ಸೀರಿಯಲ್​ ನಟ-ನಟಿಯರೆಲ್ಲಾ ಯಾವ ಡಾಕ್ಟರ್​ ಹತ್ರ ಹೋಗ್ತಾರೆ? ಅಡ್ರೆಸ್​ಗಾಗಿ ಜಾಲತಾಣದಲ್ಲಿ ತಡಕಾಟ

Published : Jun 09, 2026, 08:04 PM IST

ಕನ್ನಡ ಸೀರಿಯಲ್‌ಗಳಲ್ಲಿ ನಾಯಕಿಯರು ರೌಡಿಗಳಿಗೆ ಹೊಡೆಯುವ ಫೈಟಿಂಗ್ ದೃಶ್ಯಗಳು ಸಾಮಾನ್ಯ. ಆದರೆ, ಫೈಟಿಂಗ್‌ನಲ್ಲಿ ರಕ್ತಸಿಕ್ತರಾಗುವ ಇವರ ಗಾಯಗಳು ಮರುಕ್ಷಣವೇ ಮಾಯವಾಗುವುದನ್ನು ನೋಡಿದ ವೀಕ್ಷಕರು, ಇಷ್ಟು ಬೇಗ ಗುಣಪಡಿಸುವ ಆ ಡಾಕ್ಟರ್ ಯಾರೆಂದು ತಮಾಷೆಯಾಗಿ ಪ್ರಶ್ನಿಸುತ್ತಿದ್ದಾರೆ.

PREV
16
ಸೀರಿಯಲ್​​ಗಳಲ್ಲಿ ಫೈಟಿಂಗ್​ ಅಬ್ಬಬ್ಬಾ

ಸೀರಿಯಲ್​​ಗಳಲ್ಲಿ ಫೈಟಿಂಗ್​ ಎಂದರೆ ಅಬ್ಬಬ್ಬಾ ಅದನ್ನು ನೋಡಿದ್ರೆ ಮೈ ಝುಂ ಎನ್ನುವಂತೆ ಇರುತ್ತದೆ. ಅದರಲ್ಲಿಯೂ ನಾಯಕಿಯರು ವೃತ್ತಿಪರ ರೌಡಿಗಳನ್ನು ಎತ್ತಿ ಎತ್ತಿ ಹಾಕಿ ನೋಡುವಾಗ ಎಷ್ಟೋ ಮಹಿಳೆಯರು ಕುಳಿತಲ್ಲಿಂದಲೇ ಖುರ್ಚಿಯ ಮೇಲೆ ಜಿಗಿದು ಜಿಗಿದು ಬೀಳುವುದು ಇದೆ.

26
ನಟಿಯರ ಭರ್ಜರಿ ಫೈಟಿಂಗ್​

ನಿನ್ನೆ ತಾನೇ ಅಮೃತಧಾರೆ (Amruthadhaare Serial) ಭೂಮಿಕಾ ನೋಡಿದ್ರಲ್ವಾ? ಮಿಂಚುವನ್ನು ಕಾಪಾಡಲು ಹೇಗೆ ರೌಡಿಗಳ ಜೊತೆ ಫೈಟಿಂಗ್ ಮಾಡಿದ್ಲು ಅಂತ. ಇನ್ನೂ ಅವಳು ಕೈಯನ್ನೇ ಸರಿ ಎತ್ತಿರಲಿಲ್ಲ, ಒಬ್ಬ ರೌಡಿ ಮರದ ಮೇಲೆ ಹೋಗಿ ಕುಳಿತುಬಿಟ್ಟ. ಇದಕ್ಕೂ ಮುನ್ನ ನಾ ನಿನ್ನ ಬಿಡಲಾರೆ ಸೀರಿಯಲ್​ ದುರ್ಗಾ, ಅದಕ್ಕೂ ಮುನ್ನ ಅಣ್ಣಯ್ಯ ಸೀರಿಯಲ್​ನಲ್ಲಿನ ನಟಿ ಪಾರು, ಇನ್ನುಕಲರ್ಸ್​ ಕನ್ನಡಕ್ಕೆ ಹೋಗೋದಾದ್ರೆ ಭಾಗ್ಯಲಕ್ಷ್ಮಿ ಭಾಗ್ಯ... ಎಲ್ಲರೂ ರೌಡಿಗಳನ್ನು ಮಟ್ಟ ಹಾಕಿದವರೇ. ಅದು ಕೂಡ ಸೀರೆಯಲ್ಲಿ.

