ಅಮೃತಧಾರೆ ಧಾರಾವಾಹಿಯಲ್ಲಿ, ಅಪ್ಪನ ಕುರಿತ ಹಾಡು ನೋಡುತ್ತಿದ್ದ ಮಗ ಆಕಾಶ್, ಕೊನೆಗೂ ತನ್ನ ತಂದೆ ಯಾರೆಂದು ಭೂಮಿಕಾಳನ್ನು ಪ್ರಶ್ನಿಸಿದ್ದಾನೆ. ಮಗನ ಅನಿರೀಕ್ಷಿತ ಪ್ರಶ್ನೆಯಿಂದ ತಬ್ಬಿಬ್ಬಾದ ಭೂಮಿಕಾ ಮುಂದೇನು ಮಾಡಲಿದ್ದಾಳೆ ಎನ್ನುವ ಕುತೂಹಲ ಮೂಡಿದೆ.
ಆದರೆ, ಇದೀಗ ಆ ಸನ್ನಿವೇಶ ಕೂಡ ಬಂದೇ ಬಿಟ್ಟಿದೆ. ಅಪ್ಪನ ಕುರಿತಾದ ಹಾಡನ್ನು ಟಿವಿಯಲ್ಲಿ ಆಕಾಶ್ ನೋಡುತ್ತಿದ್ದಾಗ ಅದನ್ನು ಆಫ್ ಮಾಡಿದ ಭೂಮಿಕಾ, ಮಗನಿಗೆ ಬೈದಿದ್ದಾಳೆ. ಪದೇ ಪದೇ ಇಂಥ ಹಾಡು ಯಾಕೆ ನೋಡ್ತಿ ಎಂದು ಪ್ರಶ್ನಿಸಿದ್ದಾಳೆ.
57
ಅಪ್ಪ ಯಾರು?
ಅದಕ್ಕೆ ಮಲ್ಲಿ, ಹಾಡು ನೋಡಿದ್ರೆ ಏನಾಯ್ತು? ಅವನೇನು ಅಪ್ಪನ ಬಗ್ಗೆ ಕೇಳಲಿಲ್ವಲ್ಲಾ ಎಂದಿದ್ದಾಳೆ. ಇದೇ ಸರಿಯಾದ ಸಮಯ ಎಂದುಕೊಂಡ ಆಕಾಶ್, ತನ್ನ ಅಪ್ಪ ಯಾರು ಎನ್ನುವ ಪ್ರಶ್ನೆ ಮಾಡಿಯೇ ಬಿಟ್ಟಿದ್ದಾನೆ.
67
ತಬ್ಬಿಬ್ಬಾದ ಭೂಮಿಕಾ
ಇದುವರೆಗೂ ನೀನು ಅಪ್ಪನ ಬಗ್ಗೆ ಏನೂ ಹೇಳಲಿಲ್ಲವಲ್ಲ, ಅಪ್ಪ ಯಾರು ಎಂದು ಭೂಮಿಕಾಳ ಬಳಿ ಕೇಳಿದಾಗ ಭೂಮಿಕಾ ತಬ್ಬಿಬ್ಬಾಗಿ ಹೋಗಿದ್ದಾಳೆ.
77
ಮುಂದಿನ ನಡೆ ಏನು
ಅಲ್ಲಿಗೆ ಈಗ ಅವಳಿಗೆ ಇರುವ ಆಯ್ಕೆ ಒಂದೇ. ಅದು ಆ ಮನೆ ಚೇಂಜ್ ಮಾಡುವುದು. ಆದರೆ ಇದಾಗಲೇ ಸತ್ಯ ಅರಿತಿರೋ ಆಕಾಶ್ ಅಂತೂ ಅದಕ್ಕೆ ಒಪ್ಪಲ್ಲ ಎನ್ನುವುದು ಅಷ್ಟೇ ಸತ್ಯ. ಭೂಮಿಕಾ ಮುಂದಿನ ನಡೆ ಏನು?