ಸರಳತೆಯ ಶ್ರೀಮಂತ ಅಪ್ಪು… ಬ್ರಹ್ಮಗಂಟು ನಟಿಗೆ ನಾನು ನಿಮ್ ಜೊತೆ ಫೋಟೊ ತೆಗಿಸ್ಕೋಬೇಕು ಅಂದಿದ್ರಂತೆ ಪವರ್ ಸ್ಟಾರ್

Published : Sep 23, 2024, 03:23 PM ISTUpdated : Sep 23, 2024, 03:26 PM IST

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಿಂಪ್ಲಿಸಿಟಿ ಬಗ್ಗೆ ಬ್ರಹ್ಮಗಂಟು ಸೌಂದರ್ಯ ನೀಡಿರುವ ಹೇಳಿಕೆ ಇದೀಗ ವೈರಲ್ ಆಗುತ್ತಿದೆ. ಇದು ಪುನೀತ್ ರಾಜ್ ಕುಮಾರ್ ಗೋಲ್ಡನ್ ಹಾರ್ಟ್ ಮನುಷ್ಯ ಅನ್ನೋದನ್ನ ಮತ್ತೆ ನಿರೂಪಿಸಿದೆ.   

PREV
17
ಸರಳತೆಯ ಶ್ರೀಮಂತ ಅಪ್ಪು… ಬ್ರಹ್ಮಗಂಟು ನಟಿಗೆ ನಾನು ನಿಮ್ ಜೊತೆ ಫೋಟೊ ತೆಗಿಸ್ಕೋಬೇಕು ಅಂದಿದ್ರಂತೆ ಪವರ್ ಸ್ಟಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar) ಹೆಸರಲ್ಲೇ ಪವರ್ ಇದೆ. ಅವರು ನಮ್ಮನಗಲಿ ವರ್ಷಗಳು ಎರಡು ಕಳೆದರೂ ಸಹ ಇಂದಿಗೂ ಅವರು ನಡೆದುಕೊಂಡು ಬಂದ ದಾರಿ, ಅವರ ಸಿಂಪ್ಲಿಸಿಟಿ, ಅವರ ಡೌನ್ ಟು ಅರ್ಥ್ ನೇಚರನ್ನು ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ನೆನಪಿಸಿಕೊಳ್ಳುತ್ತಿರುತ್ತಾರೆ. 

27

ಸ್ಯಾಂಡಲ್ ವುಡ್ ಗೆ ಹಿಟ್ ಸಿನಿಮಾಗಳನ್ನು ನೀಡಿ, ಡಾ. ರಾಜಕುಮಾರ್ ಮನೆ ಮಗನಾಗಿದ್ದರೂ, ಅವರು ಜನರೊಂದಿಗೆ ಬೆರೆಯುತ್ತಿದ್ದ ರೀತಿ, ಅವರ ಮಾತು, ಅವರ ಮಾಸದ ನಗು ಅವರೇ ಇಲ್ಲದಿದ್ದರೂ ಇನ್ನು ನೂರು ಕಾಲಕ್ಕೂ ನೆನಪಿನಲ್ಲಿ ಉಳಿಯುವಂತಹ ಪವರ್ ಹೊಂದಿದೆ ಅಂದ್ರೆ ತಪ್ಪಾಗಲ್ಲ. ಪುನೀತ್ ಸಿಂಪ್ಲಿಸಿಟಿಗೆ (Simplicity of Puneeth Rajkumar) ಮತ್ತೊಂದು ಉದಾಹರಣೆ ಸಿಕ್ಕಿದೆ. 

37

ಝೀಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬ್ರಹ್ಮಗಂಟು ಧಾರಾವಾಹಿಯಲ್ಲಿ ವಿಲನ್ ಸೌಂದರ್ಯ ಪಾತ್ರದಲ್ಲಿ ನಟಿಸುತ್ತಿರುವ ನಟಿ ಪ್ರೀತಿ ಶ್ರೀನಿವಾಸ್ (Preethi Srinivas)  ತೆಲುಗಿನ ಇಂಟರ್ವ್ಯೂ ಒಂದರಲ್ಲಿ ಪುನೀತ್ ರಾಜ್ ಕುಮಾರ್ ಅವರ ಸಿಂಪ್ಲಿಸಿಟಿ ಬಗ್ಗೆ ಹಾಡಿ ಹೊಗಳಿದ್ದಾರೆ. ಸದ್ಯ ಈ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದೆ. 
 

47

ಬೆಂಗಳೂರಿನಲ್ಲಿ ಕಾಲೇಜಿನಲ್ಲಿ ಓದುತ್ತಿದ್ದ ಸಮಯದಲ್ಲಿ ಪ್ರೀತಿ ಶ್ರೀನಿವಾಸ್, ಕಾಲೇಜಿನ ಬ್ಯೂಟಿ ಕಾಂಟೆಸ್ಟ್ ವಿನ್ನರ್ ಆಗಿದ್ರಂತೆ. ಆವಾಗ ಕಾಲೇಜಿಗೆ ಚೀಫ್ ಗೆಸ್ಟ್ ಆಗಿ ಬಂದಿದ್ದವರು ಪುನೀತ್ ರಾಜ್ ಕುಮಾರ್. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಫೋಟೊ ಆಟೋಗ್ರಾಫ್ ಗಾಗಿ ಹಾಲ್ ನಲ್ಲಿದ್ದ ಎಲ್ಲಾ ಜನರು ಎದ್ದು ಅವರ ಸುತ್ತಲು ಆವರಿಸಿದ್ದರಂತೆ. 
 

57

ವಿನ್ನರ್ ಆಗಿರುವ ಪ್ರೀತಿ ಶ್ರೀನಿವಾಸ್ ಮತ್ತು ಇತರರನ್ನು ಸ್ಟೇಜ್ ಮೇಲೆ ಚೇರ್ ಹಾಕಿ ಕೂರಿಸಿದ್ದರಂತೆ. ಅವರಿಗೆ ಸನ್ಮಾನ ಮಾಡಿದ ನಂತರ, ತುಂಬಾ ಕಡಿಮೆ ಮಾತನಾಡುವ ಪ್ರಿಯಾಂಕ, ತಾವು ಇಂಟ್ರೋವರ್ಟ್ ಆಗಿದ್ರೂನು ಪುನೀತ್ ರಾಜ್ ಕುಮಾರ್ ಜೊತೆ ಫೋಟೊ ತೆಗೆಸಿಕೊಳ್ಳದೇ ಇದ್ರೆ ಹೇಗೆ ಅಂತ, ಪುನೀತ್ ಬಳಿ ತೆರಳಿ ಸರ್ ನಿಮ್ಮ ಜೊತೆ ಒಂದು ಫೋಟೊ ತೆಗೆಸಿಕೊಳ್ಳಬಹುದಾ ಅಂತ ಕೇಳಿದ್ರಂತೆ. 

67

ಅದಕ್ಕೆ ಪುನೀತ್ ರಾಜಕುಮಾರ್, ಅಯ್ಯೋ ನೀವೇ ಇಷ್ಟು ಅಂದವಾಗಿದ್ದೀರಿ, ನಿಮ್ಮ ಜೊತೆ ನಾನು ಫೋಟೊ ತೆಗೆಸಿಕೊಳ್ಳಬೇಕು. ನೀವೇನ್ರಿ ನನ್ನನ್ನ ಕೇಳ್ತಿದ್ದೀರಿ. ಬನ್ನಿ ಬನ್ನಿ ಎಂದು ಪ್ರೀತಿ ಶ್ರೀನಿವಾಸ್ ಜೊತೆ ಫೋಟೊ ತೆಗೆಸಿಕೊಂಡರಂತೆ ಪವರ್ ಸ್ಟಾರ್. 
 

77
Puneeth Rajkumar

ಒಬ್ಬ ಸೂಪರ್ ಸ್ಟಾರ್ ನಟ ಹೀಗೆ ಹೇಳೋದಕ್ಕೆ ಹೇಗೆ ಸಾಧ್ಯ ಅಲ್ವಾ? ಅದಕ್ಕೆ ಹೇಳೋದು ಪುನೀತ್ ರಾಜಕುಮಾರ್ ತುಂಬಾನೆ ಸಿಂಪಲ್, ಡೌನ್ ಟು ಅರ್ಥ್, ಗೋಲ್ಡನ್ ಹಾರ್ಟ್ ಮನುಷ್ಯ ಅಂತ. ಪುಟ್ಟ ಮಗುವಿನಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೆ ಅಪ್ಪುವನ್ನು ಜನ ಅಷ್ಟೊಂದು ಇಷ್ಟಪಡೋದು, ದೇವರಂತೆ ಆರಾಧಿಸೋದೆ ಅವರ ಸಿಂಪ್ಲಿಸಿಟಿ, ಸಹಾಯ ಮಾಡುವ ಅವರ ಗುಣಕ್ಕೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories