ಇದ್ದಕ್ಕಿದ್ದಂತೆ ಹೆಚ್ಚಾದ ಧನುಶ್ರೀ ಫಾಲೋವರ್ಸ್‌; ಸ್ಯಾಮ್ ಜೊತೆ ಬ್ರೇಕಪ್ ಕಾರಣವೇ?

First Published | Apr 18, 2024, 3:44 PM IST

ಎಲ್ಲೋ ಸೈಲೆಂಟ್ ಆಗಿ ಬಿಟ್ರಾ ಧನುಶ್ರೀ...ಫೇಕ್ ಸಬ್ಸ್ಕ್ರೈಬರ್‌ಗಳ ಬಗ್ಗೆ ಕೊಟ್ಟ ಸ್ಪಷ್ಟನೆ ಇಲ್ಲಿದೆ....
 

ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಧನುಶ್ರೀ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದಾರೆ. ಇತ್ತೀಚಿಗೆ ಸ್ಯಾಮ್ ಸಮೀರ್ ಮತ್ತು ಧನುಶ್ರೀ ಬ್ರೇಕಪ್ ಅನ್ನೋ ವಿಚಾರ ಎಲ್ಲೆಡೆ ಚರ್ಚೆ ಆಗುತ್ತಿದೆ. 

ಈ ಬ್ರೇಕಪ್ ಗಾಸಿಪ್‌ಗಳ ನಡುವೆಯೂ ಧನುಶ್ರೀ ಸಣ್ಣಪುಟ್ಟ ವಿಡಿಯೋ ಮಾಡಿ ಮನೋರಂಜಿಸುತ್ತಿದ್ದಾರೆ. ಅಲ್ಲದೆ ಈ ಹಿಂದೆ ಫೇಕ್ ಸಬ್ಸ್ಕ್ರೈಬರ್‌ಗಳ ಬಗ್ಗೆ ಮಾತನಾಡಿದ ವಿಡಿಯೋ ಮತ್ತೊಮ್ಮೆ ವೈರಲ್ ಆಗುತ್ತಿದೆ.

Tap to resize

'ಫೇಕ್ ಸಬ್ಸ್ಕ್ರೈಬರ್‌ಗಳನ್ನು ಹಣ ಕೊಟ್ಟು ಪಡೆದಿರುವುದಾಗಿ ಅನೇಕರು ಕಾಮೆಂಟ್ ಮಾಡಿದ್ದೀರಿ ನನಗೆ ನಿಜಕ್ಕೂ ಬೇಸರ ಆಯ್ತು ಹೀಗಾಗಿ ಮಾತನಾಡಬೇಕು ಎಂದು ವಿಡಿಯೋ ಮಾಡಿದೆ'

ಒಂದು ತಿಂಗಳಲ್ಲಿನಲ್ಲಿ ನನಗೆ ತುಂಬಾ ಫಾಲೋವರ್ಸ್ ಬಂದಿದ್ದಾರೆ ಇದರಿಂದ ಎಲ್ಲರಿಗೂ ಅನುಮಾನ ಹುಟ್ಟಿದೆ. ನನ್ನ ಒಂದು ರೀಲ್ಸ್‌ 168 ಮಿಲಿಯನ್ ಅಂದ್ರೆ ಕೋಟಿಯಲ್ಲಿ ಜನರು ನೋಡಿದ್ದಾರೆ ಹಾಗೂ 1.4 ಮಿಲಿಯನ್ ಫಾಲೋವರ್ಸ್‌ ಕಾಮೆಂಟ್ ಮಾಡಿದ್ದಾರೆ. 

ಮತ್ತೊಂದು ಶಾರ್ಟ್ಸ್‌ಗೆ 2.2 ಮಿಲಿಯನ್ ವೀಕ್ಷಣೆ ದಾಟಿದೆ ಹೀಗಾಗಿ ಜನರು ಬಂದಿರಬಹುದು. ಸಬ್ಸ್ಕ್ರೈಬರ್‌ಗಳು ಯಾಕಿಲ್ಲ ಅಂದ್ರೆ ಇತ್ತೀಚಿಗೆ ಯುಟ್ಯೂಬ್ ಚಾನೆಲ್ ಆರಂಭಿಸಿರುವುದು ಕಡಿಮೆ ಜನರಿದ್ದಾರೆ ಹಾಗೂ ಯಾರೊಟ್ಟಿಗೂ ಸೇರಿಕೊಂಡಿಲ್ಲ. 

ನನ್ನಂತೆ ಅನೇಕರಿಗೆ ಇದ್ದಕ್ಕಿದ್ದಂತೆ ಫಾಲೋವರ್ಸ್ ಬರಬಹುದು ಹೀಗೆ ಎಲ್ಲರಿಗೂ ಆಗುತ್ತದೆ ಆದರೆ ನನ್ನ ಪೋಸ್ಟ್‌ಗೆ ಕಾಮೆಂಟ್ ಮಾಡಿರುವುದು ಬೇಸರವಾಗಿದೆ' ಎಂದು ಧನುಶ್ರೀ ಮಾತನಾಡಿದ್ದಾರೆ.

'ಕನ್ನಡ ಭಾಷೆ ಗೊತ್ತಿಲ್ಲದವರು ನನ್ನ ವಿಡಿಯೋ ಶಾರ್ಟ್‌ ನೋಡುತ್ತಾರೆ ಆದರೆ ಭಾಷೆ ಅರ್ಥ ಆಗಲ್ಲ ಅಂತ ವ್ಲಾಗ್ ನೋಡದೆ ಇರಬಹುದು. ನಾನು ಶ್ರಮ ಹಾಕುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದೀರಾ...

ಶ್ರಮ ಹಾಕದೇ ಯಾವ ಕೆಲಸವೂ ಆಗುವುದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಇರುವ ಕಾರಣ ನಮ್ಮ ಜೀವನದಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿಚಾರವನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು ಓಪನ್ ಆಗಿ ತೋರಿಸಿಕೊಳ್ಳಬೇಕಾಗುತ್ತದೆ ಹೀಗಾಗಿ ಮಾನಸಿಕವಾಗಿ ನಮಗೂ ತೊಂದರೆ ಆಗುತ್ತೆ. 

ಈ ಬೇಸರದಲ್ಲಿ ಕೆಲವೊಮ್ಮೆ ವಿಡಿಯೋ ಕೂಡ ಮಾಡಲಾಗದು ಒಂದು ವಿಡಿಯೋ ಓಡಿಲ್ಲ ಅಂದ್ರೆ ಬೇಸರ ಆಗುತ್ತೆ. ಪ್ಲಾನ್ ಪ್ರಕಾರ ವಿಡಿಯೋ ಅಪ್ಲೋಡ್ ಆಗಿಲ್ಲ ಅಂದ್ರೆ ನಿಜ ಬೇಸರ ಆಗುತ್ತೆ ಕೆಲವೊಮ್ಮೆ ನಾನು ಕಣ್ಣೀರಿಟ್ಟಿರುವೆ..' ಎಂದು ಧನುಶ್ರೀ ಹೇಳಿದ್ದಾರೆ. 

Latest Videos

click me!