ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬ್ರಹ್ಮಗಂಟು ಧಾರಾವಾಹಿಯನ್ನು (Brahmagantu) ಜನ ಈಗಾಗಲೇ ಮೆಚ್ಚಿಕೊಂಡಿದ್ದಾರೆ. ಸದ್ಯಕ್ಕಂತು ಚಿರು ಮತ್ತು ದೀಪಾ ಯಾವಾಗ ಒಂದಾಗ್ತಾರೆ? ಚಿರು ಯಾವಾಗ ದೀಪಾಳನ್ನು ಅರ್ಥ ಮಾಡಿಕೊಳ್ತಾನೆ ಅಂತಾನೆ ಕಾಯ್ತಿದ್ದಾರೆ ಜನ. ಇದೀಗ ಹಬ್ಬದ ಸೀಸನ್ ಆಗಿರೋದ್ರಿಂದ ವೀಕ್ಷಕರಿಗೂ ಸೀರಿಯಲ್ ನಿಂದ ಹಬ್ಬದ ಮನರಂಜನೆ ಸಿಗುತ್ತಿದೆ.
ರೂಪಾಳನ್ನು ಇಷ್ಟಪಟ್ಟು ಆಕೆಯನ್ನು ಮದುವೆಯಾಗಲು ಹೊರಟ ಚಿರು, ರೂಪಾ ಮದುವೆ ಮಂಟಪದಿಂದಲೇ ಓಡಿ ಹೋದ ಪರಿಣಾಮ ದೀಪಾಳನ್ನು ಮದುವೆಯಾಗುವ ಪರಿಸ್ಥಿತಿ ಬಂದಿತ್ತು. ಒಲ್ಲದ ಮನಸ್ಸಿನಿಂದ ರೂಪಾಳಿಗೆ ತಾಳಿ ಕಟ್ಟಿದ ಚಿರು, ಅತ್ತಿಗೆ ಆಕೆಯನ್ನು ಒಪ್ಪಿಕೊಳ್ಳಲಿಲ್ಲ ಎನ್ನುವ ಕಾರಣಕ್ಕೆ ಮನೆಯ ಒಳಗೂ ಸೇರಿಸದೇ, ಆಕೆ ಈಗ ಮನೆಯಲ್ಲಿದ್ದರೂ ಆಕೆಯಿಂದ ದೂರ ಉಳಿದುಕೊಂಡು, ಮಾತಿ ಮಾತಿಗೂ ಕೋಪ ಮಾಡ್ತಾರೆ ಚಿರು.
ಅಂತದ್ರಲ್ಲಿ ಇದೀಗ ಚಿರು ಮತ್ತು ದೀಪಾ ಜೊತೆಯಾಗಿ ಬೈಕ್ ಏರಿ, ಗಣಪತಿ ತರೋದಕ್ಕೆ ಹೊರಟಿದ್ದಾರೆ. ಗಣೇಶ ಮೂರ್ತಿ ಮಾಡುವಲ್ಲಿಗೆ ಹೋಗಿ, ದೀಪಾ ಮನೆಗೆ ಯಾವಾಗ್ಲೂ ಮಾಡಿರುವ ಮೂರ್ತಿ ತರಬಾರದು, ನಾವೇ ಕೈಯಾರೆ ಗಣೇಶನನ್ನು ಮಾಡಿ, ಅದನ್ನ ಮನೆಯಲ್ಲಿ ಕೂರಿಸಿ ಪೂಜೆ ಮಾಡಿ, ಮನೆಯಲ್ಲಿ ವಿಸರ್ಜನೆ ಮಾಡಿದ್ರೆ ಎಲ್ಲವೂ ಒಳ್ಳೆಯದಾಗುತ್ತೆ ಎಂದಿದ್ದಾಳೆ.
