ಬಿಗ್ ಬಾಸ್ ಮಾಜಿ ಸ್ಪರ್ಧಿ ಅರೆಸ್ಟ್, ವೈದ್ಯರಿಂದ 5 ಲಕ್ಷ ರೂ ವಸೂಲಿಗೆ ಯತ್ನಿಸಿ ಹಲ್ಲೆ ಆರೋಪ

Published : Sep 27, 2026, 06:27 PM IST

ವೈದ್ಯರಿಂದ 5 ಲಕ್ಷ ರೂಪಾಯಿ ಹಣ ವಸೂಲಿ ಮಾಡಲು ಯತ್ನಿಸಿ ಹಲ್ಲೆ ನಡೆಸಿದ ಆರೋಪದಡಿ ಬಿಗ್ ಬಾಸ್ ಮಾಜಿ ಸ್ಪರ್ಧಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದಿವ್ಯಾ ಶಿಂದೆ ಬಂಧನದ ಹಿಂದಿನ ಅಸಲಿ ಕಹಾನಿ ಏನು

PREV
15
ಬಿಗ್ ಬಾಸ್ ಸ್ಪರ್ಧಿ ಬಂಧನ

ಬಿಗ್ ಬಾಸ್ ರಿಯಾಲಿಟಿ ಶೋ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಆರಂಭಗೊಂಡಿದೆ. ಪ್ರತಿ ದಿನ ರೋಚಕತೆ ಹೆಚ್ಚಿಸುತ್ತಿದೆ. ಇದರ ನಡುವೆ ಬಿಗ್ ಬಾಸ್ ಮಾಜಿ ಸ್ಪರ್ಧಿಯೊಬ್ಬರ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿದೆ. ಇದೀಗ ವೈದ್ಯರೊಬ್ಬರಿಂದ 5 ಲಕ್ಷ ರೂಪಾಯಿ ವಸೂಲಿ ಮಾಡಲು ಯತ್ನಿಸಿ, ಹಲ್ಲೆ ಮಾಡಿದ ಆರೋಪದಡಿ ಬಿಗ್ ಬಾಸ್ ಮಾಜಿ ಸ್ಪರ್ಧಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

25
ನಿವೃತ್ತ ವೈದ್ಯಾಧಿಕಾರಿಯಿಂದ ದೂರು

ಬಿಗ್ ಬಾಸ್ ಮರಾಠಿ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡು ಜನಪ್ರಿಯವಾಗಿರುವ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ದಿವ್ಯಾ ಶಿಂಧೆ ಅರೆಸ್ಟ್ ಆಗಿದ್ದಾರೆ. ನಿವೃತ್ತ ವೈದ್ಯಾಧಿಕಾರಿಯಿಂದ 5 ಲಕ್ಷ ರೂಪಾಯಿ ಹಣ ವಸೂಲಿ ಹಾಗೂ ಹಲ್ಲೆ ಆರೋಪ ಕೇಳಿಬಂದಿದೆ. ವೈದ್ಯಾಧಿಕಾರಿ ನೀಡಿದ ದೂರಿನ ಅನ್ವಯ ಪುಣೆ ಪೊಲೀಸರು ದಿವ್ಯಾ ಶಿಂಧೆಯನ್ನು ಅರೆಸ್ಟ್ ಮಾಡಿದ್ದಾರೆ.

35
ವೈದ್ಯರ ಮನೆಗೆ ನುಗ್ಗಿ ರಾದ್ಧಾಂತ

ದಿವ್ಯಾ ಶಿಂಧೆ ಸಾಂಸ್ಕೃತಿ ಕಾರ್ಯಕ್ರಮದ ಪ್ರಚಾರದ ವಿಚಾರದಲ್ಲಿ ನಿವೃತ್ತ ವೈದ್ಯಾಧಿಕಾರಿ ಜೊತೆ ಮಾತುಕತೆ ನಡೆಸಿದ್ದಾರೆ. ಬಳಿಕ ನೇರವಾಗಿ ವೈದ್ಯರ ಮನೆಗೆ ತೆರಳಿ ರಾದ್ಧಾಂತ ನಡೆಸಿದ್ದಾರೆ. 5 ಲಕ್ಷ ರೂಪಾಯಿ ಹಣ ನೀಡುವಂತೆ ಬೆದರಿಸಿದ್ದಾರೆ. ಇಷ್ಟೇ ಅಲ್ಲ ಹಿರಿಯರಾದ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

45
ಬೆದರಿಸಿದ ದಿವ್ಯಾ ಶಿಂಧೆಗೆ ಸಂಕಷ್ಟ

ಪ್ರಚಾರಕ್ಕಾಗಿ 5 ಲಕ್ಷ ರೂಪಾಯಿ ನೀಡುವಂತೆ ದಿವ್ಯಾ ಶಿಂಧೆ ಬೇಡಿಕೆ ಇಟ್ಟಿದ್ದಾರೆ. 5 ಲಕ್ಷ ರೂಪಾಯಿ ವಿಚಾರದಲ್ಲಿ ದಿವ್ಯಾ ಶಿಂಧೆ ತೀವ್ರ ಆಕ್ರೋಶಭರಿತರಾಗಿ ವೈದ್ಯಾಧಿಕಾರಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ. 5 ಲಕ್ಷ ರೂಪಾಯಿ ನೀಡದಿದ್ದರೆ ಕಿರುಕುಳ ಕೇಸ್ ಹಾಕುವುದಾಗಿ ಬೆದರಿಸಿದ್ದಾರೆ ಎಂದು ವೈದ್ಯಾಧಿಕಾರಿ ನೀಡಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

55
ನ್ಯಾಯಾಲಕ್ಕೆ ಹಾಜರುಪಡಿಸಿದ ಪೊಲೀಸ್

ವೈದ್ಯಾಧಿಕಾರಿ ನೀಡಿದ ದೂರಿನ ಕುರಿತು ತನಿಖೆ ನಡೆಸಿದ ಪೊಲೀಸರು ಇಂದು ದಿವ್ಯಾ ಶಿಂಧೆಯನ್ನು ಅರೆಸ್ಟ್ ಮಾಡಿದ್ದಾರೆ. ಬಳಿಕ ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ. ಮರಾಠಿ ಬಿಗ್ ಬಾಸ್ ಶೋನಲ್ಲಿ ಭಾರಿ ಜನಪ್ರಿಯತೆ ಪಡೆದ ದಿವ್ಯಾ ಶಿಂಧೆ, ಶೋ ಬಳಿಕ ಸೋಶಿಯಲ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಗುರುತಿಸಿಕೊಂಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories