ಫಸ್ಟ್‌ ಟೈಮ್ ರಿಯಲ್ ಪತಿ, ಮುದ್ದಾದ ಮಗನ ಪರಿಚಯ ಮಾಡಿಕೊಟ್ಟ Bhagyalakshmi Serial ಸುಷ್ಮಾ ಕೆ ರಾವ್

Published : Jan 20, 2026, 09:42 PM ISTUpdated : Jan 20, 2026, 10:00 PM IST

Bhagyalakshmi Serial Sushma K Rao: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ ರಾವ್‌ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು, 25 ವರ್ಷಗಳಾಗಿವೆ, ಈ ಖುಷಿಯಲ್ಲಿ ಇವರ ಮಗ, ಪತಿಯ ಪರಿಚಯ ಮಾಡಿಕೊಡಲಾಗಿದೆ. 

PREV
15
ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ

ಹೌದು, ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಆಗಿದ್ದು, ಅನುಬಂಧ ಅವಾರ್ಡ್ಸ್‌ನಲ್ಲಿ ಸುಷ್ಮಾ ಕೆ ರಾವ್‌ ಅವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಆ ವೇಳೆ ಅವರಿಗೆ ವಿಶೇಷ ಸರ್ಪ್ರೈಸ್‌ ಕೂಡ ನೀಡಲಾಗಿದೆ.

25
ಫಸ್ಟ್‌ ಟೈಮ್‌ ಪತಿ ಪರಿಚಯ

ಮೊದಲ ಬಾರಿಗೆ ಸುಷ್ಮಾ ಕೆ ರಾವ್‌ ಅವರ ಪತಿಯನ್ನು ಪರಿಚಯ ಮಾಡಿಕೊಡಲಾಗಿದೆ. ಹೌದು, ಅನುಬಂಧ ಅವಾರ್ಡ್ಸ್‌ನಲ್ಲಿ ಸುಷ್ಮಾ ಪತಿ, ಮಗ ಕೂಡ ಬಂದು ಸರ್ಪ್ರೈಸ್‌ ಕೊಟ್ಟಿದ್ದಾರೆ.

35
ಎರಡನೇ ಮದುವೆಯಾಗಿದ್ದರು

ಸುಷ್ಮಾ ಕೆ ರಾವ್‌ ಅವರು ಎರಡನೇ ಮದುವೆಯಾಗಿದ್ದರು. ಎರಡನೇ ಮದುವೆ ವಿಷಯವನ್ನು ಅವರು ಎಲ್ಲಿಯೂ ಹೇಳಿರಲಿಲ್ಲ. ಖಾಸಗಿ ಜೀವನವನ್ನು ಸಾರ್ವಜನಿಕ ಜೀವನದಿಂದ ದೂರ ಇಟ್ಟಿದ್ದರು. ಅನುಬಂಧ ಅವಾರ್ಡ್ಸ್‌ ಶೋನ ಪ್ರೋಮೋ ರಿಲೀಸ್‌ ಆಗಿದ್ದು, ಅನುಬಂಧ ಅವಾರ್ಡ್ಸ್ 2025 ಕಾರ್ಯಕ್ರಮವು ಇದೇ ಶನಿ-ಭಾನು-ಸೋಮ, ಸಂಜೆ 7ಕ್ಕೆ ಪ್ರಸಾರ ಆಗಲಿದೆ. 

45
ಯಾರು ಜಾಸ್ತಿ ಹೊಡೆಯೋದು?

ಸೃಜನ್‌ ಲೋಕೇಶ್‌ ಅವರು ಸುಷ್ಮಾ ಕೆ ರಾವ್‌ ಅವರ ಮಗನಿಗೆ , “ಅಮ್ಮ, ನಿನಗೆ ಜಾಸ್ತಿ ಹೊಡಿತಾರಾ? ಅಪ್ಪನಿಗೆ ಹೊಡಿತಾರಾ?” ಎಂದು ಪ್ರಶ್ನೆ ಕೇಳಿದ್ದಾರೆ. ಆಗ ಆರ್ಯನ್‌ ಅವರು, “ಅಮ್ಮ ನನಗೆ ಹೊಡೆಯುತ್ತಾರೆ” ಎಂದು ಹೇಳಿದ್ದಾರೆ. ಆಮೇಲೆ ಸುಷ್ಮಾ ಅವರು, “ನಾನು ಯಾವಾಗ ನಿನಗೆ ಪೊರಕೆಯಲಿ ಹೊಡೆದನೋ?” ಎಂದು ಪ್ರಶ್ನೆ ಮಾಡಿದ್ದಾರೆ. “ಕುಟುಂಬದಿಂದಲೇ ನಾನು ಇಲ್ಲಿರೋದು” ಎಂದು ಸುಷ್ಮಾ ಹೇಳಿದ್ದಾರೆ.

55
ಮೊದಲ ಮದುವೆ

ನಿರ್ದೇಶಕ ಪ್ರೀತಂ ಗುಬ್ಬಿ ಜೊತೆ ಸುಷ್ಮಾ ಮದುವೆಯಾಗಿತ್ತು. ಮನಸ್ತಾಪದಿಂದ ಇವರಿಬ್ಬರು ದೂರ ಆದರು. ಡಿವೋರ್ಸ್‌ ಹಾಗೂ ಎರಡನೇ ಮದುವೆ ಬಗ್ಗೆ ಮಾತನಾಡದ ಸುಷ್ಮಾ ಅವರು ಹತ್ತು ವರ್ಷಗಳ ಬಳಿಕ ಧಾರಾವಾಹಿಯಲ್ಲಿ ನಟಿಸಲು ಒಪ್ಪಿದ್ದರು, ಅದೇ ಭಾಗ್ಯಲಕ್ಷ್ಮೀ

ಗುಪ್ತಗಾಮಿನಿ, ಸೊಸೆ ತಂದ ಸೌಭಾಗ್ಯ ಮುಂತಾದ ಧಾರಾವಾಹಿಗಳಲ್ಲಿ ಸುಷ್ಮಾ ನಟಿಸಿದ್ದರು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories