ಆಸೆ ಧಾರಾವಾಹಿಯಿಂದ ಸೂರ್ಯ ಔಟ್? ನಿನಾದ್ ಹರಿತ್ಸಾ ದಿಢೀರ್ ಬ್ರೇಕ್ ಹಿಂದಿನ ಅಸಲಿ ಕಾರಣವೇನು?

Pavna Das   | ANI
Published : Nov 14, 2026, 09:29 PM IST

Ninad Haritsa: ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಆಸೆ’. ಈ ಧಾರಾವಾಹಿಯಲ್ಲಿ ನಾಯಕ ಸೂರ್ಯ ಪಾತ್ರದಿಂದ ನಿನಾದ್ ಹರಿತ್ಸಾ ಬ್ರೇಕ್ ತೆಗೆದುಕೊಂಡಿದ್ದಾರೆ. ಈ ಬಗ್ಗೆ ನಟ ಕೊನೆಗೂ ಮೌನ ಮುರಿದಿದ್ದಾರೆ.

PREV
16
ಆಸೆ ಧಾರಾವಾಹಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ ‘ಆಸೆ’. ಈ ಧಾರಾವಾಹಿಯಲ್ಲಿ ಮೀನಾ ಹಾಗೂ ಸೂರ್ಯ ಜೋಡಿಯನ್ನು ಇಷ್ಟಪಡದೇ ಇರುವ ಜನರೇ ಇಲ್ಲ. ತಮ್ಮ ನೈಜ್ಯ ಅಭಿನಯದ ಮೂಲಕವೇ ಸೂರ್ಯ ಎಲ್ಲಾ ಇಮೋಶನ್ ಗಳನ್ನು ತೆರೆ ಮೇಲೆ ತೋರಿಸುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ.

26
ಸೂರ್ಯ ಪಾತ್ರದಲ್ಲಿ ನಿನಾದ್

ಸೂರ್ಯ ಪಾತ್ರದಲ್ಲಿ ನಟ ನಿನಾದ್ ಹರಿತ್ಸಾ ನಟಿಸುತ್ತಿದ್ದರು. ಈಗಾಗಲೇ ಆಸೆ ಧಾರಾವಾಹಿ 1000 ಕ್ಕೂ ಅಧಿಕ ಸಂಚಿಕೆಗಳನ್ನು ಮುಗಿಸಿದ್ದು, ಇಲ್ಲಿವರೆಗೆ ನಿನಾದ್ ಸೂರ್ಯ ಪಾತ್ರದ ಮೂಲಕ, ಮಿಡಲ್ ಕ್ಲಾಸ್ ಜನರ ಮನ ಗೆದ್ದಿದ್ದರು.

36
ಸೂರ್ಯ ಪಾತ್ರಕ್ಕೆ ಬ್ರೇಕ್

ಇದೀಗ ನಿನಾದ್ ಅವರು ಸೂರ್ಯ ಪಾತ್ರದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಧಾರಾವಾಹಿಯಲ್ಲಿ ಸೂರ್ಯ ಪಾತ್ರವೇ ಕಾಣಿಸುತ್ತಿಲ್ಲ. ಅವರು ದುಬೈಗೆ ಕೆಲಸಕ್ಕಾಗಿ ಹೋಗಿರುವಂತೆ ತೋರಿಸಲಾಗಿದೆ. ಹಾಗಾಗಿ ಅವರು ಧಾರಾವಾಹಿಯಿಂದ ಹೊರ ಬಂದಿದ್ದಾರೆಯೇ ಎನ್ನುವ ಸಂಶಯ ಮೂಡಿದೆ.

46
ಧಾರಾವಾಹಿಯಿಂದ ಹೊರ ಬಂದಿದ್ದೇಕೆ?

ಧಾರಾವಾಹಿಯಿಂದ ನಿನಾದ್ ಹೊರ ಬಂದಿರುವ ಕುರಿತು ಅವರು ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದ್ದು, ಧಾರಾವಾಹಿಯಿಂದ ಅವರು ಸಂಪೂರ್ಣವಾಗಿ ಹೊರ ಬಂದಿಲ್ಲ. ಬದಲಾಗಿ, ಸೂರ್ಯ ಪಾತ್ರದಿಂದ ನಿನಾದ್ ಶಾರ್ಟ್ ಅಂದರೆ ತಾತ್ಕಾಲಿಕ ಬ್ರೇಕ್ ತೆಗೆದುಕೊಂಡಿದ್ದಾರೆ.

56
ಕಾರಣ ಏನು?

ಯಾವುದೋ ಪ್ರಮುಖ ಕಾರಣಕ್ಕಾಗಿ ನಿನಾದ್ ಧಾರಾವಾಹಿಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಆದರೆ ಕಾರಣ ಏನು ಎಂಬುದನ್ನು ತಿಳಿಸಿಲ್ಲ. ಬದಲಾಗಿ ಆ ಬಗ್ಗೆ ಸಮಯ ಬಂದಾಗ ರಿವೀಲ್ ಮಾಡುತ್ತೇನೆ ಎಂದಿದ್ದಾರೆ ನಿನಾದ್. ಆದರೆ ಸದ್ಯಕ್ಕಂತೂ ಜನ ಸೂರ್ಯ ಪಾತ್ರವನ್ನು ಮಿಸ್ ಮಾಡುತ್ತಿದ್ದಾರೆ.

66
ಶೀಘ್ರದಲ್ಲಿ ಸೀರಿಯಲ್ ಗೆ ಕಂ ಬ್ಯಾಕ್

ಶೀಘ್ರದಲ್ಲೇ ಆಸೆ ಧಾರಾವಾಹಿಗೆ ನಿನಾದ್ ಕಂ ಬ್ಯಾಕ್ ಮಾಡುತ್ತಿರುವುದಾಗಿ ಸಹ ಹೇಳಿದ್ದಾರೆ. ಆದರೆ ಯಾವಾಗ ಮತ್ತೆ ಸೂರ್ಯನನ್ನು ನೋಡಬಹುದು ಎನ್ನುವ ಬಗ್ಗೆ ಮಾಹಿತಿ ಇಲ್ಲ. ಸದ್ಯಕ್ಕಂತೂ ಆಸೆ ಧಾರಾವಾಹಿಯಲ್ಲಿ ಮೀನಾ ಮುಂದೆ ನಿಂತು ಮನೆಯ ಸಮಸ್ಯೆಗಳನ್ನು ದೂರ ಮಾಡುತ್ತಿದ್ದಾಳೆ. ಸೂರ್ಯ ಮತ್ತೆ ಬಂದರೆ ಕಥೆಗೆ ಮತ್ತಷ್ಟು ಟ್ವಿಸ್ಟ್ ಸಿಗಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories