ಶೀಘ್ರದಲ್ಲೇ ಅಂತ್ಯವಾಗಲಿದೆಯಂತೆ ಈ 2 ಟಾಪ್ ಧಾರಾವಾಹಿ! ಇದೇನಾ ಕಾರಣ?

Published : Jul 31, 2026, 03:51 PM IST

Bigg Boss Kannada Season 12: ಕಿರುತೆರೆ ಪ್ರೇಕ್ಷಕರಿಗೆ ಅಚ್ಚರಿಯ ಸುದ್ದಿಯೊಂದು ಕಾದಿದೆ. ಕಲರ್ಸ್ ಕನ್ನಡ ವಾಹಿನಿಯ ಎರಡು ಜನಪ್ರಿಯ ಧಾರಾವಾಹಿಗಳು ಇದೇ ಆಗಸ್ಟ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿವೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

PREV
15
ಆ ಧಾರಾವಾಹಿಗಳು ಯಾವುವು?

ಆ ಧಾರಾವಾಹಿಗಳು ಯಾವುವು?
ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿ ಕಲರ್ಸ್ ಕನ್ನಡದಲ್ಲಿ ಸದ್ಯ ದೊಡ್ಡ ಬದಲಾವಣೆಯ ಗಾಳಿ ಬೀಸುತ್ತಿದೆ. ವಾಹಿನಿಯಿಂದ ಅಧಿಕೃತವಾಗಿ ಮಾಹಿತಿ ಹೊರಬೀಳದಿದ್ದರೂ ಎರಡು ಪ್ರಮುಖ ಮತ್ತು ಜನಪ್ರಿಯ ಧಾರಾವಾಹಿಗಳು ಅತಿ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿವೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾಗಾದರೆ ಆ ಧಾರಾವಾಹಿಗಳು ಯಾವುವು? ಇತ್ಯಾದಿ ಮಾಹಿತಿಗಾಗಿ ಮುಂದೆ ಓದಿ..

25
ವಿಭಿನ್ನ ಕಥೆ ಮತ್ತು ಗುಣಮಟ್ಟದ ಮೇಕಿಂಗ್‌

ವಿಭಿನ್ನ ಕಥೆ ಮತ್ತು ಗುಣಮಟ್ಟದ ಮೇಕಿಂಗ್‌
ಈ ಎರಡೂ ಧಾರಾವಾಹಿಗಳು ಇದೇ ಆಗಸ್ಟ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿವೆ ಎಂದು ಹೇಳಲಾಗುತ್ತಿದೆ. ಕಲರ್ಸ್ ಕನ್ನಡ ವಾಹಿನಿಯು ತನ್ನ ವಿಭಿನ್ನ ಕಥೆ ಮತ್ತು ಗುಣಮಟ್ಟದ ಮೇಕಿಂಗ್‌ನಿಂದಲೇ ಪ್ರಸಿದ್ಧಿಯಾಗಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ‘ಪ್ರೇಮ ಕಾವ್ಯ’ ಮತ್ತು ‘ಭಾರ್ಗವಿ LLB’ ಸೀರಿಯಲ್‌ಗಳು ಕೂಡ ಸಿನಿಮೀಯ ಸೊಗಡಿನಿಂದ ಪ್ರೇಕ್ಷಕರನ್ನು ಸೆಳೆದಿದ್ದವು. ಆದರೆ ಇದೀಗ ಅನಿರೀಕ್ಷಿತವಾಗಿ ಈ ಧಾರಾವಾಹಿಗಳು ಅಂತ್ಯವಾಗಬಹುದು ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಅಭಿಮಾನಿಗಳಿಗೆ ಬೇಸರ ತರಿಸಿದೆ.

