತ್ತಲೇ ಇರ್ತಾರೆ. ಕೆಲವು ಮೂಲಗಳ ಪ್ರಕಾರ ಅಶೋಕ್ ಗೆ ಈಗಾಗಲೇ ಮದುವೆ ಆಗಿದೆ ಎನ್ನಲಾಗುತ್ತಿದೆ. ಆದರೆ ಅಶೋಕ್ ಅವರು ಇದುವರೆಗೂ ಆ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ಅವರ ಸೋಶಿಯಲ್ ಮೀಡಿಯಾದಲ್ಲೂ (social media) ಮದುವೆಯಾಗಿರೋ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಹಾಗಾಗಿ ಅಶೋಕ್ ಶರ್ಮಾ ಅವರೇ ತಾವು ಸಿಂಗಲ್ ಹೌದೋ ಅಲ್ವಾ ಅನ್ನೋದನ್ನು ಹೇಳಬೇಕು. 
 

Read more Photos on
click me!

Recommended Stories