ಇದೇ ಭಾನುವಾರದಿಂದ ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ "ಸುವರ್ಣ ಸೆಲೆಬ್ರಿಟಿ ಲೀಗ್" … ಭರ್ಜರಿ ಮನರಂಜನೆಗೆ ರೆಡಿಯಾಗಿ…

Published : Sep 12, 2024, 06:10 AM ISTUpdated : Sep 12, 2024, 09:07 AM IST

ಸ್ಟಾರ್ ಸುವರ್ಣ ವಾಹಿನಿ ಭರ್ಜರಿ ಮನರಂಜನೆ ನೀಡೋದಕ್ಕೆ ರೆಡಿಯಾಗ್ತಿದೆ. ಇದೇ ಭಾನುವಾರದಿಂದ ಆರಂಭವಾಗಲಿದೆ ಹೊಸ ರಿಯಾಲಿಟಿ ಶೋ "ಸುವರ್ಣ ಸೆಲೆಬ್ರಿಟಿ ಲೀಗ್".   

PREV
19
ಇದೇ ಭಾನುವಾರದಿಂದ ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ "ಸುವರ್ಣ ಸೆಲೆಬ್ರಿಟಿ ಲೀಗ್" … ಭರ್ಜರಿ ಮನರಂಜನೆಗೆ ರೆಡಿಯಾಗಿ…

ವಿನೂತನ ರಿಯಾಲಿಟಿ ಶೋ (reality show) ಮೂಲಕ ಕನ್ನಡ ಕಿರುತೆರೆಯಲ್ಲಿ ಹೊಸತನದ ಸಂಚಲನವನ್ನು ಸೃಷ್ಟಿಸಲು ಭರ್ಜರಿಯಾಗಿ ಸಜ್ಜಾಗಿದೆ ಸ್ಟಾರ್ ಸುವರ್ಣ ವಾಹಿನಿ. ವೀಕೆಂಡ್ ನಲ್ಲಿ ಪ್ರೇಕ್ಷಕರಿಗೆ ಮತ್ತಷ್ಟು ಮನರಂಜನೆಯ ರಸದೌತಣ ನೀಡಲು ಶುರುವಾಗಲಿದೆ ಹೊಚ್ಚ ಹೊಸ ಶೋ "ಸುವರ್ಣ ಸೆಲೆಬ್ರಿಟಿ ಲೀಗ್".
 

29

ಕಿರುತೆರೆಯ ಜನಪ್ರಿಯ ಸೆಲೆಬ್ರಿಟಿಗಳನ್ನು ಒಳಗೊಂಡ ವಿನೂತನ ರೀತಿಯ ರಿಯಾಲಿಟಿ ಶೋ ಇದಾಗಿದೆ. ಇದರಲ್ಲಿ ಒಟ್ಟು 2 ತಂಡಗಳಿರುತ್ತದೆ. 10 ಜನ ಸೆಲೆಬ್ರಿಟಿ ಸ್ಪರ್ಧಿಗಳ ನಡುವೆ ಸರಿ ಸುಮಾರು 8 ವಾರಗಳ ಕಾಲ ನಡೆಯುವ ಸಮರ ಇದಾಗಿದೆ. 
 

39

ಈ ಎಂಟು ವಾರಗಳ ಅತಿ ದೊಡ್ಡ ಸಮರದಲ್ಲಿ ಯಾವ ತಂಡ ಗೆದ್ದು "ಸುವರ್ಣ ಸೆಲೆಬ್ರಿಟಿ ಲೀಗ್" (Suvarna Celebrity League) ಪಟ್ಟವನ್ನು ತನ್ನದಾಗಿಸಿಕೊಳ್ಳುತ್ತದೆ ? ಅನ್ನೋದೆ ಕಾರ್ಯಕ್ರಮದ ಹೈ ಲೈಟ್. 
 

49

ಸೆಲೆಬ್ರಿಟಿಗಳನ್ನೊಳಗೊಂಡ ಈ ರಿಯಾಲಿಟಿ ಶೋನಲ್ಲಿ ಮೋಜು-ಮಸ್ತಿ, ತರ್ಲೆ ತುಂಟಾಟದ ಜೊತೆ ಪೈಪೋಟಿಯ ಮಹಾ ಯುದ್ಧವೇ ನಡೆಯಲಿದೆ. ವಿನಯ್ ಗೌಡ, ಚಂದು ಗೌಡ ಈ ಎರಡು ಟೀಮ್ ಗಳಲ್ಲಿ ಯಾರಾಗಲಿದ್ದಾರೆ ವಿನ್ನರ್ ಅನ್ನೋದನ್ನ ಕಾದು ನೋಡಬೇಕು. 
 

59

ಇನ್ನು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ನಟನೆಯ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದ ನಟ ಹಾಗೂ ಬಿಗ್ ಬಾಸ್ ಸೀಸನ್ 10ರ (Bigg Boss Season 10) ವಿನ್ನರ್ ಕಾರ್ತಿಕ್ ಮಹೇಶ್ ಇದೇ ಮೊದಲ ಬಾರಿಗೆ ‘ಸುವರ್ಣ ಸೆಲೆಬ್ರಿಟಿ ಲೀಗ್’ ನ ನಿರೂಪಣೆ ಮಾಡಲಿದ್ದಾರೆ. ಇದು ಈ ಕಾರ್ಯಕ್ರಮದ ಮತ್ತೊಂದು ವಿಶೇಷತೆ. 
 

69

‘ಸುವರ್ಣ ಸೆಲೆಬ್ರಿಟಿ ಲೀಗ್’ ಶೋ ಲಾಂಚ್ ಗೆ ಭರ್ಜರಿಯಾಗಿ ತಯಾರಿ ನಡೆದಿದ್ದು, ಪ್ರೊಮೋಗಳಿಂದ ವೀಕ್ಷಕರಲ್ಲಿ ಕಾತುರತೆ ಹೆಚ್ಚಾಗಿದೆ. ಕಾರ್ಯಕ್ರಮ ಹೇಗೆ ಮೂಡಿ ಬರಲಿದೆ ಎನ್ನುವ ಕುತೂಹಲ ಜನರಲ್ಲಿ ಹೆಚ್ಚಾಗಿದ್ದು, ಈಗಾಗಲೇ ಶೋ ಆರಂಭವಾಗೋದಕ್ಕೆ ಕಾಯ್ತಿದ್ದಾರೆ. 
 

79

10 ಸ್ಪರ್ಧಿಗಳಾಗಿ ಕಿರುತೆರೆ ಕಲಾವಿದರುಗಳಾದ ವಿನಯ್ ಗೌಡ, ನಮ್ರತಾ ಗೌಡ, 'ಕಥೆಯೊಂದು ಶುರುವಾಗಿದೆ' ಧಾರಾವಾಹಿ ಖ್ಯಾತಿಯ ಚಂದು ಗೌಡ, 'ಆಸೆ' ಧಾರಾವಾಹಿ ಖ್ಯಾತಿಯ ಪ್ರಿಯಾಂಕಾ ಮತ್ತು ನಿನಾದ್ ಹರಿತ್ಸ ಭಾಗಿಯಾಗಲಿದ್ದಾರೆ. 
 

89

ಅಷ್ಟೇ ಅಲ್ಲ 'ಗೌರಿಶಂಕರ' ಧಾರಾವಾಹಿ ಖ್ಯಾತಿಯ ಅಭಿಜ್ಞಾ ಭಟ್, ತನಿಷಾ ಕುಪ್ಪಂಡ, ಪ್ರಿಯಾಂಕಾ ಶಿವಣ್ಣ, ರಕ್ಷಕ್ ಬುಲೆಟ್ ಹಾಗೂ 'ಕಾಮಿಡಿ ಗ್ಯಾಂಗ್ಸ್' ಖ್ಯಾತಿಯ ಹಿತೇಶ್ ಭಾಗವಹಿಸಲಿದ್ದಾರೆ.
 

99

ಇನ್ಮುಂದೆ ವಾರಾಂತ್ಯದಲ್ಲಿ ಶುರುವಾಗಲಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ "ಸುವರ್ಣ ಸೆಲೆಬ್ರಿಟಿ ಲೀಗ್" ಇದೇ ಭಾನುವಾರದಿಂದ ಪ್ರತೀ ಭಾನುವಾರ ರಾತ್ರಿ 7 ಗಂಟೆಗೆ ನಿಮ್ಮ ನೆಚ್ಚಿನ  ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ.
 

Read more Photos on
click me!

Recommended Stories