ಗಿಚ್ಚಿ ಗಿಲಿಗಿಲಿ ಪ್ರಶಾಂತ್ ಬಾಳಲ್ಲಿ ಶುರುವಾಯ್ತು ಹೊಸ ಅಧ್ಯಾಯ: ಮದುವೆ ಶಾಸ್ತ್ರಗಳ ಕ್ಯೂಟ್​ ಫೋಟೋಸ್​ ಇಲ್ಲಿವೆ

Published : Jul 03, 2026, 05:45 PM IST

'ಗಿಚ್ಚಿ ಗಿಲಿಗಿಲಿ' ಖ್ಯಾತಿಯ ಹಾಸ್ಯ ನಟ ಪ್ರಶಾಂತ್ ಅವರು ತಮ್ಮ ಐದು ವರ್ಷಗಳ ಪ್ರೇಯಸಿ, ನಟಿ ಕೃತಿ ಗೌಡ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಜುಲೈ 4-5 ರಂದು ಮದುವೆ ನಡೆಯಲಿದ್ದು, ಚಪ್ಪರದ ಪೂಜೆಯಂತಹ ಶಾಸ್ತ್ರಗಳು ನೆರವೇರುತ್ತಿವೆ.

PREV
16
ಗಿಚ್ಚಿ ಗಿಲಿಗಿಲಿ ಪ್ರಶಾಂತ್​

ಗಿಚ್ಚಿ ಗಿಲಿಗಿಲಿ ಸೇರಿದಂತೆ ಕೆಲವು ರಿಯಾಲಿಟಿ ಷೋಗಳ ಮೂಲಕ ಮನೆ ಮಾತಾಗಿರುವ ನಟ ಪ್ರಶಾಂತ್​ ಅವರ ಮದುವೆ ನಾಳೆ ಮತ್ತು ನಾಡಿದ್ದು (ಜುಲೈ 4-5) ನಡೆಯಲಿದೆ. ಗಿಚ್ಚಿ ಗಿಲಿಗಿಲಿ’ ಕಾರ್ಯಕ್ರಮದ ಮೂರೂ ಸೀಸನ್‌ಗಳಲ್ಲಿ ಹಾಸ್ಯದ ಹೊಳೆ ಹರಿಸಿದವರು ಪ್ರಶಾಂತ್ ಗೌಡ. ‘ಕ್ವಾಟ್ಲೆ ಕಿಚನ್’ ಕಾರ್ಯಕ್ರಮದಲ್ಲಿ ವಿನ್ನರ್ ಆಗಿರುವ ಪ್ರಶಾಂತ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿದ್ದಾರೆ.

26
ಚಪ್ಪರದ ಪೂಜೆ

ಇಂದು ಮದುವೆಯ ಮುನ್ನಾದಿನದ ಚಪ್ಪರ ಪೂಜೆ ಸೇರಿದಂತೆ ವಿವಿಧ ಶಾಸ್ತ್ರಗಳು ನಡೆಯುತ್ತಿದ್ದು, ಅದರ ಫೋಟೋಗಳು ವೈರಲ್​ ಆಗಿವೆ. ಅವರ ಅಮ್ಮ ಚಪ್ಪರ ಶಾಸ್ತ್ರ ನೆರವೇರಿಸುತ್ತಿದ್ದು, ಮನೆಗೆ ಬಂದಿರುವ ಅತಿಥಿಗಳು ಅದರಲ್ಲಿ ಪಾಲ್ಗೊಂಡಿರುವುದನ್ನು ನೋಡಬಹುದಾಗಿದೆ.

36
ಕೃತಿ ಗೌಡ ಜೊತೆ ಸಪ್ತಪದಿ

ಪ್ರಶಾಂತ್‌ ಅವರು ಕೃತಿ ಗೌಡ ಅವರನ್ನು ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯವರ ಒಪ್ಪಿಗೆ ಪಡೆದು ಈ ಜೋಡಿ ಮದುವೆ ಆಗ್ತಿದೆ. "ನಮ್ಮದು ಐದು ವರ್ಷಗಳ ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಮೊದಲು ನಾನೇ ಅವಳಿಗೆ ಮದುವೆಯಾಗುತ್ತೀಯಾ ಎಂದು ಪ್ರಪೋಸ್ ಮಾಡಿದ್ದೆ" ಎಂದು ಪ್ರಶಾಂತ್ ಈ ಹಿಂದೆ ಹೇಳಿಕೊಂಡಿದ್ದರು.

46
ಟ್ರೋಲ್​ ಮಾಡಿದ್ದ ನೆಟ್ಟಿಗರು

ಸೋಶಿಯಲ್ ಮೀಡಿಯಾದಲ್ಲಿ "ಕಪ್ಪಗಿರುವ ಪ್ರಶಾಂತ್‌ಗೆ ಇಷ್ಟು ಬೆಳ್ಳಗಿರುವ ಹುಡುಗಿ ಸಿಕ್ಕಿದ್ದಾಳೆ" ಅಥವಾ "ದುಡ್ಡಿಗೋಸ್ಕರ ಮದುವೆಯಾಗುತ್ತಿದ್ದಾರೆ" ಎಂಬ ಕಮೆಂಟ್‌ ಬರುತ್ತಿವೆ. ಇದಕ್ಕೆ ಕೃತಿ ಈ ಹಿಂದೆ ತಿರುಗೇಟು ನೀಡಿದ್ದರು. "ಒಬ್ಬ ಹುಡುಗ ಕಪ್ಪಗಿದ್ದಾನೆ ಎಂಬ ಕಾರಣಕ್ಕೆ ಹುಡುಗಿ ಅವನನ್ನು ಮದುವೆಯಾದರೆ, ಅದು ಕೇವಲ ಹಣಕ್ಕೋಸ್ಕರ ಎಂದು ಜಡ್ಜ್ ಮಾಡುವುದು ತಪ್ಪು. ಅವನಲ್ಲಿರುವ ಮುಗ್ಧತೆ, ನನ್ನನ್ನು ಮಗುವಿನಂತೆ ನೋಡಿಕೊಳ್ಳುವ ಕೇರಿಂಗ್ ಮನೋಭಾವ ಇಷ್ಟವಾಯಿತು. ನನ್ನ ತಂದೆಯ ಸ್ಥಾನವನ್ನು ತುಂಬುವ ಶಕ್ತಿ ಅವನಲ್ಲಿದೆ" ಎಂದಿದ್ದರು.

56
ಪ್ರಶಾಂತ್‌ ಹೇಳಿದ್ದೇನು?

ಪ್ರಶಾಂತ್ ಅವರು, "ನಾವು ಬಿಸಿಲಿಗೆ ಹೋದರೆ ಟ್ಯಾನ್ ಆಗುತ್ತೇವೆ, ಬಣ್ಣ ಬದಲಾಗುತ್ತದೆ. ಆದರೆ ಮನಸ್ಸು ಬದಲಾಗಲ್ಲ. ನಾನು ಅವಳ ಬಣ್ಣ ನೋಡಿ ಪ್ರೀತಿಸಿಲ್ಲ, ಅವಳು ನನ್ನ ಶ್ರೀಮಂತಿಕೆ ನೋಡಿ ಬಂದಿಲ್ಲ. ನಮ್ಮಿಬ್ಬರ ನಡುವೆ ಭಾವನೆಗಳ ಬಂಧವಿದೆ" ಎಂದು ಹೇಳಿದ್ದಾರೆ.

66
ನಟನೆಯಲ್ಲೂ ಕೃತಿ ಮುಂದು

ಕೃತಿ ಗೌಡ ಕೇವಲ ಪ್ರಶಾಂತ್ ಭಾವಿ ಪತ್ನಿಯಷ್ಟೇ ಅಲ್ಲ, ಅವರು ಕೂಡ ಒಬ್ಬ ಕಲಾವಿದೆ. 'ಬ್ರೇಕ್ ಫೇಲ್ಯೂರ್', 'ದಶಗ್ರೀವ' ಸಿನಿಮಾಗಳಲ್ಲಿ ನಟಿಸಿದ್ದು, 'ರಾಮಾಚಾರಿ' ಮತ್ತು 'ಭೂಮಿಗೆ ಬಂದ ಭಗವಂತ' ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories