ಬಿಗ್‌ಬಾಸ್ 13ರಲ್ಲಿ ಈ ವಾರದ ಕಿಚ್ಚನ ಮೊದಲ ಚಪ್ಪಾಳೆ ಹಾಗೂ ಒಂದು ಲಕ್ಷ ರೂ. ನಗದು ಬಹುಮಾನವನ್ನು ನಟಿ ಆಸಿಯಾ ಫಿರ್ದೋಸ್ ಪಡೆದುಕೊಂಡಿದ್ದಾರೆ. ಸಾಂಪ್ರದಾಯಿಕ ಕುಟುಂಬದಿಂದ ಬಂದು ದೊಡ್ಡ ಕನಸುಗಳನ್ನು ನನಸು ಮಾಡಿಕೊಳ್ಳುತ್ತಿರುವ ಇವರ ಸಾಧನೆಗೆ ವೀಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ಬಿಗ್‌ಬಾಸ್ 13 (Bigg Boss 13)ನಲ್ಲಿ ಈ ಬಾರಿ ಮೊದಲ ಕಿಚ್ಚನ ಚಪ್ಪಾಳೆಯ ಹವಾ ಜೋರಾಗಿ ನಡೆದಿದೆ. ಹಿಂದಿನ ವಾರ ಸುದೀಪ್ ಅವರು ತಮ್ಮ ಮೊದಲ ಚಪ್ಪಾಳೆಯನ್ನು ವೀಕ್ಷಕರಿಗೆ ನೀಡಿದ್ದರು. ಆದರೆ ಈ ಬಾರಿ ಮೊದಲ ಸ್ಪರ್ಧಿಗೆ ಚಪ್ಪಾಳೆ ಸಿಕ್ಕಿದೆ.
26
ಆಸಿಯಾ ಫಿರ್ದೋಸ್
ಅವರೇ ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ ಶ್ರಾವಣಿ ಅರ್ಥಾತ್ ಆಸಿಯಾ ಫಿರ್ದೋಸ್ (Asiya Firdose) ಅವರಿಗೆ. ಆಸಿಯಾ ಅವರು ಬಿಗ್‌ಬಾಸ್ ಮನೆಯಲ್ಲಿ ಕೂಡ ಎಲ್ಲರ ನೆಚ್ಚಿನವರಾಗಿದ್ದು, ವೀಕ್ಷಕರು ಕೂಡ ಆಸಿಯಾ ಅವರಿಗೆ ಕಿಚ್ಚನ ಮೊದಲ ಚಪ್ಪಾಳೆ ಸಿಕ್ಕಿರುವುದಕ್ಕೆ ಖುಷಿ ಪಟ್ಟುಕೊಂಡಿದ್ದಾರೆ.
36
ಒಂದು ಲಕ್ಷ ಬಹುಮಾನ
ಈ ಬಾರಿಯ ಇನ್ನೊಂದು ಕುತೂಹಲ ಏನೆಂದರೆ, ಈ ಬಾರಿ ಚಪ್ಪಾಳೆ ಸಿಗುವ ಸ್ಪರ್ಧಿಗಳಿಗೆ ಒಂದು ಲಕ್ಷ ರೂಪಾಯಿ ನಗದು ಕೂಡ ಕೊಡುತ್ತಿರುವುದು ವಿಶೇಷವಾಗಿದೆ. ಅದನ್ನು ಆಸಿಯಾ ಪಡೆದುಕೊಂಡಿದ್ದು, ಒಂದು ಲಕ್ಷ ರೂಪಾಯಿಯ ಚಪ್ಪಾಳೆ ಗಿಟ್ಟಿಸಿರುವ ಮೊದಲ ಸ್ಪರ್ಧಿ ಎನ್ನಿಸಿದ್ದಾರೆ.
ಇನ್ನು ನಟಿ ಆಸಿಯಾ ಕುರಿತು ಹೇಳುವುದಾದರೆ, ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ ಮುಗಿಯುತ್ತಿದ್ದಂತೆ ನಟಿ ಆಸಿಯಾ ಫಿರ್ದೋಸ್, ಬಿಗ್‌ಬಾಸ್ ಮನೆಗೆ 10ನೇ ಸ್ಪರ್ಧಿಯಾಗಿ ಬಂದಿದ್ದಾರೆ. ಆಸಿಯಾ ಅವರಿಗೆ ಶ್ರಾವಣಿ ಪಾತ್ರ ದೊಡ್ಡಮಟ್ಟದ ಜನಪ್ರಿಯತೆಯನ್ನು ತಂದು ಕೊಡ್ತು. ಮೊದಲ ಬಾರಿಗೆ ಕನ್ಯಾಕುಮಾರಿ ಧಾರಾವಾಹಿಗೆ ನಾಯಕಿಯಾಗಿ ಆಸಿಯಾ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು.
56
ದೊಡ್ಡ ದೊಡ್ಡ ಕನಸು
ಚಿಕ್ಕವಳಿದ್ದಾಗಿಂದಲೂ ದೊಡ್ಡ ದೊಡ್ಡ ಕನಸುಗಳು. ಆ ಕನಸುಗಳು ನನಸು ಮಾಡಿಕೊಳ್ಳುತ್ತಾ ಸಾಗಿರುವ ಜರ್ನಿ ಬಿಗ್‌ಬಾಸ್ ವರೆಗೂ ತಲುಪಿದೆ ಎಂದು ಆಸಿಯಾ ಫಿರ್ದೋಸ್ ಹೇಳಿಕೊಂಡಿದ್ದರು.
66
ನಟಿ ಕಣ್ಣೀರು
ಇದೇ ವೇಳೆ ಸಾಂಪ್ರದಾಯಿಕ ಕುಟುಂಬದಿಂದ ಇಲ್ಲಿವರೆಗಿನ ಬಂದ ದಾರಿ ನೆನೆದು ಆಸಿಯಾ ಭಾವುಕರಾಗಿ ಕಣ್ಣೀರು ಹಾಕಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.