ಕೀರ್ತಿಯಾಗಿ ಎಂಟ್ರಿ ಕೊಟ್ಟಿದ್ದು ಕೀರ್ತಿನೇ ಅಲ್ಲ… ಹಾಗಿದ್ರೆ ಮತ್ಯಾರು? ಫುಲ್ ಕನ್’ಫ್ಯೂಸ್ ಆಗ್ಬಿಟ್ಟಿದ್ದಾರೆ ವೀಕ್ಷಕರು!

First Published | Nov 25, 2024, 4:08 PM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ದಿನಕ್ಕೊಂದು ತಿರುವು ಕಾಣುತ್ತಿದ್ದು, ಇದೀಗ ಮನೆಗೆ ಎಂಟ್ರಿ ಕೊಟ್ಟಿರೋ ಕೀರ್ತಿ, ನಿಜವಾಗಿ ಕೀರ್ತಿಯೇ ಅಲ್ಲ ಅನ್ನೋದು ಗೊತ್ತಾಗಿದೆ. ಮುಂದೇನು? 
 

ಲಕ್ಷ್ಮೀ ಬಾರಮ್ಮ (Lakshmi Baramma) ಧಾರವಾಹಿಯಲ್ಲಿ ದಿನಕ್ಕೊಂದು ತಿರುವು ಸಿಗುತ್ತಿದ್ದು ನೋಡುಗರಂತು ಫುಲ್ ಕನ್ಫ್ಯೂಸ್ ಆಗಿದ್ದಾರೆ. ಯಾಕೆಂದರೆ ಕಥೆ ಅದೇ ರೀತಿ ಸಾಗುತ್ತಿದೆ. ಅವತ್ತು ಕೀರ್ತಿ ಕಾಣೆಯಾಗಿದ್ದಾಗ, ಲಕ್ಷ್ಮಿ ಕೀರ್ತಿ ತರ ನಟನೆ ಮಾಡಿದ್ಲು. ಈವಾಗ ಲಕ್ಷ್ಮಿ ಕಾಣೆಯಾಗಿದ್ದಾಳೆ, ಕೀರ್ತಿ ವಿಚಿತ್ರವಾಗಿ ವರ್ತಿಸುತ್ತಿದ್ದಾಳೆ. ಹಾಗಾಗಿ ವೀಕ್ಷಕರು ಏನಪ್ಪಾ ಕಥೆ ಅನ್ನೋದು ಗೊತ್ತಾಗದೆ ತಲೆ ಕೆರೆದುಕೊಳ್ಳುತ್ತಿದ್ದಾರೆ.
 

ಲಕ್ಷ್ಮೀ ಬಾರಮ್ಮ ಧಾರವಾಹಿಯ ಸದ್ಯದ ಕಥೆ ಏನಂದರೆ, ವೈಷ್ಣವ್ ಮನೆಯಲ್ಲಿ ಲಕ್ಷ್ಮಿಯ ಸಾವಿನ ಶೋಕಚಾರಣೆ ಮಾಡ್ತಾ ಇರೊವಾಗ, ಅಲ್ಲಿಗೆ ಕೀರ್ತಿ ಎಂಟ್ರಿ ಕೊಡ್ತಾಳೆ. ಅಷ್ಟೇ ಅಲ್ಲ ಕಾವೇರಿಯ ಒಂದೊಂದೇ ನಿಜರೂಪವನ್ನು ಬಿಡಿಸಿ ಹೇಳುತ್ತಾ, ಅದಕ್ಕೆ ತಕ್ಕಂತ ಎಲ್ಲಾ ಸಾಕ್ಷಿಯನ್ನು ಕೂಡ ಒದಗಿಸುವ ಮೂಲಕ, ಕಾವೇರಿ ಜೈಲು ಸೇರುವಂತೆ ಮಾಡಿದ್ದಾಳೆ ಕೀರ್ತಿ. 
 

Tap to resize

ಆದರೆ ಕೀರ್ತಿಯ ವರ್ತನೆ ಯಾಕೋ ಬೇರೆ ರೀತಿಯಾಗಿದೆ. ಕೀರ್ತಿಯ ಮಾತಿನಲ್ಲಿ ಮೊದಲಿನ ಚುರುಕುತನ ಕಾಣಿಸೋದೆ ಇಲ್ಲ. ಮನೆಯವರಂತೂ ಕಾವೇರಿಯನ್ನ ಜೈಲಿಗೆ ಹಾಕಿಸಿದಕ್ಕಾಗಿ ಕೀರ್ತಿ ಮೇಲೆ ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ. ಆದರೆ ಕೀರ್ತಿ ಮಾತ್ರ ತನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ, ತಾನು ಯಾರು ಆಡಿಸುವ ಗೊಂಬೆಯಂತೆ ನಡೆದುಕೊಳ್ಳುತ್ತಿದ್ದಾಳೆ. 
 

ಇದನ್ನೆಲ್ಲ ನೋಡ್ತಾ ಇದ್ರೆ ಸುಪ್ರೀತ ಯಾರೋ ಬೇರೆಯವರನ್ನು ಕೀರ್ತಿಯಂತೆ ಮುಖವಾಡ ಹಾಕಿಸಿ, ಕರೆದುಕೊಂಡು ಬಂದು ಕಾವೇರಿಯ ಬಂಡವಾಳ ಬಯಲು ಮಾಡೋದಕ್ಕೆ ನೋಡ್ತಾ ಇದ್ದಾಳೆ ಅನ್ಸುತ್ತೆ. ಜೊತೆಗೆ ಈಗಷ್ಟೇ ಬಿಡುಗಡೆಯಾದ ಹೊಸ ಪ್ರೋಮೊದಲ್ಲಿ ತೋರಿಸಿದಂತೆ ಕೀರ್ತಿ ಯಾರದ್ದೋ ಮುಂದೆ ನಿಂತು ನನಗೆ ಕೀರ್ತಿಯಾಗಿ ಸಾಕಾಗಿದೆ ಅಂತಾಳೆ.
 

ಅಲ್ಲೂ ಒಂದು ಟ್ವಿಸ್ಟ್ ನೀಡಲಾಗಿದೆ. ಅದೇನಂದ್ರೆ ಕೀರ್ತಿ ತನ್ನ ಬ್ಯಾಗ್ನಿಂದ ಗೊಂಬೆಯನ್ನು ಹೊರಗೆ ತೆಗೆದು ಅದರಂತೆ ತಲೆ ಆಡಿಸ್ತಾಳೆ. ಅಂದ್ರೆ ಇದರ ಅರ್ಥ ಏನು? ಆ ಗೊಂಬೆ ಲಕ್ಷ್ಮಿಯ ಗೊಂಬೆ. ಲಕ್ಷ್ಮಿಯ ಪ್ರೀತಿಯ ರಾಣಿ ಗೊಂಬೆ ಅದು. ಅದನ್ನು ತೆಗೆದುಕೊಳ್ಳಲು ಹೋಗಿಯೇ ಲಕ್ಷ್ಮಿಯ ಜೀವ ರಾವಣನ ಜೊತೆ ದಹನವಾಗಿತ್ತು ಅನ್ನೋದನ್ನ ನೋಡಿದ್ದೀರಿ, ಆದರೆ ನಿಜವಾಗಿಯೂ ಲಕ್ಷ್ಮೀ ಸಾಯದೆ, ಸುಟ್ಟು ಹೋದ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸುವ ಮೂಲಕ ಕೀರ್ತಿ ಆಗಿದ್ದಾಳೆಯೇ ಅನ್ನೋ ಸಂಶಯ ಕಾಡುತ್ತಾ ಇದೆ. 
 

ಇದಕ್ಕೆ ಸರಿಯಾಗಿ ಕಥೆ ನೋಡಿ ಕನ್’ಫ್ಯೂಸ್ ಆಗಿರುವ ವೀಕ್ಷಕರು ತರಹೇವಾರಿ ಕಾಮೆಂಟ್ ಮಾಡುವ ಮೂಲಕ, ತಮ್ಮ ಸಂಶಯಗಳನ್ನು ತಿಳಿಸುತ್ತಿದ್ದಾರೆ. ಜನರ ಕಾಮೆಂಟ್ಸ್ ಹೇಗಿದ್ರೆ ನೀವೆ ನೋಡಿ. ಲಕ್ಷ್ಮಿ ಗೆ ಪ್ಲಾಸ್ಟಿಕ್ ಸರ್ಜರಿ ಆಗಿದ್ರೂ ಆಗಿರಬಹುದಾದ?? ಕೀರ್ತಿ ಆಗಿ ಸಾಕಾಗಿದೆ ಅಂದ್ರೆ ಈವಾಗ ಇರೋದು ಕೀರ್ತಿ ಗೆಟಪ್ ಅಲ್ಲಿ ಲಕ್ಷ್ಮಿ ನಾ?  ಮತ್ತೆ ಲಕ್ಷ್ಮಿ ಗೊಂಬೆ ಇವಳ ಹತ್ರ ಇದೆ. ಫುಲ್ ಕನ್ಫ್ಯೂಸ್ ಆಗ್ತಿದೆ ಎನ್ನುತ್ತಿದ್ದಾರೆ. ಜೊತೆಗೆ ಲಕ್ಷ್ಮಿ ಮುಖ ಸುಟ್ಟು ಹೋಗಿದೆ .ಡಾಕ್ಟರ್ ಕೀರ್ತಿ ಮುಖ ಹಾಕಿದಾರೆ ಅನ್ಸುತ್ತೆ ಅಂತನೂ ಹೇಳುತ್ತಿದ್ದಾರೆ. 
 

ಅಷ್ಟೇ ಅಲ್ಲ ಅಯ್ಯೋ ಇದು ಕೀರ್ತಿ ಅಲ್ವಾ ? ಏನಿದು ದೇವರೇ ಕೀರ್ತಿ ಬಂದರು ಅಂತ ಖುಷಿಯಾಗಿ ಇದ್ದರೆ, ಇದೇನು ಕರ್ಮ. ಕೀರ್ತಿ ಬರಬೇಕು ಪ್ಲೀಸ್ ಡೈರೆಕ್ಟರ್ ಕೀರ್ತಿ ಬೇಕು. ಇದೇನ್ ಕರ್ಮ ಗುರು, ಕೀರ್ತಿ ಇಲ್ದಿರೊವಾಗ ಲಕ್ಷ್ಮಿ ಕೀರ್ತಿ ತರ ಆಡೋದು, ಈಗ ಲಕ್ಷ್ಮಿ ಇಲ್ಲ ಕೀರ್ತಿ ಲಕ್ಷ್ಮಿತರ ಆಡೋಕ್ ಶುರು ಮಾಡಿದ್ಲು. ಹಾಗಾದ್ರೆ ವರ್ಷವಿಡೀ ಇದೇ ಮಾಡ್ತಾ ಇರ್ತೀರೋ ಅಥವ ಕಾವೇರಿಯ ನಾಟಕ ಕಳಚ್ತೀರೋ ಎಂದು ಒಬ್ರು ಹೇಳಿದ್ರೆ, ಇನ್ನೊಬ್ಬರು ಅಂತೂ ಸತ್ಯ ಹೊರಗೆ ಬರಲ್ಲಾ .ಕಥೆ ಮುಗಿಯೋದಿಲ್ಲಾ. ವೈಷ್ಣವ್ ದಡ್ಡನ ತರ ಆಡೋದ್ ಬಿಡಲ್ಲಾ  ಅಂತಾನೂ ಟೀಕಿಸಿದ್ದಾರೆ. 
 

Latest Videos

click me!