ಸುಧಾಗೆ ಅಣ್ಣ ಗೌತಮ್ ಕೈತುತ್ತು… ಅಣ್ಣ-ತಂಗಿಯ ಮಧುರ ಬಾಂಧವ್ಯ ನೋಡಿ ಭಾವುಕರಾದ ಜನ!

Published : Nov 25, 2024, 06:05 PM ISTUpdated : Nov 26, 2024, 07:34 AM IST

ಅಮೃತಧಾರೆ ಧಾರಾವಾಹಿಯಲ್ಲಿ ನಿಜವಾಗಿಯೂ ಅಣ್ಣ ತಂಗಿ ಅನ್ನೋದು ಗೊತ್ತಿಲ್ಲದೇ ಇದ್ದರೂ, ತಂಗಿ ಸುಧಾಗೆ ಅಣ್ಣ ಗೌತಮ್ ಪ್ರೀತಿಯ ಕೈತುತ್ತು ನೀಡಿದ್ದಾರೆ.   

PREV
17
ಸುಧಾಗೆ ಅಣ್ಣ ಗೌತಮ್ ಕೈತುತ್ತು… ಅಣ್ಣ-ತಂಗಿಯ ಮಧುರ ಬಾಂಧವ್ಯ ನೋಡಿ ಭಾವುಕರಾದ ಜನ!

ಗೌತಮ್ ದಿವಾನ್ (Goutham Diwan)ಮನೆಯಲ್ಲಿ ಮತ್ತೊಂದು ಅವಾಂತರ ನಡೆದು ಹೋಗಿದೆ. ಈಗಷ್ಟೇ ಬಾಂಬ್ ದಾಳಿಯಿಂದ ಏಟು ಮಾಡಿಕೊಂಡಿದ್ದ ಭೂಮಿಕಾ ಸುಧಾರಿಸುತ್ತಿದ್ದಂತೆ ಮತ್ತೊಂದು ಘಟನೆ ನಡೆದಿದ್ದು, ಮನೆಮಂದಿ ಬೆಚ್ಚಿ ಬೀಳುವಂತೆ ಮಾಡಿದೆ, ಅದರಲ್ಲೂ ಮತ್ತೆ ಅವಘಡ ಭೂಮಿಕಾಗೆ ಆಗಿರೋದ್ರಿಂದ ಆತಂಕ ಮತ್ತಷ್ಟು ಹೆಚ್ಚಾಗಿದೆ. 
 

27

ಆಗಿದ್ದಿಷ್ಟು, ಕೈಗೆ ಹಾಗೂ ಕಾಲಿಗೆ ಗಾಯ ಮಾಡಿಕೊಂಡಿದ್ದ ಭೂಮಿಕಾ, ಇದೀಗ ನಡೆಯಲು ಸಾಧ್ಯವಾಗಿರೋದ್ರಿಂದ , ರೂಮಿನಿಂದ ಕೆಳಗಿಳಿದು ಬಂದಿದ್ದಾಳೆ. ತುಂಬಾ ದಿನಗಳ ಬಳಿಕ ಕೆಳಗೆ ಬಂದಿರೋದ್ರಿಂದ, ದೇವರ ಮನೆಗೆ ಬಂದು ಪೂಜೆ ಮಾಡ್ತಿರೋವಾಗ, ಸೀರೆಗೆ ಅಚಾನಕ್ ಆಗಿ ಬೆಂಕಿ ತಗಲುತ್ತದೆ. 
 

37

ಭೂಮಿಕಾ ಸೀರೆಗೆ ಬೆಂಕಿ ತಗುಲಿರೋದನ್ನು ಗಮನಿಸಿದ ಸುಧಾ, ಕೈಯಲ್ಲೇ ಅದನ್ನ ನಂದಿಸೋಕೆ ಪ್ರಯತ್ನಿಸುತ್ತಾಳೆ. ಇದರಿಂದ ಆಕೆಯ ಕೈಗೆ ಸ್ವಲ್ಪ ಗಾಯ ಕೂಡ ಆಗಿದೆ. ತನ್ನ ಪ್ರಾಣವನ್ನು ಉಳಿಸೋಕೆ ಹೋಗಿ ಸುಧಾ ಕೈಗಳಲ್ಲಿ ಗಾಯವಾಗಿರೋದನ್ನ ನೋಡಿ, ಭೂಮಿಕಾ ನೊಂಡುಕೊಂಡ್ರೆ, ನನ್ನ ಜೀವನದಲ್ಲಿ ಇದಕ್ಕಿಂತ ದೊಡ್ಡ ಗಾಯಾನೇ ಆಗಿದೆ , ಅದ್ರ ಮುಂದೆ ಇದೇನಿಲ್ಲ ಎನ್ನುತ್ತಾಳೆ ಸುಧಾ. 
 

