ಕಾಂಪೌಡ್‌ನ ಗ್ರಿಲ್‌ ಮೇಲೆ ಬಿದ್ದು ಹಳ್ಳಿ ಹೈದ ರಾಜೇಶ್ ಸಾವು; ಸತ್ಯ ಬಿಚ್ಚಿಟ್ಟ ಐಶು!

Published : Apr 19, 2024, 11:45 AM IST

 ರಾಜೇಶ್ ಸಾವಿಗೆ ಪದೇ ಪದೇ ಐಶ್ವರ್ಯರನ್ನು ಆರೋಪ ಮಾಡುತ್ತಿರುವ ನೆಟ್ಟಿಗರು. ನಿಜಕ್ಕೂ ಆಗಿದ್ದು ಏನೆಂದು ರಿವೀಲ್ ಮಾಡಿದ ನಟಿ...

PREV
19
ಕಾಂಪೌಡ್‌ನ ಗ್ರಿಲ್‌ ಮೇಲೆ ಬಿದ್ದು ಹಳ್ಳಿ ಹೈದ ರಾಜೇಶ್ ಸಾವು; ಸತ್ಯ ಬಿಚ್ಚಿಟ್ಟ ಐಶು!

ಕನ್ನಡ ಕಿರುತೆರೆ ಜನಪ್ರಿಯ ರಿಯಾಲಿಟಿ ಶೋ ಹಳ್ಳಿ ಹೈದಾ ಪ್ಯಾಟೆಗೆ ಬಂದ ಕಾರ್ಯಕ್ರಮಕ್ಕೆ ಕಾಡಿನ ಹುಡುಗ ರಾಜೇಶ್ ಸ್ಪರ್ಧಿಸಿದ್ದ. ಆತನಿಗೆ ಜೋಡಿಯಾಗಿದ್ದದ್ದು ನಟಿ ಐಶ್ವರ್ಯ. 

29

ಆರಂಭದಿಂದಲೂ ರಾಜೇಶ್‌ ಮಾನಸಿಕವಾಗಿ ಸರಿ ಇಲ್ಲ ಎಂದು ಆಗಾಗ ಮಾತುಗಳು ಕೇಳಿ ಬರುತ್ತಿತ್ತು. ಹೀಗಾಗಿ ಕಾರ್ಯಕ್ರಮದಲ್ಲೂ ಜಗಳ ಆಗುತ್ತಿತ್ತು. ಆದರೆ ಈ ಜೋಡಿ ವಿನ್ನರ್ ಟ್ರೋಫಿ ಪಡೆದರು. 

39

ಖುಷಿಯಾಗಿ ಯಶಸ್ಸಿನಲ್ಲಿ ತೇಲುತ್ತಿದ್ದ ರಾಜೇಶ್‌ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಕಾರಣ ಐಶ್ವರ್ಯ ಎಂದು ಈಗಲೂ ಅನೇಕರು ಮಾತನಾಡಿಕೊಳ್ಳುತ್ತಾರೆ. ಹೀಗಾಗಿ ಐಶು ಅಸಲಿ ಸತ್ಯ ಬಿಚ್ಚಿಟ್ಟರು. 

49

'ರಾಜೇಶ್ ತೀರಿಕೊಂಡ ಸಂದರ್ಭದಲ್ಲಿ ಮಾಧ್ಯಮದಿಂದ ನನಗೆ ಕರೆ ಬರುತ್ತೆ ರಾಜೇಶಾ ಬಿದ್ದು ಹೋಗಿದ್ದಾನೆ ಎಂದು. ನೋಡೋಕೆ ಸಣ್ಣ ಇದ್ರೂ ತುಂಬಾ ಗಟ್ಟಿಯಿದ್ದ. 

59

ಸಾಕಷ್ಟು ಜನ ಕರೆ ಮಾಡಿ ತೀರಿಕೊಂಡಿದ್ದಾನೆ ಎಂದು ಹೇಳುತ್ತಾರೆ ನಿಜ ಅಥವಾ ಸುಳ್ಳು ಎಂದು ಅರ್ಥ ಮಾಡಿಕೊಳ್ಳುವುದಕ್ಕೆ ಸಮಯ ತೆಗೆದುಕೊಂಡೆ. 

69

ಹಾಸ್ಪಿಟಲ್‌ನಲ್ಲಿ ರಾಜೇಶ್‌ ವಿಡಿಯೋ ನೋಡಿ ಶಾಕ್ ಆಯ್ತು, ನಮ್ಮ ಸಿನಿಮಾ ನಿರ್ದೇಶಕರ ರಾಜೇಶ್ ಊರಿಗೆ ಹೋಗಿದ್ದೆ. ಟ್ರೋಫಿ ಗೆದ್ದ ಕ್ಷಣ ಬಂದಿದ್ದ ಜನಕ್ಕಿಂತ ಡಬಲ್ ಜನ ಬಂದಿದ್ದರು' ಎಂದು ಕನ್ನಡ ಯುಟ್ಯೂಬ್ ಚಾನೆಲ್‌ವೊಂದರಲ್ಲಿ ಮಾತನಾಡಿದ್ದಾರೆ. 

79

 'ಸಾಕಷ್ಟು ಜನರು ನನಗೆ ಕೇಳುತ್ತಾರೆ ರಾಜೇಶ್ ಸೂಸೈಡ್ ಮಾಡಿಕೊಂಡಿದ್ದಕ್ಕೆ ನಾನು ಕಾರಣ ಅಲ್ಲ. ಬಳ್ಳೆಹಾಡಿ ಕಾಡಿನಿಂದ ಮೈಸೂರಿನಲ್ಲಿರುವ ಮನೆಗೆ ಶಿಫ್ಟ್‌ ಆಗಿದ್ದರು ಆಗಾಗ ನಾನು ಸಾಯುವೆ ಎಂದು ಪೋಷಕರಿಗೆ ಹೆದರಿಸುತ್ತಿದ್ದನಂತೆ. 

89

ಅವತ್ತು ಕೂಡ ಹೆದರಿಸಲು ಹೋಗಿದ್ದಾನೆ ಅಲ್ಲಿಂದ ಬಿದ್ದಿದ್ದರೂ ಕೈ ಕಾಲು ಮುರಿಯುತ್ತಿರಲಿಲ್ಲ ಆದರೆ ಹಿಂದಿನ ದಿನ ಮನೆ ಮಾಲೀಕರು ಕಾಂಪೌಂಡ್‌ಗೆ ಶಾರ್ಪಾಗಿರುವ ಗ್ರಿಲ್ ಹಾಕಿಸಿದ್ದಾರೆ ಅದರ ಮೇಲೆ ಬಿದ್ದ ತಕ್ಷಣ ಆ ಕಂಬಿ ಅವನ ಹೊಟ್ಟೆಗೆ ಚುಚ್ಚಿ ಅಗಲಿರುವುದು. 

99

ರಾಜೇಶ್ ಸಾವಿಗೆ ಯಾರೂ ಕಾರಣವಲ್ಲ. ನನಗೆ ತುಂಬಾ ಜನ ಪ್ರೀತಿ ಕೊಡುತ್ತಾರೆ ಅದಕ್ಕೆ ಚಿರಋಣಿಯಾಗಿರುತ್ತೀನಿ ಆದರೆ ಅನೇಕರು ರಾಜೇಶ್ ಸಾವಿಗೆ ನನ್ನ ಹೆಸರು ಎಳೆಯುತ್ತಾರೆ' ಎಂದು ಐಶ್ವರ್ಯ ಹೇಳಿದ್ದಾರೆ. 

Read more Photos on
click me!

Recommended Stories