ಇದೀಗ ದೀಪಾ ಜೊತೆ ಸೇರಿ ಚಿರು ಕೂಡ ಮಣ್ಣಿನಿಂದ ಗಣೇಶ ಮೂರ್ತಿ ಮಾಡುತ್ತಿದ್ದಾರೆ. ಜೊತೆಗೆ ದೀಪಾ ಚಿರುಗೆ ಜೀವನದ ಪಾಠವನ್ನೂ ಸಹ ಮಾಡ್ತಿದ್ದಾರೆ. ಜೀವನದಲ್ಲಿ ಏನೇ ಬಂದ್ರೂ ಸ್ವೀಕರಿಸ್ಬೇಕು. ಎಷ್ಟೋ ಜನರಿಗೆ ತುಂಬಾನೆ ನೋವು ಇರುತ್ತೆ, ಅದನ್ನ ಮರೆತು ಮುಖದಲ್ಲಿ ನಗು ತಂದುಕೊಂಡು ಇರ್ತಾರೆ. ಅದೇ ರೀತಿ ನಾವು ನಗ್ತಾನೆ ಇರ್ಬೇಕು ಅಂತಿದ್ದಾಳೆ.
ದೀಪಾ ಮತ್ತು ಚಿರುವನ್ನು ಈ ರೀತಿಯಾಗಿ ಜೊತೆ ಜೊತೆಯಾಗಿ ಖುಷಿ ಖುಷಿಯಾಗಿ ನೋಡಿ ಕೆಲವು ವೀಕ್ಷಕರು ಖುಷಿಯಾಗಿದ್ರೆ ಹೆಚ್ಚಿನ ವೀಕ್ಷಕರು ಬೇರೆಯದ್ದೇ ಚಿಂತೆ ಮಾಡ್ತಿದ್ದಾರೆ. ಅವರ ಚಿಂತೆ ಏನಪ್ಪಾ ಅಂದ್ರೆ, ದೀಪಾ ಹೇರ್ ಸ್ಟೈಲ್, ದೀಪಾ ಡ್ರೆಸ್, ಒಟ್ಟಲ್ಲಿ ದೀಪಾ ಸ್ಟೈಲಿಂಗ್ (Deepa Style)ಬಗ್ಗೆನೆ ಚಿಂತೆ ಕಾಡ್ತಿದೆ. ಹಾಗಾಗಿ ಅವರು ಏನ್ ಹೇಳ್ತಿದ್ದಾರೆ ನೋಡಿ.
ಮೊದಲು ದೀಪಂದು ಡ್ರೆಸ್ ಮಾಡ್ಕೊಳೋದು ಚೇಂಜ್ ಮಾಡ್ಸಿ, ಮೊದಲಿಗೆ ದೀಪಾ ಹೇರ್ ಸ್ಟೈಲ್ ಚೆಂಜ್ (Change Deepa Hairstyle) ಮಾಡಿ. ಹಬ್ಬ ಬಗ್ಗೆ ಉಪದೇಶ ಕೊಡೋ ಬದಲು ಮದುವೆ ಆದ ಮೇಲೆ ಸೀರೆ ಹಾಕೊಂಡು ಒಂದು ಜಡೆ ಹಾಕಬೇಕು ಅನ್ನೋದು ದೀಪಾಗೆ ಗೊತ್ತೆ ಇಲ್ವ ಅಂತಾನೂ ಕೇಳಿದ್ದಾರೆ ಜನ.
ಅಷ್ಟೇ ಅಲ್ಲ, ದೀಪಾ ಗಣೇಶನ ಮೂರ್ತಿ ತರೋ ಬದಲು ನಾವೇ ಮಣ್ಣಲ್ಲಿ ಮಾಡೋದು ಒಳ್ಳೆಯದು ಎಂದು ಹೇಳಿರೋದಕ್ಕೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಮನೇಲಿ ಮಾಡಬೋದಿತ್ತು ಗಣೇಶಾನ ಇಲ್ಲಿ ಮಾರುಕಟ್ಟೆಯಲ್ಲಿ ಮಾಡೋ ಬಿಲ್ಡಪ್ ಬೇಕಾಗಿರಲಿಲ್ಲ. ಎಷ್ಟೋ ಜನ ಇದರಿಂದಾನೆ ಜೀವನ ನಡಿಸಿರುತ್ತಾರೆ. ನೀವೇ ಗಣೇಶನನ್ನು ಮಾಡಿ ಅವರ ಹೊಟ್ಟೆಪಾಡಿಗೆ ತಣ್ಣೀರು ಬಟ್ಟೆ ಹಾಕೋ ರೀತಿ ಸೀನ್ ತೋರಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.