ಪ್ರೀತಿ ಸಂಕೇತವಾಗಿ ಭೂಮಿಗೆ ಕಾಲ್ಗೆಜ್ಜೆ ತೊಡಿಸಿದ ಗೌತಮ್, ನಂಗೂ ಇಂಥಾ ಗಂಡ ಸಿಗಲಿ ಅಂತಿದ್ದಾರೆ ಗರ್ಲ್ಸ್!

First Published | Apr 18, 2024, 5:07 PM IST

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಸದ್ಯ ತನ್ನ ಪ್ರೀತಿಯನ್ನು ಹೆಂಡತಿ ಭೂಮಿಕ ಬಳಿ ಹೇಳಲು ಕಾತುರನಾಗಿದ್ದಾನೆ, ಈ ಹಿನ್ನೆಲೆಯಲ್ಲಿ ಹೆಂಡತಿಗೆ ಕಾಲ್ಗೆಜ್ಜೆ ತಂದು, ಅದನ್ನು ತಾನೆ ತೊಡಿಸಿದ್ದಾನೆ. 
 

ಝೀ ಕನ್ನಡದಲ್ಲಿ (Zee Kannada) ವಿಭಿನ್ನವಾಗಿ ಮೂಡಿ ಬರುತ್ತಿರುವಂತಹ ಧಾರಾವಾಹಿ  ಅಂದ್ರೆ ಅದು ಅಮೃತಧಾರೆ. ಎಲ್ಲೂ ಒಂದಿಷ್ಟು ಕಥೆಯನ್ನು ಎಳೆಯದೇ ಅಲ್ಲೆ ಡ್ರಾ ಅಲ್ಲೆ ಬಹುಮಾನ ಎನ್ನೋ ರೀತಿ, ಪ್ರತಿದಿನವೂ ಹೊಸ ಹೊಸ ತಿರುವುಗಳೋಂದಿಗೆ ಕಥೆ ಅದ್ಭುತವಾಗಿ ಪ್ರಸಾರವಾಗುತ್ತಿದೆ. 
 

ಪ್ರಬುದ್ಧ ಜೋಡಿಗಳಾದ ಗೌತಮ್ ದಿವಾನ್ ಮತ್ತು ಭೂಮಿಕಾ ಜೋಡಿಯ ಪ್ರಬುದ್ಧ ಲವ್ ಸ್ಟೋರಿ ವೀಕ್ಷಕರಿಗೆ ಸಿಕ್ಕಾಪಟ್ಟೆ ಹಿಡಿಸಿದೆ. ಒಬ್ಬರ ಮೇಲೆ ಇನ್ನೊಬ್ಬರಿಗೆ ಅಪಾರ ಪ್ರೀತಿ ಹೊಂದಿರೋ ಗೌತಮ್ - ಭೂಮಿಕಾ ಸದ್ಯ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಮಾತ್ರ ತವಕಿಸುತ್ತಿದ್ದಾರೆ. 
 

Tap to resize

ಗೌತಮ್ ತನ್ನಲ್ಲಿರೋ ಪ್ರೀತಿಯನ್ನು ಭೂಮಿಕಾ ಎದುರು ಹೇಳಲು ಎಲ್ಲ ಪ್ರಾಕ್ಟೀಸ್ ಮಾಡಿದ್ರೂ ಹೆಂಡ್ತಿ ಎದುರು ಬಂದಾಗ ಮಾತ್ರ ಎಲ್ಲಾ ಮರೆತು ಬಿಡುತ್ತಾರೆ. ತನ್ನ ಪ್ರೀತಿಗೆ ಸದಾ ಬೆನ್ನೆಲುಬಾಗಿ ನಿಲ್ಲೋ ಗೆಳೆಯ ಆನಂದ್ ನೆರವಿನಿಂದ ಸದ್ಯ ಭೂಮಿಕಾಗೆ ಗೆಜ್ಜೆಯನ್ನು ಉಡುಗೊರೆಯಾಗಿ ತಂದಿದ್ದಾನೆ ಗೌತಮ್. 
 

ಇದೀಗ ಸರ್ಪ್ರೈಸ್ ಮಾಸ್ಟರ್ ಗೌತಮ್ ಭೂಮಿಗೆ ಕಾಲ್ಗೆಜ್ಜೆಯನ್ನು ಗಿಫ್ಟ್ ಆಗಿ ತಂದಿದ್ದಾರೆ. ಕಾಲ್ಗೆಜ್ಜೆ ನೋಡಿ ಖುಷಿಪಟ್ಟ ಭೂಮಿ, ಇದನ್ನ ಹೇಗಾದರೂ ಗೌತಮ್ ಅವರಿಂದಲೇ ತೊಡಿಸಿಕೊಳ್ಳಬೇಕೆಂದು ಗೆಜ್ಜೆ ಕೈ ಜಾರಿದಂತೆ ನಾಟಕವಾಡಿ, ಕೊನೆಗೂ ಗೌತಮ್ ತಾನಾಗಿಯೇ ಭೂಮಿ ಕಾಲನ್ನು ತನ್ನ ತೊಡೆ ಮೇಲೆ ಇರಿಸಿ, ಕಾಲ್ಗೆಜ್ಜೆ ತೊಡಿಸಿದ್ದಾನೆ.
 

ಸದ್ಯ ಈ ಪ್ರೋಮೋವನ್ನು ವೀಕ್ಷಕರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಇಂಥಾ ಕ್ಯೂಟ್, ರೊಮ್ಯಾಂಟಿಕ್ ಮೂಮೆಂಟ್ ಇದು ಎಂದು ಹೇಳ್ತಿದ್ದಾರೆ, ಅಯ್ಯೋ ಗೌತಮ್ ರಂತಹ ಹುಡುಗ ನಮ್ ಜೀವನದಲ್ಲಾದ್ರೂ ಬಂದು ಕಾಲಿಗೆ ಗೆಜ್ಜೆ ಕಟ್ಟಿದ್ರೆ ಎಷ್ಟು ಚೆನ್ನಾಗಿರೋದು, ಇವರಿಬ್ಬರಿಗೂ ಯಾರ ದೃಷ್ಟಿಯೂ ಬೀಳದಿರಲು ಎಂದು ಕಾಮೆಂಟ್ ಮಾಡ್ತಿದ್ದಾರೆ. 
 

ಇನ್ನು ಸೀರಿಯಲ್ ನಲ್ಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅಷ್ಟೇ ಹುಡುಗಿಯರಿಗೆ ಕಾಲ್ಗೆಜ್ಜೆ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಮೊದಲಿನಂತೆ ಬೆಳ್ಳಿಯ ಕಾಲ್ಗೆಜ್ಜೆ ಇವಾಗ ಧರಿಸೋದಕ್ಕೆ ಹೆಚ್ಚಿನ ಜನ ಬಯಸದೇ ಇದ್ದರೂ, ಸ್ಟೈಲಿಶ್ ಕಾಲ್ಗೆಜ್ಜೆಗಳನ್ನು ಹುಡುಗಿಯರು ಖಂಡಿತಾ ಇಷ್ಟಪಡ್ತಾರೆ. ಅದರಲ್ಲೂ ತನ್ನ ಹುಡುಗ ಕಾಲ್ಗೆಜ್ಜೆ ಗಿಫ್ಟ್ ಆಗಿ ನೀಡಿದ್ರೆ, ಅಥವಾ ಅದನ್ನು ಅವನಿಂದಲೇ ಕಾಲಿಗೆ ಕಟ್ಟಿಸಿಕೊಂಡರೆ ಹುಡುಗಿಯರಿಗೆ ಒಂಥರಾ ಖುಷಿ. 
 

ಮತ್ತೊಂದು ವಿಷ್ಯ ಏನಪ್ಪಾ ಅಂದ್ರೆ ಬೆಳ್ಳಿಯ ಕಾಲ್ಗೆಜ್ಜೆ ಧರಿಸೋದರಿಂದ ಹೆಣ್ಣು ಮಕ್ಕಳಿಗೆ ತುಂಬಾನೆ ಪ್ರಯೋಜನ ಇದೆ. ಹಾರ್ಮೋನ್ ಸಮತೋಲನವಾಗಿರುತ್ತೆ, ಕಾಲು ನೋವು ನಿವಾರಣೆಯಾಗುತ್ತೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಜೊತೆಗೆ ಬೆಳ್ಳಿಯ ಗೆಜ್ಜೆ ಧರಿಸೋದರಿಂದ ದೇಹದಲ್ಲಿ ಉಷ್ಣತೆಯನ್ನು ಸಹ ಸಮತೋಲನಗೊಳಿಸುತ್ತೆ. 
 

Latest Videos

click me!