Bigg Bossಗೆ ಯಾಕ್ರೀ ಹೋಗ್ಬೇಕು- ಇಲ್ಲೇ ಹುಡುಗಿಯರು ಸಿಗಲ್ವೇನ್ರಿ? ಬೆಳಿಗ್ಗೆನೂ ತಗೋತೇನ್ರಿ: ಕಾಕ್ರೋಚ್​ ಸುಧಿ ವಿಡಿಯೋ ವೈರಲ್

Published : Oct 01, 2025, 04:44 PM IST

ಬಿಗ್ ಬಾಸ್-12 ಮನೆಯಲ್ಲಿ ಸದ್ದು ಮಾಡುತ್ತಿರುವ ನಟ ಕಾಕ್ರೋಚ್ ಸುಧಿಯವರ ಹಳೆಯ ಸಂದರ್ಶನದ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಹುಡುಗಿಯರು, ಡ್ರಿಂಕ್ಸ್, ಮತ್ತು ಹೆಂಡತಿಯ ಬಗ್ಗೆ ನೀಡಿದ ಪಂಚಿಂಗ್ ಉತ್ತರಗಳು ಗಮನ ಸೆಳೆಯುತ್ತಿವೆ.

PREV
16
Bigg Boss-12 ಮನೆಯಲ್ಲಿ ಕಾಕ್ರೋಚ್​ ಸುಧಿ

Bigg Boss-12 ಮನೆಯಲ್ಲಿ ಸದ್ದು ಮಾಡ್ತಿರೋರಲ್ಲ ನಟ ಕಾಕ್ರೋಚ್​ ಸುಧಿ ಅವರು ಕೂಡ ಒಬ್ಬರು. ಅವರ ರಿಯಲ್​ ಹೆಸರು ಸುಧೀರ್​ ಬಾಲ್​ರಾಜ್​ (Cockroach Sudhi -Sudhir Balraj). ಸ್ಯಾಂಡಲ್‌ವುಡ್‌ನಲ್ಲಿ ವಿಲನ್ ಮತ್ತು ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ಕಾಕ್ರೋಚ್ ಸುಧಿ, ಮೈತ್ರಿ, ಮಿ. ಐರಾವತ, ಅಂಜನಿಪುತ್ರ, ಸಲಗ, ಟಗರು, ಯುವರತ್ನ, ಭೀಮ ಮುಂತಾದ ಸಿನಿಮಾಗಳಲ್ಲಿ ಕಾಕ್ರೋಚ್ ಸುಧಿ ಗಮನಸೆಳೆಯುವಂತಹ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

26
ಬಿಗ್​ಬಾಸ್​ಗೆ ಹೋಗಲ್ಲ ಎಂದಿದ್ದ ನಟ

'ಯಾಕೆ ಎಲ್ಲಾ ನಾನು ಬಿಗ್ ಬಾಸ್‌ಗೆ ಹೋಗ್ತಿನಿ ಅಂತ ಹೇಳ್ತಾ ಇದ್ದಾರೋ ಗೊತ್ತಿಲ್ಲ. ನನಗೆ ಬಿಗ್ ಬಾಸ್ ನಿಂದ ಎರಡ್ಮೂರು ಸಲ ಕರೆದರು. ಆದರೆ, ನಾನು ಡೇಟ್ ಇಲ್ಲ ಹಾಗೇ ಹೀಗೆ ಅಂತ ಹೇಳಿದ್ದಕ್ಕೆ, ಅಯ್ಯೋ ಈ ಹುಡುಗ ಬರಲ್ಲ ಅಂತ ಅವರೇ ನನ್ನು ಬೈದು ಬಿಟ್ಟುಬಿಟ್ಟವ್ರೇ ಅಂತ ಅನ್ನಿಸುತ್ತದೆ. ನಾನು ಸದ್ಯ ಬಿಗ್ ಬಾಸ್‌ಗೆ ಹೋಗ್ತಿಲ್ಲ' ಎಂದು ಈಚೆಗಷ್ಟೇ ಹೇಳಿದ್ದ ಸುಧಿ ಅವರು ಈಗ ಬಿಗ್​ಬಾಸ್​​ ಮನೆ ಸೇರಿಕೊಂಡಿದ್ದಾರೆ.

36
ಪಂಚಿಂಗ್​ ಡೈಲಾಗ್​

ಕಾಕ್ರೋಚ್ ಸುಧಿ ಮಾತನಾಡಿದ್ರೆ ಒಂದೊಂದು ಪಂಚಿಂಗ್ ಡೈಲಾಗ್‌ಗಳು ಅವರ ಬಾಯಲ್ಲಿ ಬರುತ್ತವೆ. ಅವು ಯಾವ ಮಾಸ್ ಸಿನಿಮಾಕ್ಕೂ ಕಮ್ಮಿ ಇರೋದಿಲ್ಲ. ಅವರ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ.

