Published : Jan 21, 2026, 10:45 AM ISTUpdated : Jan 21, 2026, 10:57 AM IST
Gilli Nata: ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟ, ತಮ್ಮ ಊರಿನಲ್ಲಿ ನಡೆಸಿದ ವಿಜಯ ಯಾತ್ರೆಯ ಬಳಿಕ, ನೇರ ಬೆಂಗಳೂರಿಗೆ ಬಂದು, ತಮಗೆ ಹರಸಿ ಹಾರೈಸಿದ್ದ ನೆಚ್ಚಿನ ನಟ ಶಿವರಾಜಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದು ಬಂದಿದ್ದಾರೆ.
ಕಳೆದ ಮೂರು ತಿಂಗಳಿಂದ ಭರ್ಜರಿ ಮನರಂಜನೆ ನೀಡಿದ್ದ ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಅದ್ಧೂರಿಯಾಗಿ ಮುಕ್ತಾಯ ಕಂಡಿದೆ. ವೀಕ್ಷಕರು ಬಯಸಿದಂತೆ ತಮ್ಮ ಕಾಮಿಡಿಯಿಂದಲೇ ಮನರಂಜಿಸಿದ ಗಿಲ್ಲಿ ನಟ ವಿನ್ನರ್ ಪಟ್ಟ ಗೆದ್ದುಕೊಂಡಿದ್ದಾರೆ. ಇದೀಗ ಶಿವಣ್ಣರನ್ನು ಭೇಟಿಯಾಗಿ ಆಶೀರ್ವಾದ ಪಡೆದು ಬಂದಿದ್ದಾರೆ.
26
ಗಿಲ್ಲಿ ನಟ
ಗಿಲ್ಲಿ ನಟ ಬರೋಬ್ಬರಿ 40 ಕೋಟಿಗೂ ಅಧಿಕ ವೋಟ್ ಗಳ ಮೂಲಕ ಬಿಗ್ ಬಾಸ್ ಕನ್ನಡದ ಈ ಬಾರಿಯ ವಿನ್ನರ್ ಆಗಿ ಗೆದ್ದು ಬೀಗಿದ್ದರು. ಬಳಿಕ ಹುಟ್ಟೂರಿನಲ್ಲಿ ಅಭೂತಪೂರ್ವವಾದ ವಿಜಯಯಾತ್ರೆ ಕೂಡ ನಡೆದಿತ್ತು. ಗಿಲ್ಲಿ ನಟನ ಮನರಂಜನೆಯ ಮತ್ತೊಬ್ಬ ಅಭಿಮಾನಿಯಾಗಿರುವ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರು ಕೂಡ ಈ ಹಿಂದೆ ಮಾತನಾಡಿ, ಈ ಬಾರಿ ಬಿಗ್ ಬಾಸ್ ಗೆಲ್ಲೋದು ಗಿಲ್ಲೀನೇ ಎಂದು ಹೇಳಿದ್ದರು.
36
ಭರ್ಜರಿ ಮನರಂಜನೆ ನೀಡಿದ್ದ ಗಿಲ್ಲಿ
ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದ ಕೊನೆಯವರೆಗೂ ತಮ್ಮ ಕಾಮಿಡಿ, ಪಂಚ್ ಲೈನ್, ಡೈಲಾಗ್ ಗಳ ಮೂಲಕವೇ ಮನೆಯ ಒಳಗೆ ಹಾಗೂ ಹೊರಗೆ ಇದ್ದವರನ್ನು ನಗಿಸಿದ್ದು ಅಂದ್ರೆ ಅದು ಗಿಲ್ಲಿ ನಟ. ಶಿವಣ್ಣ ಕೂಡ ಗಿಲ್ಲಿಯ ಕಾಮಿಡಿಗೆ ಅಭಿಮಾನಿಯಾಗಿದ್ದರು. ಗಿಲ್ಲಿ ತಮ್ಮ ಸ್ಪಾಟ್ ಕಾಮಿಡಿಗೆ ಜನಪ್ರಿಯತೆ ಪಡೆದಿದ್ದರು. ಬಿಗ್ ಬಾಸ್ ಮನೆಯಲ್ಲೂ ತಮ್ಮ ಸಮಸ್ಯೆಗಳನ್ನು ಎಲ್ಲೂ ತೋರಿಸದೆ ಎಲ್ಲರನ್ನೂ ನಗಿಸುತ್ತಾ, ನಗುತ್ತಾ ವಿನ್ನರ್ ಪಟ್ಟವನ್ನು ಪಡೆದಿದ್ದಾರೆ.
ಇದೀಗ ಊರಿನಿಂದ ಮರಳಿರುವ ಗಿಲ್ಲಿ ನಟ ಬೆಂಗಳೂರಿಗೆ ತೆರಳಿ ನಾಗಾವರದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಶಿವಣ್ಣ ಮನೆಗೆ ತೆರಳಿ ಶಿವಣ್ಣ ಹಾಗೂ ಗೀತಕ್ಕಾ ಜೊತೆ ಕುಳಿತು ಮಾತನಾಡಿ, ಅವರ ಆಶೀರ್ವಾದ ಪಡೆದಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಶಿವಣ್ಣ ಜೊತೆಗೆ ಮಾತುಕತೆ ನಡೆಸಿ, ಕೇಕ್ ಕತ್ತರಿಸಿ, ಶಿವಣ್ಣನಿಗೆ ತಿನ್ನಿಸಿದ ಗಿಲ್ಲಿ, ಸ್ವಲ್ಪ ಸಮಯ ಇದ್ದು, ಶಿವಣ್ಣ- ಗೀತಕ್ಕಾ ಆಶೀರ್ವಾದ ಪಡೆದು ಅಲ್ಲಿಂದ ಹೊರಟಿದ್ದಾರೆ.
56
ಶಿವಣ್ಣನಿಗೆ ಗಿಲ್ಲಿ ಮೊದಲೇ ಪರಿಚಯ
ಶಿವರಾಜ್ಕುಮಾರ್ ಅವರದ್ದು ಹಾಗೂ ಗಿಲ್ಲಿಯದ್ದು ರಿಯಾಲಿಟಿ ಶೋನಿಂದಲೇ ಪರಿಚಯ. ಮೊದಲೇ ಪರಿಚಯ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಈ ಹಿಂದಿನ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋದಲ್ಲಿ ಶಿವರಾಜ್ಕುಮಾರ್ ಜಡ್ಜ್ ಆಗಿದ್ದರು. ಸ್ಪರ್ಧಿಯಾಗಿದ್ದ ಗಿಲ್ಲಿ , ತಮ್ಮ ಪ್ರಾಪರ್ಟಿ ಕಾಮಿಡಿ ಮೂಲಕ ಎಲ್ಲರನ್ನೂ ನಗಿಸಿದ್ದರು. ಆ ಕಾರ್ಯಕ್ರಮದಿಂದಾಗಿ ಶಿವಣ್ಣನಿಗೂ ಸಹ ಗಿಲ್ಲಿ ಎಂದರೆ ಅಭಿಮಾನ. ಹಾಗಾಗಿಯೇ ಗಿಲ್ಲಿಗೆ ಈ ಹಿಂದೆಯೇ ಶುಭ ಹಾರೈಸಿದ್ದರು.
66
ಶಿವಣ್ಣ ಜೊತೆ ಸಿನಿಮಾ
ಇನ್ನು ಗಿಲ್ಲಿ ನಟ ಶಿವರಾಜಕುಮಾರ್ ಅವರ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಬಿಗ್ ಬಾಸ್ ಗೆ ತೆರಳುವ ಮುನ್ನವೇ ಈ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗುತ್ತಿದ್ದು, ಮಲ್ಟಿ ಸ್ಟಾರ್ ಗಳು ನಟಿಸುತ್ತಿರುವ ಸಿನಿಮಾ ಇದಾಗಿದೆ. ಇನ್ನು ಬಿಗ್ ಬಾಸ್ ವಿಜೇತರಾದ ಬಳಿಕ ಗಿಲ್ಲಿಗೆ ಮತ್ತಷ್ಟು ಅವಕಾಶಗಳು ಹುಡುಕಿ ಬರುವ ಸಾಧ್ಯತೆ ಕೂಡ ಇದೆ. ಗಿಲ್ಲಿ-ಶಿವಣ್ಣ ಭೇಟಿ ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.