ಬಾಲ್ಯದಲ್ಲಿಯೇ ನಾಗ ಮಣಿಕಂಠ ತಂದೆ ನಿಧನರಾದರು. ತಾಯಿ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾದರು. ಮಲ ತಂದೆಯಿಂದ ನಾಗ ಮಣಿಕಂಠಗೆ ಹಲವು ಅವಮಾನಗಳು, ಕಷ್ಟಗಳು ಎದುರಾದವು. ತಾಯಿ ಮೃತಪಟ್ಟಾಗ ಅಂತ್ಯಕ್ರಿಯೆ ಮಾಡಲು ಹಣವಿಲ್ಲದೆ, ಬೇರೊಬ್ಬರ ಬಳಿ ಹಣ ಕೇಳಿದ್ದರು.
ಕಣ್ಣೀರು ಹಾಕುತ್ತಾ ನಾಗ ಮಣಿಕಂಠ ಮಾತನಾಡಿದ ಮಾತುಗಳು ಬಿಗ್ ಬಾಸ್ ಮನೆ ಮಂದಿಯ ಮನವನ್ನೂ ಕಲಕಿದವು. ಅವರು ಕೂಡ ಭಾವುಕರಾದರು. ಮತ್ತೊಂದು ಸಂದರ್ಭದಲ್ಲಿ ಮುಖವಾಡ ತೆಗೆದು ಇದಕ್ಕಿಂತ ಹೆಚ್ಚು ಪಾರದರ್ಶಕವಾಗಿರಲು ಸಾಧ್ಯವಿಲ್ಲ ಬಿಗ್ ಬಾಸ್ ಎಂದಿದ್ದಾರೆ. ಮನೆಯಿಂದ ಹೊರಗೆ ಹೋದ ನಂತರ ನನ್ನ ಜೀವನ ಏನೆಂದು ನನಗೆ ತಿಳಿದಿಲ್ಲ ಎಂದು ಅತ್ತಿದ್ದಾರೆ.