ಸದ್ದಿಲ್ಲದೇ ಎಂಗೇಜ್​ಮೆಂಟ್​ ಆದ ಗಿಚ್ಚಿ ಗಿಲಿಗಿಲಿ ಇನ್ನೊಂದು ಜೋಡಿ: ಮಾನಸಾ-ಶಿವು ಫೋಟೋಸ್​ ಇಲ್ಲಿವೆ...

Published : Nov 27, 2025, 02:26 PM IST

ಗಿಚ್ಚಿ ಗಿಲಿಗಿಲಿ ಹಾಗೂ ಮಜಾಭಾರತ ಖ್ಯಾತಿಯ ಹಾಸ್ಯ ಕಲಾವಿದರಾದ ಶಿವಕುಮಾರ್ ಮತ್ತು ಮಾನಸಾ ಗುರುಸ್ವಾಮಿ ಜೋಡಿ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.  

PREV
16
ರಿಯಾಲಿಟಿ ಷೋ ಜೋಡಿ

ಸಿನಿಮಾ ಮಾತ್ರವಲ್ಲದೇ ಸೀರಿಯಲ್​, ರಿಯಾಲಿಟಿ ಷೋಗಳ ಜೋಡಿಗಳು ಮದುವೆಯಾಗುವುದು ಹೊಸ ವಿಷಯವೇನಲ್ಲ. ಇದಾಗಲೇ ಗಿಚ್ಚಿ ಗಿಲಿಗಿಲಿ ಷೋ, ಮಜಾಭಾರತ ರಿಯಾಲಿಟಿ ಷೋಗಳ ಜೋಡಿ ಜಗಪ್ಪ, ಸುಷ್ಮಿತಾ ಗೌಡ ಅವರ ಮದುವೆಯಾಗಿದೆ. ಸರಿಗಮಪ ಖ್ಯಾತಿಯ ಪೃಥ್ವಿ ಭಟ್‌, ಅಭಿಷೇಕ್‌... ಹೀಗೆ ಕೆಲವು ಜೋಡಿಗಳು ಮದುವೆಯಾಗಿದ್ದಿವೆ.

26
ಸದ್ದಿಲ್ಲದೇ ಎಂಗೇಜ್​ಮೆಂಟ್​

ಇದೀಗ ಗಿಚ್ಚಿಗಿಲಿಗಿಲಿ ಹಾಗೂ ಮಜಾಭಾರತ್​ ಷೋನ ಇನ್ನೊಂದು ಜೋಡಿ ಸದ್ದಿಲ್ಲದೇ ಎಂಗೇಜ್​ಮೆಂಟ್​ ಆಗಿದೆ. ಅವರೇ ಹಾಸ್ಯ ಕಲಾವಿದ ಶಿವಕುಮಾರ್​ ಮತ್ತು ಮಾನಸಾ ಗುರುಸ್ವಾಮಿ (Gicchi Giligili pair engagement) ಜೋಡಿ.

36
ಗಪ್​ಚುಪ್​ ಜೋಡಿ

ಇದಾಗಲೇ ಇವರಿಬ್ಬರೂ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡಿದ್ದರೂ, ಇಬ್ಬರೂ ಗಪ್​ಚುಪ್​ ಇದ್ದರು. ಅದರ ಬಗ್ಗೆ ಏನೂ ಹೇಳಿರಲಿಲ್ಲ.

46
ಫೋಟೋ ವೈರಲ್​

ಅವರ ಎಂಗೇಜ್​ಮೆಂಟ್​ ಎನ್ನಲಾದ ಫೋಟೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಆದರೆ ಇದು ಹೇಳಿ-ಕೇಳಿ ಎಐ ಯುಗ. ಯಾವುದು ಸತ್ಯ, ಯಾವುದು ಸುಳ್ಳು ಎಂದು ತಿಳಿಯುವುದೇ ಕಷ್ಟ. ಆದ್ದರಿಂದ ಇದು ಕೂಡ ಕನ್​ಫರ್ಮ್​ ಇರಲಿಲ್ಲ. ಆದರೆ ಅದು ನಿಜವಾಗಿದೆ.

56
ಸೀರಿಯಲ್​ನಲ್ಲಿ ನಟನೆ

ನೀ ಇರಲು ಜೊತೆಯಲಿ ಧಾರಾವಾಹಿಯಲ್ಲಿ ಮಾನಸಾ ಗುರುಸ್ವಾಮಿ ಅವರು ನಟಿಸುತ್ತಿದ್ದಾರೆ. ಈ ಹಿಂದೆ ಇವರು ಕೂಡ ಮಜಾಭಾರತ, ಗಿಚ್ಚಿ ಗಿಲಿಗಿಲಿ ಶೋನಲ್ಲಿ ಭಾಗವಹಿಸಿದ್ದರು. ಕಾಮಿಡಿ ಶೋನಲ್ಲಿಯೇ ಭಾಗವಹಿಸಿ ಹೆಸರು ಗಳಿಸಿದ್ದಾರೆ.

66
ಸೆಲೆಬ್ರಿಟಿಗಳ ಆಗಮನ

ಅಂದಹಾಗೆ ಇವರಿಬ್ಬರ ನಿಶ್ಚಿತಾರ್ಥ ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ನಡೆದಿದೆ. ಕಾರ್ಯಕ್ರಮದಲ್ಲಿ ಹಲವಾರು ಸೆಲೆಬ್ರಿಟಿಗಳು ಆಗಮಿಸಿ ಆಶೀರ್ವದಿಸಿದ್ದಾರೆ. ನ್ಯೂಸ್​ಬೀಟ್​ ಕನ್ನಡ ಇವರ ಎಂಗೇಜ್​ಮೆಂಟ್​ ಫೋಟೋಗಳನ್ನು ಶೇರ್ ಮಾಡಿಕೊಂಡಿದೆ.

Read more Photos on
click me!

Recommended Stories