36
ವೀಕ್ಷಕರಿಗೆ ಡೌಟ್​

ಇರಲಿ ಬಿಡಿ. ಮಹಿಳಾ ವೀಕ್ಷಕರು ಖುಷಿ ಪಟ್ಟರೆ ಅದಕ್ಕಿಂತ ಸೀರಿಯಲ್​ ನಟ-ನಟಿಯರಿಗೆ, ನಿರ್ದೇಶಕರಿಗೆ ಬೇರೇನು ಖುಷಿ ಹೇಳಿ. ಈ ರೀತಿ ಇದ್ದರೇನೇ ಟಿಆರ್​ಪಿ ಹೆಚ್ಚಿಗೆ ಬರುವುದು. ಇವೆಲ್ಲವನ್ನೂ ಪಕ್ಕಕ್ಕಿಟ್ಟು ನೋಡೋದಾದ್ರೆ ಈಗ ವೀಕ್ಷಕರಿಗೆ ಭಾರಿ ಡೌಟ್​ ಒಂದು ಶುರುವಾಗಿದೆ.

46
ಯಾವ ಡಾಕ್ಟರ್​ ಹತ್ರ ಹೋಗ್ತಾರೆ?

ಅದೇನಪ್ಪಾ ಎಂದರೆ ಈ ಸೀರಿಯಲ್​ ನಟ, ನಟಿಯರು ಯಾವ ಡಾಕ್ಟರ್​ ಹತ್ರ ಹೋಗ್ತಾರೆ ಎಂದು. ಅದಕ್ಕೆ ಕಾರಣ ಏನು ಗೊತ್ತಾ?ನಟ ಆಗ್ಲಿ, ನಟಿಯಾಗ್ಲಿ ಅವರು ಫೈಟಿಂಗ್​ ಮಾಡುವಾಗ ಮೈಯೆಲ್ಲಾ ರಕ್ತವಾಗಿರುತ್ತದೆ. ಬಾಯಿ, ಮುಖ, ತುಟಿ ಎಲ್ಲಾ ಒಡೆದು ರಕ್ತ ಸೋರುತ್ತಿರುತ್ತದೆ. ನಿನ್ನೆ ಭೂಮಿಕಾಗೆ ಆಯ್ತಲ್ಲ ಹಾಗೆನೇ.

56
ವಿಳಾಸಕ್ಕಾಗಿ ತಡಕಾಟ

ಆದ್ರೆ, ಮರು ಕ್ಷಣವೇ ಚಿಕ್ಕದೊಂದು ಕಪ್ಪು ಗುರುತು ಕಂಡು ರಕ್ತವೆಲ್ಲಾ ಮಾಯವಾಗಿ ಬಿಡುತ್ತದೆ, ಮುಖದ ಮೇಲೆ ಗಾಯವೂ ಇರುವುದಿಲ್ಲ! ಫೈಟಿಂಗ್​ ಆಗಿತ್ತು ಎಂದು ತೋರಿಸಲು ಅಲ್ಲಲ್ಲಿ ಒಂದು ಚೂರು ಕಪ್ಪು ಕಲೆಯನ್ನೋ, ಗಾಯವನ್ನೋ ಮಾಡಿರುತ್ತಾರೆ. ಹಾಗಿದ್ರೆ, ಇಷ್ಟು ಬೇಗ ಗುಣಪಡಿಸಲು ಡಾಕ್ಟರ್​ ಯಾರಪ್ಪಾ, ಅವರ ವಿಳಾಸ ಕೊಡಿ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

66
ಭೂಮಿಕಾ ನೋಡಿದ್ಮೇಲೆ ಪ್ರಶ್ನೆ!

ಅಮೃತಧಾರೆ ಸೀರಿಯಲ್​ನಲ್ಲಿ ಭೂಮಿಕಾ ಮಾಡಿದ ಫೈಟಿಂಗ್​ನಲ್ಲಿ ಬಂದ ರಕ್ತ, ಮರುಕ್ಷಣವೇ ರಕ್ತವೆಲ್ಲಾ ಮಾಯವಾಗ ಸ್ವಲ್ಪ ಕಪ್ಪುಕಲೆ ಮಾತ್ರ ಇರೋದನ್ನು ನೋಡಿ ಹೀಗೆ ಕಾಲೆಳೆಯುತ್ತಿದ್ದಾರೆ ತರ್ಲೆಗಳು!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories