'ರವಿಮಾಮ..' ಎಂದೇ ರವಿಚಂದ್ರನ್‌ಗೆ ಬರ್ತ್‌ಡೇ ವಿಶ್‌ ಮಾಡಿದ ಗೌರಿ ಶ್ರುತಿ

Published : May 30, 2026, 03:39 PM IST

ನಟ ವಿ. ರವಿಚಂದ್ರನ್‌ ಅವರ 65ನೇ ಜನ್ಮದಿನದಂದು, ನಟಿ ಶ್ರುತಿ ಪುತ್ರಿ ಗೌರಿ ವಿಶೇಷವಾಗಿ ಶುಭ ಕೋರಿದ್ದಾರೆ. ತಮ್ಮ ನಟನಾ ಆಸಕ್ತಿಯನ್ನು ಮೊದಲು ಗುರುತಿಸಿದ್ದೇ ರವಿಮಾಮ ಎಂದು ಸ್ಮರಿಸಿಕೊಂಡಿರುವ ಗೌರಿ, ಹಳೆಯ ಫೋಟೋ ಹಂಚಿಕೊಂಡು ತಮ್ಮ ಸಿನಿಮಾ ಪ್ರವೇಶದ ತಯಾರಿಯ ಬಗ್ಗೆಯೂ ಸುಳಿವು ನೀಡಿದ್ದಾರೆ.

PREV
16

ಸ್ಯಾಂಡಲ್‌ವುಡ್‌ನ ಕನಸುಗಾರ ವಿ. ರವಿಚಂದ್ರನ್‌ ಶನಿವಾರ ತಮ್ಮ 65ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಸಿನಿರಂಗದ ಗಣ್ಯರು, ಕಲಾವಿದರು ಹಾಗೂ ರಾಜಕೀಯ ನಾಯಕರು ರವಿಚಂದ್ರನ್‌ ಅವರ ಜನ್ಮದಿನಕ್ಕೆ ಆತ್ಮೀಯವಾಗಿ ಶುಭಕೋರಿದ್ದಾರೆ.

26

ಇದರ ನಡುವೆ ಹಿರಿಯ ನಟಿ ಶ್ರುತಿ ಅವರ ಪುತ್ರಿ ಗೌರಿ ಶ್ರುತಿ ಕೂಡ ವಿ. ರವಿಚಂದ್ರನ್‌ ಅವರೊಂದಿಗಿನ ಇತ್ತೀಚಿನ ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡು ಅವರಿಗೆ ಜನ್ಮದಿನದ ಶುಭ ಕೋರಿದ್ದಾರೆ.

36

ವಿ.ರವಿಚಂದ್ರನ್‌ ಅವರನ್ನು ರವಿಮಾಮ ಎಂದು ಕರೆದು ಅವರು ಆತ್ಮೀಯವಾಗಿ ಜನ್ಮದಿನದ ವಿಶ್‌ ಮಾಡಿದ್ದಲ್ಲದೆ, ನನಗೆ ನಟನೆಯಲ್ಲಿ ಆಸಕ್ತಿ ಇದ್ಯಾ ಎಂದು ಕೇಳಿದ ಮೊದಲ ವ್ಯಕ್ತಿ ಎಂದು ಅವರನ್ನು ಬಣ್ಣಿಸಿದ್ದಾರೆ.

46

ನಟನೆಯಲ್ಲಿ ಆಸಕ್ತಿ ಇದ್ಯಾ ಎಂದು ಕೇಳಿದ ಮೊದಲ ವ್ಯಕ್ತಿ. ನನ್ನ ವಾಯ್ಸ್‌ಅನ್ನು ರೆಕಾರ್ಡ್‌ ಮಾಡಿದ ಮದಲ ವ್ಯಕ್ತಿ. ನನ್ನ ಸಾಮರ್ಥ್ಯವನ್ನು ಚಿಕ್ಕ ವಯಸ್ಸಿನಲ್ಲೇ ಗುರಿತಿಸಿದ ವ್ಯಕ್ತಿ. ಥ್ಯಾಂಕ್‌ ಯು ಮಾಮಾ. ಪ್ರತಿ ಬಾರಿಯೂ ನಮಗೆ ಮಾರ್ಗದರ್ಶನ ನೀಡಿ ನಮ್ಮೊಂದಿಗೆ ಇದ್ದಿದ್ದಕ್ಕೆ. ನಮ್ಮೆಲ್ಲ ಪ್ರೀತಿ ನಿಮಗಾಗಿ..' ಎಂದು ಬರೆದಿದ್ದಾರೆ.

56

ಅದರೊಂದಿಗೆ ಚಿತ್ರದ ಸಿರೀಸ್‌ನ ಮೂರನೇ ಫೋಟೋ ಮಿಸ್‌ ಮಾಡಬೇಡಿ ಎಂದೂ ಗೌರಿ ಶ್ರುತಿ ಬರೆದಿದ್ದಾರೆ. ಇದು ರಾಮ ಶಾಮ ಭಾಮ ಸಿನಿಮಾದ ಶೂಟಿಂಗ್‌ ಸ್ಪಾಟ್‌ ಆಗಿದ್ದು, ಶ್ರೂತಿ ಹಾಗೂ ಕಮಲ್‌ ಹಾಸನ್‌ ಅವರೊಂದಿಗೆ ರವಿಚಂದ್ರನ್‌ ಕೂಡ ಈ ಫೋಟೋದಲ್ಲಿ ಇದ್ದಾರೆ. ಶ್ರುತಿ ಅವರನ್ನು ಅಪ್ಪಿಕೊಂಡು ಕುಳಿತಿರುವ ಗೌರಿ, ವಾರೆಗಣ್ಣಿನಲ್ಲಿ ರವಿಚಂದ್ರನ್‌ ಅವರನ್ನು ನೋಡುತ್ತಿರುವುದು ದಾಖಲಾಗಿದೆ.

66

ಸಿನಿಮಾರಂಗಕ್ಕೆ ಪ್ರವೇಶಿಸಲು ಸಿದ್ದತೆಯಲ್ಲಿರುವ ಗೌರಿ ಶ್ರುತಿ ಅದಕ್ಕಾಗಿ ಎಲ್ಲಾ ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರೆ.ಗೌರಿ ಅವರು ಈಗಿನ ಟ್ರೆಂಡ್‌ ತಕ್ಕಂತೆಯೇ ರೆಡಿ ಆಗುತ್ತಿದ್ದಾರೆ. ಸೀದಾ ಸಾದಾ ಹುಡುಗಿ ಮಾತ್ರವಲ್ಲದೆ, ಗ್ಲಾಮರಸ್‌ ರೋಲ್‌ಗಳಿಗೂ ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories