ಕೊಡಗಿನ ಮಂಜಲ್ಲಿ ಮಿಂದೆದ್ದ ಸುಂದರಿ ಮೌನ, Mrs. ರಾಮಾಚಾರಿ ಅಂದಕ್ಕೆ ಮನಸೋತ ಫ್ಯಾನ್ಸ್

Published : Jul 04, 2024, 11:04 AM IST

ರಾಮಾಚಾರಿ ಸೀರಿಯಲ್ ಖ್ಯಾತಿಯ ನಟಿ ಮೌನ ಗುಡ್ಡೆಮನೆ ಸೀರಿಯಲ್ ನಿಂದ ಬ್ರೇಕ್ ಪಡೆದು ಇದೀಗ ಮಡಿಕೇರಿಯಲ್ಲಿ ಮಂಜು, ಮಳೆಯ ನಡುವೆ ಎಂಜಾಯ್ ಮಾಡ್ತಿದ್ದಾರೆ.   

PREV
18
ಕೊಡಗಿನ ಮಂಜಲ್ಲಿ ಮಿಂದೆದ್ದ ಸುಂದರಿ ಮೌನ, Mrs. ರಾಮಾಚಾರಿ ಅಂದಕ್ಕೆ ಮನಸೋತ ಫ್ಯಾನ್ಸ್

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಪಾತ್ರದಲ್ಲಿ ಮಿಂಚುತ್ತಿರುವ ಬೆಡಗಿ ಮೌನ ಗುಡ್ಡೆಮನೆ (Mouna Guddemane) ಸದ್ಯ ಸೀರಿಯಲ್‌ನಿಂದ ಬ್ರೇಕ್ ಪಡೆದು ತಮ್ಮ ವೆಕೇಶನ್ ಎಂಜಾಯ್ ಮಾಡ್ತಿದ್ದಾರೆ. 
 

28

ಹೌದು ಮೌನ ತಮ್ಮ ಫ್ಯಾಮಿಲಿ ಜೊತೆ ಕರ್ನಾಟಕದ ಸ್ವಿಡ್ಜರ್ ಲ್ಯಾಂಡ್ ಎಂದೇ ಖ್ಯಾತಿ ಪಡೆದಿರುವ ಕೊಡಗಿಗೆ (Coorg) ಭೇಟಿ ನೀಡಿದ್ದು, ಇಲ್ಲಿ ತಲಕಾವೇರಿ, ಮಲ್ಲಲ್ಲಿ ಫ್ಯಾಲ್ಸ್,  ಮೂಕನಮನೆ ಅಬ್ಬಿ ಫಾಲ್ಸ್, ಮೊದಲಾದ ಕಡೆಗೆ ಭೇಟಿ ನೀಡಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

38

ತಮ್ಮ ಕೊಡಗು ಪ್ರವಾಸದ (Kodagu Trip) ಮೊದಲ ದಿನ ನಟಿ ಮೌನ ತಲಕಾವೇರಿಗೆ (Talakaveri) ಭೇಟಿ ನೀಡಿ, ಕಾವೇರಮ್ಮನ ಆಶೀರ್ವಾದ ಪಡೆದಿದ್ದಾರೆ. ಅಲ್ಲಿನ ಸುಂದರ ಫೋಟೋಗಳನ್ನು ಹಂಚಿಕೊಂಡಿರುವ ನಟಿ ಬಾಲ್ಯದಿಂದಲೂ ಈ ತಾಣ ಅಂದ್ರೆ ನನಗೆ ತುಂಬಾ ಇಷ್ಟ. 12 ವರ್ಷದ ನಂತರ ಕಾಮೇರಮ್ಮನ ದರ್ಶನ ಪಡೆಯಲು ಬಂದಿದ್ದೇನೆ ಎಂದು ಬರೆದುಕೊಂಡಿದ್ದಾರೆ. 
 

48

ಇನ್ನು ವಿವಿಧ ಪ್ರವಾಸಿ ತಾಣಗಳು ಮುಖ್ಯವಾಗಿ ಫಾಲ್ಸ್, ಮುಗಿಲ್ಪೇಟೆ ಮೊದಲಾದ ತಾಣಗಳಿಗೆ ಭೇಟಿ ನೀಡಿರುವ ಮೌನ, ಕೂರ್ಗ್, ಸಮಯವು ನಿಶ್ಚಲವಾಗಿ ನಿಂತಿರುವ ಸ್ಥಳ, ಜೀವನದ ಸರಳ ಸಂತೋಷಗಳನ್ನು ಸ್ವೀಕರಿಸಲು ಮತ್ತು ನಿಮ್ಮ ಆಂತರಿಕ ಆತ್ಮದೊಂದಿಗೆ ಕನೆಕ್ಟ್ ಆಗೋದಕ್ಕೆ ಈ ತಾಣ ಬೆಸ್ಟ್. ಅದರಲ್ಲೂ ಈ ಮಂಜು ಮುಸುಕಿದ ವಾತಾವರಣ ತುಂಬಾನೆ ಸೊಗಸಾಗಿದೆ ಎಂದು ಕ್ಯಾಪ್ಶನ್ ನೀಡಿದ್ದಾರೆ. 
 

58

ತಲಕಾವೇರಿ ದರ್ಶನಕ್ಕೆ ಮೌನ ನೀಲಿ ಬಣ್ಣದ ಸಲ್ವಾರ್ ಸೂಟ್ ಧರಿಸಿದ್ದು, ತುಂಬಾ ಮುದ್ದಾಗಿ ಕಾಣಿಸುತ್ತಿದ್ದಾರೆ. ಇತರ ಪ್ರವಾಸಿ ತಾಣಗಳಲ್ಲಿ ನಟಿ ಪೀಚ್ ಬಣ್ಣದ ಸ್ಲೀವ್ ಲೆಸ್ ವೂಲನ್ ಡ್ರೆಸ್ ಧರಿಸಿದ್ದು, ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇವರು ಬ್ಯೂಟಿಗೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ. 
 

68

ಕೊಡಗಿನ ಕಾವೇರಿ ಬೆಡಗಿನ ವಯ್ಯಾರಿ. ಆದರೆ ಇವರು ನಮ್ಮೆಲ್ಲರ ಪ್ರೀತಿಯ Mrs. ರಾಮಾಚಾರಿ. ಸುತ್ತ ಮೋಡ ಕವಿದು ಮಳೆಯು ಸುರಿಯುತ್ತಿರಲು… ಆ ಮಂಜಿನ ಮುಸುಕಿನಲ್ಲಿಯೂ ಕಂಗೊಳಿಸುತ್ತಿರುವ ಇವಳ ಚೆಲುವು… ಎಂದು ಹಾಡಿ ಹೊಗಳಿದ್ದಾರೆ ಜನ. 
 

78

ಅಷ್ಟೇ ಅಲ್ಲ, ಪ್ರಕೃತಿ ಸೌಂದರ್ಯದ ಜೊತೆಗೆ ನಿಂತಿರುವ ಪ್ರೀತಿಯ ಚಾರುವನ್ನು ನೋಡಿ, ಇಲ್ಲಿ ಯಾವುದನ್ನು ನೋಡಬೇಕು ತಿಳಿತಾ ಇಲ್ಲ. ಸುಂದರ ಪ್ರಕೃತಿ ಜೊತೆ ಸುಂದರ -ಅತೀ ಸುಂದರ ನಮ್ಮ ನಮ್ಮ ರಾಮಚಾರಿ ಪತ್ನಿ…ಸಿಕ್ಕಾಪಟ್ಟೆ ಇಷ್ಟ ಆಗೋ ಹುಡುಗಿ ನಮ್ ಚಾರು..ನಿಜವಾಗ್ಲೂ ತುಂಬಾನೆ ಚೆನ್ನಾಗಿ ಕಾಣಿಸ್ತೀರಿ ಎಂದು ಸಹ ಹೇಳಿದ್ದಾರೆ. 
 

88

ಅಷ್ಟೇ ಅಲ್ಲ ಪ್ರಕೃತಿಯ ಸೌಂದರ್ಯಕ್ಕೆ (Nature Beauty) ಕಳೆದು ಹೋದಳು ಅವಳು… ಆದರೆ ಅವಳ ಸೌಂದರ್ಯಕ್ಕೆ ಕಳೆದು ಹೋದೆವು ನಾವುಗಳು ಎಂದು ಹೊಗಳಿರುವ ಅಭಿಮಾನಿಗಳಲ್ಲಿ ಕೆಲವರು ಮೇಡಂ ರಾಮಾಚಾರಿ ನಾ ಬಿಟ್ಟು ಬಂದಲ್ಲಾ ಯಾಕೆ ಮೇಡಂ ಎಂದು ಸಹ ಪ್ರಶ್ನಿಸಿದ್ದಾರೆ. 
 

Read more Photos on
click me!

Recommended Stories