ಹೊಸ ವಿಡಿಯೋ ಮೂಲಕ ಅಭಿಮಾನಿಗಳಿಗೆ ಹಬ್ಬ ನೀಡಿದ ನಿವೇದಿತಾ ಗೌಡ

Published : May 30, 2026, 12:14 PM IST

ನಟಿ ನಿವೇದಿತಾ ಗೌಡ ಅವರ ಹೊಸ ಇನ್ಸ್‌ಟಾಗ್ರಾಮ್‌ ರೀಲ್ಸ್ 2.3 ಮಿಲಿಯನ್‌ ವೀಕ್ಷಣೆ ಪಡೆದು ವೈರಲ್ ಆಗಿದೆ. ಈ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾದರೆ, ಕೆಲವರು ಅವರ ವೈಯಕ್ತಿಕ ಜೀವನ ಮತ್ತು ಇಎಂಐ ಬಗ್ಗೆ ಕಾಮೆಂಟ್ ಮಾಡಿ ಟ್ರೋಲ್ ಮಾಡಿದ್ದಾರೆ.

PREV
15

ಇತ್ತೀಚೆಗೆ ತಮ್ಮ 28ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದ ನಿವೇದಿತಾ ಗೌಡ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಬ್ಯೂಟಿಯ ಹೊಸ ರೀಲ್‌ಅನ್ನು ಹಂಚಿಕೊಂಡಿದ್ದಾರೆ. ಎಂದಿನಂತೆ ಅವರ ರೀಲ್‌ ಪೋಸ್ಟ್‌ ಆದ 17 ಗಂಟೆಯಲ್ಲಿಯೇ 2.3 ಮಿಲಿಯನ್‌ ವೀವ್ಸ್‌ ಪಡೆದುಕೊಂಡಿದೆ.

25

ಹಸಿರು ಬಣ್ಣ ಟೀಶರ್ಟ್‌ ತೊಟ್ಟು ನಿವೇದಿತಾ ಗೌಡ ಕುಣಿದ್ದದ್ದು, ಅದಕ್ಕೆ ಅವರ ಅಭಿಮಾನಿಗಳು ಭಿನ್ನ ಭಿನ್ನ ಕಾಮೆಂಟ್‌ ಮಾಡುತ್ತಿದ್ದಾರೆ. ಇನ್ನೂ ಕೆಲವರು ಆಕೆಗೆ ಯಾವುದೋ ಇಎಂಐ ಪೆಂಡಿಂಗ್‌ ಇರಬೇಕು. ಅದಕ್ಕಾಗಿ ಈ ವಿಡಿಯೋ ಪೋಸ್ಟ್‌ ಮಾಡಿದ್ದಾರೆ ಎಂದು ಕಾಲೆಳೆದಿದ್ದಾರೆ.

35

ಇನ್ಸ್‌ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡೋಕೆ ಅಂತಾನೇ ಡಿವೈರ್ಸ್‌ ಕೊಟ್ಟಿರೋ ಜಗತ್ತಿನ ಏಕೈಕ ಮಹಿಳೆ ಎಂದು ನಿವೇದಿತಾ ಗೌಡ ಅವರ ವೈಯಕ್ತಿಕ ವಿಚಾರ ಇರಿಸಿಕೊಂಡು ಕೆಲವರು ಕಾಲೆಳೆದಿದ್ದಾರೆ.

45

ಬಿಗ್ ಬಾಸ್‌ ಬಳಿಕ ಕೆಲವೊಂದು ರಿಯಾಲಿಟಿ ಶೋಗಳಲ್ಲಿ ಹಾಗೂ ವಿಡಿಯೋ ಆಲ್ಬಮ್‌ಗಳಲ್ಲಿ ಕಾಣಿಸಿಕೊಂಡಿದ್ದ ನಿವೇದಿತಾ ಗೌಡ, ಕೆಲ ತಿಂಗಳಿನಿಂದ ಯಾವುದೇ ಹೊಸ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಂಡಿಲ್ಲ.

55

ಇತ್ತೀಚೆಗೆ ತಮ್ಮ ಜನ್ಮದಿನವನ್ನು ಆತ್ಮೀಯ ಸ್ನೇಹಿತರೊಂದಿಗೆ ಅವರು ಆಚರಿಸಿಕೊಂಡಿದ್ದರು. ಇದೇ ವೇಳೆ ಅಕೆಯ ಸ್ನೇಹಿತರು ದುಬಾರಿ ಬೆಲೆಯ ಅಪರೂಪದ ಚೈನ್‌ ಗಿಫ್ಟ್‌ಅನ್ನು ನಿವೇದಿತಾ ಗೌಡಗೆ ನೀಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories