ಲಕ್ಷ್ಮಿ ನಿವಾಸ: ಜೊತೆಯಾಗಿ ಜಯಂತ್, ಜಾನು, ವಿಶ್ವ… ಏನಿದು ಅಚ್ಚರಿ ಅಂತಿದ್ದಾರೆ ಜನ!

Published : Jul 03, 2024, 04:54 PM ISTUpdated : Jul 03, 2024, 05:31 PM IST

ಲಕ್ಷ್ಮೀ ನಿವಾಸದ ಸೈಕೋ ಪ್ರೇಮಿ ಜಯಂತ್, ಪತ್ನಿ ಜಾಹ್ನವಿ ಮತ್ತು ಪ್ರೇಮಿ ವಿಶ್ವ ಮೂವರು ಜೊತೆಯಾಗಿ ಕಾಣಿಸಿಕೊಂಡಿದ್ದು, ಮೂವರನ್ನ್ ಜೊತೆಯಾಗಿ ನೋದಿ ಫ್ಯಾನ್ಸ್ ಅಚ್ಚರಿಗೊಂಡಿದ್ದಾರೆ.   

PREV
16
ಲಕ್ಷ್ಮಿ ನಿವಾಸ:  ಜೊತೆಯಾಗಿ ಜಯಂತ್, ಜಾನು, ವಿಶ್ವ… ಏನಿದು ಅಚ್ಚರಿ ಅಂತಿದ್ದಾರೆ ಜನ!

ಲಕ್ಷ್ಮೀ ನಿವಾಸ ಸೀರಿಯಲ್ ಝೀ ಕನ್ನಡದ (Zee Kannada) ಜನಪ್ರಿಯ ಧಾರಾವಾಹಿಯಲ್ಲಿ ಒಂದಾಗಿದೆ. ಈ ಸೀರಿಯಲ್ ನ ಪ್ರಮುಖ ಆಕರ್ಷಣೆ ಅಂದ್ರೆ ಅದು ಜಯಂತ್ ಮತ್ತು ಜಾಹ್ನವಿ. ಜಯಂತ್ ನ ಹುಚ್ಚು ಪ್ರೀತಿ, ತನ್ನ ಹುಡುಗಿ ತನ್ನ ಬಳಿ ಅಷ್ಟೇ ಮಾತನಾಡಬೇಕು, ತನಗಷ್ಟೇ ಅನ್ನೋ ಪೊಸೆಸಿವ್ ನೆಸ್ ಜಯಂತ್ ನದ್ದು. 

26

ತನ್ನ ಬೆಸ್ಟ್ ಫ್ರೆಂಡ್ ಆಗಿದ್ದ ವಿಶ್ವನ ಮನಸಲ್ಲಿದ್ದ ಬೆಟ್ಟದಷ್ಟು ಪ್ರೀತಿಯನ್ನ ಅರ್ಥ ಮಾಡಿಕೊಳ್ಳದೇ ಇದ್ದ, ಆತನಲ್ಲಿ ಒಬ್ಬ ಬೆಸ್ಟ್ ಫ್ರೆಂಡನ್ನ ಮಾತ್ರ ಕಂಡ ಹುಡುಗಿ ಜಾಹ್ನವಿ. ಗಂಡನ ಉಸಿರು ಕಟ್ಟಿಸುವಂತಹ ಅತಿಯಾದ ಪ್ರೀತಿಯನ್ನು ನೋಡಿಯೂ ಸಹ ಅದನ್ನೇ ಪ್ರೀತಿ ಎಂದು ನಂಬಿರುವ ಹುಡುಗಿ ಇವಳು. 
 

36

ಇನ್ನು ವಿಶ್ವ ತುಂಬಾನೆ ಒಳ್ಳೆ ಹುಡುಗ. ತನ್ನ ಫ್ರೆಂಡ್ ಆಗಿದ್ದ ಜಾನುಗೋಸ್ಕರ ಎಲ್ಲವನ್ನೂ ಮಾಡ್ತಾ, ಅವಳನ್ನ ಮನಸಾರೆ ಪ್ರೀತಿಸಿದ ಹುಡುಗ. ಜಾಹ್ನವಿಯ ಮದುವೆ ನಿಲ್ಲಿಸಲು ಬಂದು, ಆಕೆಯ ಖುಷಿ ನೋಡಿ, ತನ್ನ ಪ್ರೀತಿಯನ್ನು ತಿಳಿಸದೇ ದೂರ ಉಳಿದು, ಸದ್ಯ ದೇವದಾಸ್ ನಂತೆ ಕುಡಿದು ಆಕೆಯ ನೆನಪಲ್ಲೇ ಜೀವನ ಕಳೆಯುತ್ತಿದ್ದಾನೆ ವಿಶ್ವ. 
 

46

ಇವರು ಮೂವರು ಊರ ಜಾತ್ರೆಯಲ್ಲಿ ಜೊತೆಯಾದರೂ ಸಹ, ವಿಶ್ವ ಜಾಹ್ನವಿ ಯಾರೆಂಬುದೇ ತನ್ನಗೆ ಗೊತ್ತಿಲ್ಲದಂತೆ ವರ್ತಿಸಿದ್ದ. ಇನ್ನು ಜಾಹ್ನವಿಯನ್ನು ಪ್ರೀತಿಸುವ ಹುಡುಗನ ಎಂದು ಇನ್ನೊಬ್ಬ ಹುಡುಗನನ್ನು ತಪ್ಪು ತಿಳಿದು, ಅವನಿಗೆ ಎದ್ದೇಳಲು ಆಗದಂತೆ ಹೊಡೆದು ಮಲಗುವಂತೆ ಮಾಡಿರುವ ಪಾಗಲ್ ಪ್ರೇಮಿ ಜಯಂತ್. ವಿಶ್ವನ ಪ್ರೀತಿ ಗೊತ್ತಾದ್ರೆ ಸುಮ್ಮನಿರ್ತಾನ? ಖಂಡಿತಾ ಇಲ್ಲ. 
 

56

ಈವಾಗ ಇದೆಲ್ಲಾ ವಿಷ್ಯ ಯಾಕೆ ಬಂತು ಅಂದ್ರೆ, ವಿಶ್ವನ ಪಾತ್ರದಲ್ಲಿ ನಟಿಸುತ್ತಿರುವ ಭವಿಷ್ ಗೌಡ (Bhavish Gowda), ಜಾನು ಮತ್ತು ಜಯಂತ್ ಅಂದ್ರೆ ಚಂದನ ಅನಂತಕೃಷ್ಣ ಮತ್ತು ದೀಪಕ್ ಸುಬ್ರಹ್ಮಣ್ಯ ಮೂವರು ಜೊತೆಯಾಗಿರುವ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

66

ಮೂವರು ನಗುನಗುತ್ತಾ ಜೊತೆಯಾಗಿ ಪೋಸ್ ನೀಡಿದ್ದು ನೋಡಿ ಜನ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಿಜವಾಗ್ಲೂ ನೀವು ಮೂವರು ಜೊತೆಯಾದ್ರೆ ಹೇಗಿರಬಹುದು? ವಿಶ್ವ ಹುಷಾರು! ಇದೆನಪ್ಪಾ ಅಚ್ಚರಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ ಜನ. ಹೆಚ್ಚಿನ ಜನ ಜಯಂತ್ -ಜಾಹ್ನವಿ ಜೋಡೀನೆ ಚೆನ್ನ ಎಂದು ಕೂಡ ಹೇಳಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories