ಸಾಮಾನ್ಯವಾಗಿ ಎಲ್ಲರ ಜೀವನದಲ್ಲೂ ಲವ್, ಡೇಟಿಂಗ್ (dating)ಎಲ್ಲಾನೂ ಆಗೋದು ಮದುವೆಗೂ ಮುನ್ನ. ಆ ದಿನಗಳೇ ಚೆನ್ನಾಗಿರುತ್ತೆ. ತಮ್ಮ ಸಂಗಾತಿಯನ್ನು ಭೇಟಿ ಮಾದಲು ಕಾತರ, ಯಾರಿಗೂ ಗೊತ್ತಾಗದಂತೆ ಕದ್ದು, ಮುಚ್ಚಿ ಭೇಟಿಯಾಗೋದು, ಕೈ ಕೈ ಹಿಡಿದು ಬೀದಿ ಬೀದಿ ಸುತ್ತೋದು ಎಲ್ಲವೂ ಒಂಥರಾ ಚೆನ್ನಾಗಿರುತ್ತೆ. ಆದ್ರೆ ಮದ್ವೆ ಆದ್ಮೇಲೆ ಇದನ್ನೆಲ್ಲಾ ಮಾಡೋಕೆ ಆಗೋದಿಲ್ಲ ಅಂತಾರೆ ಜನ.