Youtuber Varun Aradya: ಬೃಂದಾವನ ಧಾರಾವಾಹಿ ನಟ, ಯುಟ್ಯೂಬರ್ ವರುಣ್ ಆರಾಧ್ಯ ಅವರು ಮದುವೆ ಆಗೋಕೆ ರೆಡಿ ಆಗಿರೋದು ಎಲ್ಲರಿಗೂ ಗೊತ್ತಿರೋ ವಿಷಯ. ಈಗ ಇವರು ದೊಡ್ಡ ಇವೆಂಟ್ ಮಾಡಿ, ಹುಡುಗಿ ಯಾರೆಂದು ರಿವೀಲ್ ಮಾಡಿದ್ದಾರೆ. ಹಾಗಾದರೆ ಯಾರದು?
ನಟ ವರುಣ್ ಆರಾಧ್ಯ ಅವರು ಹುಡುಗಿ ಮುಖ ರಿವೀಲ್ ಮಾಡಬೇಕು ಎಂದು ರೆಸಾರ್ಟ್‌ನಲ್ಲಿ ಇವೆಂಟ್ ಪ್ಲ್ಯಾನ್ ಮಾಡಿದ್ದಾರೆ. ಆ ಇವೆಂಟ್‌ನಲ್ಲಿ ಪ್ರಪೋಸ್ ಮಾಡಲು ಒಂದಿಷ್ಟು ತಯಾರಿ ಕೂಡ ಮಾಡಿಕೊಂಡಿದ್ದಾರೆ. ಕೇಕ್ ಕಟಿಂಗ್, ಫ್ಲವರ್ ಡೆಕೋರೇಶನ್, ಡ್ಯಾನ್ಸ್, ಎಲ್ಲರಿಗೂ ಊಟ ಎಂದು ವರುಣ್ ಅವರೇ ಎಲ್ಲ ತಯಾರಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಡ್ಯಾನ್ಸ್ ಪ್ರಾಕ್ಟೀಸ್ ಕೂಡ ಮಾಡಿದ್ದರು.
25
ನಮ್ರತಾ ಯಾರು?
ನಮ್ರತಾ ( namratha lasrado ) ಎನ್ನುವವರನ್ನು ವರುಣ್ ಮದುವೆ ಆಗುತ್ತಿದ್ದಾರೆ. ನಮ್ರತಾ ಅವರ ವೃತ್ತಿ ಏನು ಎಂದು ರಿವೀಲ್ ಆಗಿಲ್ಲ, ಆದರೆ ಇನ್‌ಸ್ಟಾಗ್ರಾಮ್‌ನಲ್ಲಿ 35 ಸಾವಿರಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.
35
ಮೊದಲೇ ಎಲ್ರಿಗೂ ವಿಷಯ ಗೊತ್ತಿತ್ತು!
ಕೆಲವು ತಿಂಗಳುಗಳ ಹಿಂದೆಯೇ ವರುಣ್ ಆರಾಧ್ಯ ಅವರು ರಿಲೇಶನ್‌ಶಿಪ್‌ನಲ್ಲಿರೋದು, ಹುಡುಗಿ ನಮ್ರತಾ ಎಂದು ಅನೇಕರಿಗೆ ಗೊತ್ತಾಗಿತ್ತು. ಆದರೆ ವರುಣ್ ಮಾತ್ರ ರಿವೀಲ್ ಮಾಡಿರಲಿಲ್ಲ.
ಈ ಹಿಂದೆ ವರುಣ್ ಆರಾಧ್ಯ ಲವ್ ಮಾಡಿದ್ದು, ಬ್ರೇಕಪ್ ಆಗಿದ್ದು ಎಲ್ಲರಿಗೂ ಗೊತ್ತಿದೆ. ಇವರ ಬ್ರೇಕಪ್ ವಿಷಯ ಪೊಲೀಸ್ ಠಾಣೆಯಲ್ಲಿ ಕೂಡ ನಿರ್ಧಾರ ಆಗಿತ್ತು. ಹೀಗಾಗಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು.
55
ಬಿಗ್ ಬಾಸ್ ಶೋಗೆ ಬರ್ತಾರಾ?
ವರುಣ್ ಆರಾಧ್ಯ ಅವರು ಮುಂದಿನ ಬಾರಿ ಬಿಗ್ ಬಾಸ್ ಶೋಗೆ ಬರ್ತಾರಾ ಎಂಬ ಪ್ರಶ್ನೆ ಉಂಟಾಗಿದೆ. ಇನ್ನೊಂದು ಕಡೆ ಕಳೆದ ಬಾರಿ ಆಫರ್ ಬಂದರೂ ಕೂಡ ವೈಯಕ್ತಿಕ ಕಾರಣಕ್ಕೆ ಅವರು ಅಟೆಂಡ್ ಆಗಿರಲಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.