47

ಇನ್ನು ಮನೆಗೆ ಬರುವ ಗೌತಮ್ ಗೆ ವಿಷ್ಯ ಗೊತ್ತಾಗಿ ಭಯ ಪಡ್ತಾನೆ. ಬಾಂಬ್ ಘಟನೆಯಂತೆ ಇದರ ಹಿಂದೆಯೂ ಯಾರಾದ್ರೂ ಇದ್ದಾರೋ ಎಂದು ಭಯ ಪಡ್ತಾನೆ ಗೌತಮ್. ಜೊತೆಗೆ ತಮ್ಮ ಜಾತಕವನ್ನು ಜ್ಯೋತಿಷ್ಯರಿಗೆ ನೀಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಸಹ ಅಂದುಕೊಳ್ಳುತ್ತಾನೆ. ಅಷ್ಟೇ ಅಲ್ಲ ಕೈಯಲ್ಲಿ ಬೆಂಕಿ ಆರಿಸಿದಕ್ಕಾಗಿ ಸುಧಾಳಿಗೆ ಬೈಯುತ್ತಾ, ನೀರಿನಲ್ಲಿ ಬೆಂಕಿ ಆರಿಸೋದಲ್ವಾ ಎನ್ನುತ್ತಾನೆ. 
 

57

ಕೈಗೆ ಗಾಯ ಮಾಡಿಕೊಂಡ ಸುಧಾ ಇವತ್ತು ಮನೆಯಲ್ಲಿ ಉಳಿಯುವಂತೆ, ತನ್ನ ಮನೆಗೆ ಹೋಗದಂತೆ ಗೌತಮ್ ಮತ್ತು ಭೂಮಿಕಾ ಒತ್ತಾಯಿಸುತ್ತಾರೆ. ಸುಧಾ ಮನೆಯಲ್ಲಿ ತಾಯಿ ಮತ್ತು ಮಗಳನ್ನು ನೋಡಿಕೊಳ್ಳಲು ವ್ಯವಸ್ಥೆ ಕೂಡ ಮಾಡಲಾಗುತ್ತೆ. ಇದೀಗ ಅಣ್ಣ ತಂಗಿಯ ನಂಟಿನ ಬೆಸುಗೆ ಬೆಸೆಯುವ ಮತ್ತೊಂದು ಘಟನೆ ನಡೆಯುತ್ತೆ. 
 

67

ಊಟದ ಸಮಯದಲ್ಲಿ ಗೌತಮ್‌, ಭೂಮಿಕಾ ಮತ್ತು ಸುಧಾರನ್ನು ಊಟಕ್ಕೆ ಕುಳಿತುಕೊಳ್ಳಲು ಹೇಳಿ ತಾನೇ ಊಟ ಬಡಿಸುತ್ತಾರೆ ಗೌತಮ್ ದಿವಾನ್.  ಸುಧಾ ಸಂಕೋಚದಲ್ಲಿ ಇರಬೇಕಾದ್ರೆ, ಗೌತಮ್ ಪ್ರೀತಿಯಿಂದ ಆಕೆಯನ್ನು ಕೂತುಕೊಳ್ಳುವಂತೆ, ಮಾಡಿ ತಾನೆ ಊಟ ಮಾಡಿಸೋದಾಗಿ ಹೇಳುತ್ತಾನೆ. ಸುಧಾ ಕೈಯಲ್ಲಿರೋ ಗಾಯ ನೋಡಿ, ಅವತ್ತು ನನ್ನ ರೋಗ್ಯ ಕೆಟ್ಟಾಗ ನೀನು ಸೇವೆ ಮಾಡಿದೆ.  ನಮ್ಮೆಲ್ಲರ ದೇಹದಲ್ಲಿ ಒಂದೇ ರಕ್ತ ಹರಿಯುತ್ತಿದೆ. ಸಂಕೋಚಪಡಬೇಡ. ನೀನು ನನ್ನನ್ನು ಅಣ್ಣ ಅಂತ ಕರೀತಿ ಅಲ್ವಾ? ಹಾಗಿದ್ರೆ ನಾನು ಊಟ ಮಾಡಿಸ್ತೀನಿ ನೀನು ಮಾಡಬೇಕು ಎನ್ನುವಂತೆ ಊಟ ಮಾಡಿಸ್ತಾನೆ. 
 

77

ಸುಧಾಗೆ ಇವರೇ ತನ್ನ ಅಣ್ಣ ಅನ್ನೋದು ಗೊತ್ತಿಲ್ಲ, ತಂಗಿಯನ್ನು ಮಿಸ್ ಮಾಡಿಕೊಳ್ಳುತ್ತಿರುವ ಗೌತಮ್ ಗೆ ಸುಧಾಳೆ ತನ್ನ ತಂಗಿ ಅನ್ನೋದು ಕೂಡ ಗೊತ್ತಿಲ್ಲ. ಆದರೆ ಇಬ್ಬರ ನಂಟು ಗೊತ್ತಿಲ್ಲದೆ ಬೆಸೆದಿದೆ. ಮುದ್ದಿನ ತಂಗಿಗೆ ಅಣ್ಣನ ಕೈತುತ್ತು ಕೂಡ ಸಿಕ್ಕಾಗಿದೆ. ಆದರೆ ನಿಜವಾಗಿಯೂ ಸುಧಾ ಈ ಮನೆಗೆ ಎಂಟ್ರಿ ಕೊಟ್ಟಿರೋದು ಯಾಕೆ ಅನ್ನೋದು ಇನ್ನಷ್ಟೇ ತಿಳಿಯಬೇಕಾಗಿದೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories