ಇನ್ನೊಂದೆಡೆ ಬಿಗ್ ಬಾಸ್ ಸೀಸನ್ 11 ರಲ್ಲಿ ಭಾಗವಹಿಸಲಿರುವ ಸ್ಪರ್ಧಿಗಳ ಹೆಸರಿನ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ವರುಣ್ ಆರಾಧ್ಯ ಬರ್ತಿದ್ದಾರೆ, ತರುಣ್ ಚಂದ್ರ, ಮೋಕ್ಷಿತಾ ಪೈ, ಶರ್ಮಿತಾ ಗೌಡ, ಅಶ್ವಿನಿ ಗೌಡ ಮೊದಲಾದವರ ಹೆಸರು ಕೇಳಿ ಬರ್ತಿದೆ. ಆದರೆ ಇಲ್ಲಿವರೆಗೂ ಯಾರೆಲ್ಲಾ ಹೋಗ್ತಿದ್ದಾರೆ ಅನ್ನೋದು ಮಾತ್ರ ಸರಿಯಾಗಿ ತಿಳಿದು ಬಂದಿಲ್ಲ.