35
ಎಲ್ಲರಿಗೂ ಕುತೂಹಲ

ಎಲ್ಲರಿಗೂ ಕುತೂಹಲ
ತೆಲುಗಿನ ‘ಗೀತಾ LLB’ ಧಾರಾವಾಹಿಯ ರಿಮೇಕ್ ಆಗಿರುವ ‘ಭಾರ್ಗವಿ LLB’ಯಲ್ಲಿ ರಾಧಾ ಭಗವತಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಹಿಂದೆ ಜೀ ಕನ್ನಡದ ‘ಅಮೃತಧಾರೆ’ಯಲ್ಲಿ ಮುಗ್ಧ ಹಳ್ಳಿ ಹುಡುಗಿ ‘ಮಲ್ಲಿ’ಯಾಗಿ ಮತ್ತು ‘ರಾಮಾಚಾರಿ’ಯಲ್ಲಿ ನಾಯಕನ ತಂಗಿ ಶೃತಿಯಾಗಿ ಮಿಂಚಿದ್ದ ರಾಧಾ, ಇಲ್ಲಿ ಗಂಭೀರವಾದ ಲಾಯರ್ ಪಾತ್ರದ ಮೂಲಕ ಸೈ ಎನಿಸಿಕೊಂಡಿದ್ದರು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ಸೀರಿಯಲ್ ಮುಕ್ತಾಯ ಹಂತಕ್ಕೆ ತಲುಪಿದೆ ಎಂದು ಹೇಳುತ್ತಿರುವುದು ಕುತೂಹಲ ಮೂಡಿಸಿದೆ.

45
ಯಾಕೆ ಮುಕ್ತಾಯವಾಗುತ್ತಿದೆ?

ಯಾಕೆ ಮುಕ್ತಾಯವಾಗುತ್ತಿದೆ?
ಇನ್ನು ರವೀನ್ ಕುಮಾರ್ ನಿರ್ದೇಶಿಸಿ, ನಿರ್ಮಿಸುತ್ತಿರುವ ‘ಪ್ರೇಮ ಕಾವ್ಯ’ದಲ್ಲಿ ದೊಡ್ಡ ತಾರಾಗಣವೇ ಇತ್ತು. ‘ಗಟ್ಟಿಮೇಳ’ ಖ್ಯಾತಿಯ ಪ್ರಿಯಾ ಜೆ. ಆಚಾರ್ (ಪ್ರೇಮ) ಮತ್ತು ‘ಮಿಥುನ ರಾಶಿ’ ಖ್ಯಾತಿಯ ವೈಷ್ಣವಿ (ಕಾವ್ಯ) ಪ್ರಮುಖ ಪಾತ್ರಗಳಲ್ಲಿದ್ದರು. ಇನ್ನು ನಾಯಕರಾಗಿ ‘ನಮ್ಮನೆ ಯುವರಾಣಿ’ಯ ರಾಘವೇಂದ್ರ ಹಾಗೂ ‘ಕೆಂಡಸಂಪಿಗೆ’ಯ ವಿಕಾಸ್ ನಟಿಸುತ್ತಿದ್ದರು. ಅಷ್ಟೂ ಜನಪ್ರಿಯ ಕಲಾವಿದರಿದ್ದರೂ ಈ ಧಾರಾವಾಹಿ ಯಾಕೆ ಮುಕ್ತಾಯವಾಗುತ್ತಿದೆ ಎಂಬ ಪ್ರಶ್ನೆ ಕಾಡುತ್ತಿದೆ.

55
ಬಿಗ್ ಬಾಸ್ ಎಫೆಕ್ಟ್?

ಬಿಗ್ ಬಾಸ್ ಎಫೆಕ್ಟ್?
ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಹರಡುತ್ತಿದ್ದಂತೆ ನೆಟ್ಟಿಗರು ತಮ್ಮದೇ ಆದ ವಿಶ್ಲೇಷಣೆಗಳನ್ನು ನೀಡುತ್ತಿದ್ದಾರೆ. ಬಹು ನಿರೀಕ್ಷಿತ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭವಾಗುವ ಹಿನ್ನೆಲೆಯಲ್ಲಿ ವಾಹಿನಿಯು ಸಮಯದ ಹೊಂದಾಣಿಕೆಗಾಗಿ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. "ಇಷ್ಟು ಬೇಗ ಈ ಧಾರಾವಾಹಿಗಳು ಮುಗಿಯುತ್ತವೆ ಎಂದು ಅಂದುಕೊಂಡಿರಲಿಲ್ಲ" ಎಂದು ಹಲವು ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ಹೊಸ ಕಥೆಗಳಿಗೆ ಜಾಗ ಮಾಡಿಕೊಡಲು ಈ ಎರಡೂ ಹಿಟ್ ಸೀರಿಯಲ್‌ಗಳು ತೆರೆಮರೆಗೆ ಸರಿಯುತ್ತಿವೆಯೇ ಎಂಬುದನ್ನು ವಾಹಿನಿಯೇ ಅಧಿಕೃತವಾಗಿ ತಿಳಿಸಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories