ಮಗುವಿನ ನಿರೀಕ್ಷೆಯಲ್ಲಿ ಬ್ಯೂಟಿಫುಲ್‌ ಫೋಟೋ ಹಂಚಿಕೊಂಡ ತುಂಬು ಗರ್ಭಿಣಿ 'ಗೊಂಬೆ' ನೇಹಾ ಗೌಡ!

First Published | Sep 23, 2024, 8:36 PM IST

ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ  ಚಿನ್ನು ಪಾತ್ರದಲ್ಲಿ ನಟಿಸಿದ್ದ ಕವಿತಾ ಗೌಡ ಕಳೆದ ವಾರ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈಗ ಅದೇ ಸೀರಿಯಲ್‌ನಲ್ಲಿ ಗೊಂಬೆ ಪಾತ್ರದಲ್ಲಿ ನಟಿಸಿದ್ದ ನೇಹಾ ಗೌಡ ಬಗ್ಗೆ ಫ್ಯಾನ್ಸ್‌ ಕುತೂಹಲ ಮನೆ ಮಾಡಿದೆ. ಅವರಿಗೆ ಹುಟ್ಟುವ ಮಗು ಯಾವುದು ಎನ್ನುವ ಚರ್ಚೆ ನಡೆಯುತ್ತಿದೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸೀರಿಯಲ್‌ ನಟಿ ನೇಹಾ ಗೌಡ ತಮ್ಮ ಬ್ಯೂಟಿಫುಲ್‌ ಬೇಬಿ ಬಂಪ್‌ ಫೋಟೋವನ್ನು ಹಂಚಿಕೊಂಡಿದ್ದಾರೆ. ತಿಳಿ ಬಣ್ಣದ ಸೀರೆಯಲ್ಲಿ ತುಂಬು ಗರ್ಭಿಣಿಯನ್ನು ನೋಡಿರುವ ಅವರ ಅಭಿಮಾನಿಗಳು, ಗೊಂಬೆ ಹಾಗೂ ಮರಿ ಗೊಂಬೆಗೆ ಯಾರ ದೃಷ್ಟಿಯೂ ತಾಕದೇ ಇರಲಿ ಎಂದು ಹಾರೈಸಿದಿದ್ದಾರೆ. ಒಂದು ದಿನದ ಹಿಂದೆ ನೇಹಾ ಗೌಡ ಈ ಫೋಟೋಗಳನ್ನು ತಮ್ಮ ಇನ್ಸ್‌ಟಾಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ತುಂಬಾ ಸಿಂಪಲ್‌ ಆಗಿ ಬಹಳ ಚಂದವಾಗಿ ಕಾಣುತ್ತಿದ್ದೀರಿ ಎನ್ನುವ ಕಾಮಂಟ್‌ಗಳು ಬಂದಿವೆ.

'ಡಬಲ್ ಗ್ಲೋ ಅಲರ್ಟ್‌. ಗರ್ಭಾವಸ್ಥೆಯ ಕಾಂತಿ ಸೀರೆಯ ಸೊಬಗನ್ನು ಇನ್ನಷ್ಟು ಹೆಚ್ಚಿಸುತ್ತದೆ. ಬ್ಲೌಸ್‌ ಮತ್ತು ಅದರ ಕುಸುರಿ ಕೆಲಸವು ಅದನ್ನು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಇನ್ನು ಈ ಜುಮುಕಿಗಳ ಅದಕ್ಕೆ ಇನ್ನಷ್ಟು ಮೆರುಗು ನೀಡಿದೆ ಎಂದು ನೇಹಾ ಗೌಡ ಬರೆದುಕೊಂಡಿದ್ದಾರೆ. 

Tap to resize

ಲಕ್ಷ್ಮೀ ಬಾರಮ್ಮ, ಲಚ್ಚಿ ಸೀರಿಯಲ್‌ಗಳಲ್ಲಿ ನಟಿಸಿರುವ ನೇಹಾ ಗೌಡ ಹಾಗೂ ಚಂದನ್‌ ಗೌಡ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆಯಾದ ಆರು ವರ್ಷಗಳ ಬಳಿಕ ನೇಹಾ ಗೌಡ ಗರ್ಭಿಣಿಯಾಗಿದ್ದು, ತಮ್ಮ ಕುಟುಂಬಕ್ಕೆ ಮುದ್ದು ಕಂದನ ಆಗಮನಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ನೇಹಾ ಗೌಡ ಅವರ 9ನೇ ತಿಂಗಳ ಸೀಮಂತ ಶಾಸ್ತ್ರ ಕೂಡ ಅದ್ದೂರಿಯಾಗಿ ನಡೆದಿತ್ತು.ಇದರ ಚಿತ್ರಗಳನ್ನೂ ಕೂಡ ನೇಹಾ ಗೌಡ ಹಂಚಿಕೊಂಡಿದ್ದರು. ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಚಿನ್ನು ಪಾತ್ರದಲ್ಲಿ ನಟಿಸಿದ್ದ ಕವಿತಾ ಗೌಡ ಅವರು ಒಂದು ವಾರದ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೇ ಸೀರಿಯಲ್‌ನಲ್ಲಿ ಗೊಂಬೆ ಪಾತ್ರದಲ್ಲಿ ನಟಿಸಿದ್ದ ನೇಹಾ ಗೌಡಗೆ ಆಗಲಿರುವ ಮಗು ಯಾವುದು ಅನ್ನೋದರ ಬಗ್ಗೆ ಅವರ ಅಭಿಮಾನಿಗಳಲ್ಲಿ ಕುತೂಹಲವಿದೆ.

ಇದರ ಬಗ್ಗೆ ಮಾತನಾಡಿದ್ದ ನೇಹಾ ಗೌಡ, ಲಕ್ಷ್ಮಿ ಬಾರಮ್ಮ ಸೀರಿಯಲ್‌ನಲ್ಲಿ ನಾನು ಕವಿತಾ ಗೌಡ ಜೊತೆ ಕ್ಲೋಸ್ ಬಾಂಡ್ ಶೇರ್ ಮಾಡಿಕೊಂಡಿದ್ದೆ ಆ ಸಂಬಂಧವನ್ನು ಜನರು ಕೂಡ ಇಷ್ಟಪಟ್ಟಿದ್ದರು.ಸೀರಿಯಲ್‌ ನಂತರವೂ ನಮ್ಮ ಬಾಂಡ್‌ ಹಾಗೆಯೇ ಇತ್ತು. ನಾನು ಹಾಗೂ ಕವಿತಾ ಪ್ರೆಗ್ನೆಂಟ್‌ ಆಗಿದ್ದರ ಹಿಂದೆ ಯಾವುದೇ ಪ್ಲ್ಯಾನ್‌ ಇದ್ದಿರಲಿಲ್ಲ. ಎಲ್ಲವೂ ಕಾಕತಾಳೀಯವಷ್ಟೇ. ಸೀರಿಯಲ್‌ನಲ್ಲಿ ಇದ್ದಾಗಲೂ ಹೀಗೆ ನಮ್ಮ ರಿಯಲ್ ಲೈಫ್‌ನಲ್ಲಿ ಕೆಲವೊಂದು ಘಟನೆಗಳು ನಡೆಯುತ್ತಿತ್ತು. 5 ನಿಮಿಷ ಏನೋ ಮಾತನಾಡಬೇಕು ಎಂದು ಕಾಲ್ ಮಾಡ್ತಿದ್ದೆ. ಅಮೇಲೆ ನೋಡಿದ್ರೆ 1 ಗಂಟೆ ಮಾತನಾಡಿರ್ತಿದ್ದೆ. ಇನ್ನು ನಮ್ಮ ಪ್ರೆಗ್ನೆನ್ಸಿ ಲಕ್ಷಣಗಳು ಕೂಡ ಕೆಲವೊಂದು ಸೇಮ್ ಟು ಸೇಮ್ ಇದೆ' ಎಂದಿದ್ದರು.

ಇದನ್ನೂ ಓದಿ: ಅನುಬಂಧ ವೇದಿಕೆಯಲ್ಲಿ ಹೆಣ್ಣು ಮಗುವಿಗೆ ಆಸೆ ಪಟ್ಟಿದ್ದ ಕವಿತಾಗೆ ಗಂಡು ಮಗು, ಗೊಂಬೆಗೂ ಗಂಡೇ ಹುಟ್ಟೋದು ಎಂದ ಫ್ಯಾನ್ಸ್‌!

ಈ ವರ್ಷ ಅನುಬಂಧ ಅವಾರ್ಡ್‌ನಲ್ಲಿ ನೇಹಾ ಗೌಡ ಮತ್ತು ಕವಿತಾ ಗೌಡ ಇಬ್ಬರಿಗೂ ಸೀಮಂತ ಕಾರ್ಯಕ್ರಮ ನಡೆದಿತ್ತು. ವೇದಿಕೆ ಮೇಲೆ ಅದ್ಧೂರಿಯಾಗಿ ಸೀಮಂತ ಮಾಡಿ ಆಗಮಿಸಿದ್ದ ಪ್ರತಿಯೊಬ್ಬ ಗೆಸ್ಟ್‌ ಬಳಿ ಅಕ್ಷತೆ ಹಾಕಿಸಿ ಆಶೀರ್ವಾದ ಮಾಡಿಸಿದ್ದಾರೆ. 'ನನ್ನ ತಾಯಿತನವನ್ನು ಅದ್ಭುತವಾಗಿ ಎಂಜಾಯ್ ಮಾಡುತ್ತಿದ್ದೀನಿ. ಅನುಬಂಧ ಅವಾರ್ಡ್ ಕಾರ್ಯಕ್ರಮಕ್ಕೆ ಬಂದು ಪ್ರತಿಯೊಬ್ಬರ ಆಶೀರ್ವಾದ ಸಿಗುತ್ತಿದೆ, ಪ್ರಮುಖವಾಗಿ ವೀರೇಂದ್ರ ಹೆಗ್ಗಡೆ ಸರ್ ಆಶೀರ್ವಾದ ಸಿಕ್ಕಿದೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ನೇಹಾ ಗೌಡ ಹೇಳಿದ್ದಾರೆ.

ಇದನ್ನೂ ಓದಿ: ಅತ್ತೆಯ ಜೊತೆ ಮುದ್ದಿನ ಪೋಟೋ ಹಂಚಿಕೊಂಡ ನೇಹಾ ಗೌಡ, 'ಗೊಂಬೆ..' ಧರಿಸಿದ್ದ ಸೀರೆಯ ಬೆಲೆ ಇಷ್ಟೊಂದಾ?

Latest Videos

click me!