46
ಹಳೆಯ ವಿಡಿಯೋ ವೈರಲ್​

ಇದರ ನಡುವೆಯೇ, ಅವರ ಹಳೆಯ ವಿಡಿಯೋ ಒಂದು ವೈರಲ್​ ಆಗುತ್ತಿದೆ. ka___36__boy ಎನ್ನುವ ಇನ್​ಸ್ಟಾಗ್ರಾಮ್​ ಪೇಜ್​ನಲ್ಲಿ ಈ ವಿಡಿಯೋ ಶೇರ್​ ಮಾಡಲಾಗಿದೆ. ಅದರಲ್ಲಿ ಆ್ಯಂಕರ್​, ಸುಧಿ ಅವರು ಬಿಗ್​ಬಾಸ್​ಗೆ ಹೋದ್ರೆ ಹುಡುಗಿಯರನ್ನು ಫ್ರೆಂಡ್ಸೇ ಮಾಡಿಕೊಳ್ಳಲ್ಲ ಹೌದಾ ಎಂದಾಗ, ಸುಧಿ ಅವರು ಫಸ್ಟ್​ ಆಫ್ ಆಲ್​ ಬಿಗ್​ಬಾಸ್​ಗೇ ನಾನು ಹೋಗಲ್ಲ. ಹುಡುಗಿಯರನ್ನು ಫ್ರೆಂಡ್ಸ್​ ಮಾಡಿಕೊಳ್ಳಲು ಬಿಗ್​ಬಾಸ್​ಗೆ ಯಾಕೆ ಹೋಗಬೇಕು, ಇಲ್ಲೇ ಪಕ್ಕದಲ್ಲೇ ಹೋದ್ರೆ ಸಿಗಲ್ವಾ ಎಂದು ಪ್ರಶ್ನಿಸಿದ್ದರು. ಬಿಗ್​ಬಾಸ್​ಗೆ ಹೋದ್ರೆ ಸುಧಿ ಅವ್ರು ಲವ್​ ಮಾಡಲ್ವಾ ಎಂದು ಪ್ರಶ್ನಿಸಿದಾಗ, ಅವರು ನನ್ನನ್ನು ಲವ್​ ಮಾಡಬೇಕಲ್ಲ ಎಂದು ಉತ್ತರ ಕೊಟ್ಟಿದ್ದರು!

56
ಎದ್ದಾಗಲೂ ಡ್ರಿಂಕ್ಸ್ ಮಾಡ್ತೀನಿ​

ಪ್ರತಿದಿನ ಡ್ರಿಂಕ್ಸ್​ ಮಾಡದೇ ಸುಧೀರ್ ಅವರು ಮಲಗೋದೇ ಇಲ್ಲ ಎಂದು ಕೇಳಿದಾಗ, ಎದ್ದಾಗಲೂ ಡ್ರಿಂಕ್ಸ್​ ಮಾಡ್ತೀನಿ ಎಂದು ತಮಾಷೆ ಮಾಡಿದ್ದಾರೆ. ಮನಿ ಮತ್ತು ಹನಿ ಎರಡಲ್ಲಿ ಒಂದು ಆಯ್ಕೆ ಮಾಡಿ ಎಂದಾಗ, ದುಡ್ಡಿದ್ರೆ ವಿಜಯ ಮಲ್ಯ, ಇಲ್ಲಾಂದ್ರೆ ಸುಮ್ನೆ ಮಲಿಕಳಯ್ಯ ಎಂದು ಥಟ್​ ಎಂದು ಉತ್ತರಿಸಿದ್ದಾರೆ. ನೆಮ್ಮದಿಯಿಂದ ಇರ್ತಾರಾ ಯಾವಾಗ್ಲೂ ಸುಧಿ ಎಂದು ಕೇಳಿದಾಗ, ಸುಧೀರ್​ ಅವರು ಕೆಲವು ಜೀವಗಳು ನೆಮ್ಮದಿಯನ್ನು ಹಾಳು ಮಾಡಲೇ ಬರ್ತಾವೆ ಎಂದಿದ್ದಾರೆ!

66
ವೈಫ್​ ಜೊತೆ...

ನಿಮ್ಮ ಫೆವರೆಟ್​ ವಿಸ್ಕಿ, ವೈನ್​, ವೈಫ್​ ಯಾವುದು ಎಂದು ಪ್ರಶ್ನಿಸಿದಾಗ, ವೈಫ್​ನ ಕರ್ಕೊಂಡು ವೈನ್​ಶಾಪ್​ಗೆ ಹೋಗಿ ವಿಸ್ಕಿ ಕುಡಿತೇನೆ ಎನ್ನೋದಾ ಸುಧೀರ್​?

Read more Photos on
click me!

Recommended Stories