ಪ್ರಪಂಚದ ಜನಪ್ರಿಯ ಯೂಟ್ಯೂಬರ್ ಮಿಸ್ಟರ್ ಬೀಸ್ಟ್, ಅವರ ನಿಜವಾದ ಹೆಸರು ಜಿಮ್ಮಿ ಡೊನಾಲ್ಡ್ಸನ್, 12 ನೇ ವಯಸ್ಸಿನಲ್ಲಿ ಯೂಟ್ಯೂಬ್‌ನಲ್ಲಿ ತಮ್ಮ ಜರ್ನಿ ಆರಂಭಿಸಿದ ಬೀಸ್ಟ್ ಇಂದು ತಮ್ಮ ಕೆಲಸದಿಂದ ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದಾರೆ.ಇವರು ಈಗ 8350 ಕೋಟಿ ಒಡೆಯರಾಗಿದ್ದಾರೆ.
ಮಿಸ್ಟರ್‌ಬೀಸ್ಟ್ ಅವರ ನಿಜವಾದ ಹೆಸರು ಜಿಮ್ಮಿ ಡೊನಾಲ್ಡ್ಸನ್
ಯೂಟ್ಯೂಬರ್ ಮಿಸ್ಟರ್ ಬೀಸ್ಟ್ ಈಗ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಏಕೈಕ ಬಿಲಿಯನೇರ್ ಆಗಿದ್ದಾರೆ, ಮಿಸ್ಟರ್‌ಬೀಸ್ಟ್ ಅವರ ನಿಜವಾದ ಹೆಸರು ಜಿಮ್ಮಿ ಡೊನಾಲ್ಡ್ಸನ್. ಅವರು ತಮ್ಮ ಸಂಪತ್ತನ್ನು ಆನುವಂಶಿಕವಾಗಿ ಪಡೆಯಲಿಲ್ಲ, ಬದಲಿಗೆ ಅದನ್ನು ತಾವೆ ದುಡಿದು ಹೆಚ್ಚು ಮಾಡಿಕೊಂಡರು.. 27 ನೇ ವಯಸ್ಸಿನಲ್ಲಿಯೇ, ಜಿಮ್ಮಿ ಡೊನಾಲ್ಡ್ಸನ್ ಹೊಂದಿರುವ ಈ ಕಂಟೆಂಟ್ ಕ್ರಿಯೇಟರ್ ಈಗ ಬಿಲಿಯನೇರ್ ಆಗಿದ್ದಾರೆ.
27
12 ನೇ ವಯಸ್ಸಿನಲ್ಲಿ ಕೆಲಸ ಆರಂಭ
ಮೇ 7, 1998 ರಂದು ಉತ್ತರ ಕೆರೊಲಿನಾದ ಗ್ರೀನ್‌ವಿಲ್ಲೆಯಲ್ಲಿ ಜನಿಸಿದ ಮಿಸ್ಟರ್‌ಬೀಸ್ಟ್, 12 ನೇ ವಯಸ್ಸಿನಲ್ಲಿ ಮಿಸ್ಟರ್‌ಬೀಸ್ಟ್6000 ಎಂಬ ಯೂಸರ್ ನೇಮ್ ನಲ್ಲಿ ತಮ್ಮ ಯೂಟ್ಯೂಬ್ ಪ್ರಯಾಣವನ್ನು ಪ್ರಾರಂಭಿಸಿದರು. ನಂತರ ಅವರು ಕಾಲೇಜಿಗೆ ಸೇರಿದರು, ಆದರೆ ಕಂಟೆಂಟ್ ಕ್ರಿಯೇಟ್ ಮಾಡಲು ಕಾಲೇಜು ಶಿಕ್ಷಣವನ್ನು ತ್ಯಜಿಸಿದ್ದರು.
37
ಯಾವ ವೀಡಿಯೊ ವೈರಲ್ ಆಯಿತು?
ಮಿಸ್ಟರ್ ಬೀಸ್ಟ್ ಅವರ ಆರಂಭಿಕ ವೀಡಿಯೊಗಳಲ್ಲಿ ವೀಡಿಯೊ ಗೇಮ್ ಡಿಫಿನೀಶನ್ ಮತ್ತು ಪ್ರತಿಕ್ರಿಯೆ ವೀಡಿಯೊಗಳನ್ನು ಮಾಡುತ್ತಿದ್ದರು. 2017 ರಲ್ಲಿ, ಅವರು ಮೊದಲು "ಕೌಂಟಿಂಗ್ ಟು 100,000" ಎಂಬ ಟೈಟಲ್ ಹೊಂದಿರುವ ವೈರಲ್ ವೀಡಿಯೊದೊಂದಿಗೆ ಗಮನ ಸೆಳೆದರು, ಇದನ್ನು ಕ್ರಿಯೇಟ್ ಮಾಡಾಲು ಅವರು ಬರೋಬ್ಬರಿ 44 ಗಂಟೆಗಳು ಬೇಕಾಯಿತು ಮತ್ತು ಈ ವಿಡೀಯೋವನ್ನು 21 ಮಿಲಿಯನ್ ಜನ ವೀಕ್ಷಿಸಿದ್ದಾರೆ.
ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಲಿಸ್ಟಲ್ಲಿ ಬೀಸ್ಟ್
2023 ರಲ್ಲಿ, ಟೈಮ್ ನಿಯತಕಾಲಿಕೆಯು ಅವರನ್ನು ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಲಿಸ್ಟ್ ಮಾಡಿದ್ದರು, ಇನ್ನು 2024 ರಲ್ಲಿ, ಫೋರ್ ಬ್ಸ್ ಅವರನ್ನು ಅತಿ ಹೆಚ್ಚು ಗಳಿಸುವ YouTube ಕಂಟೆಂಟ್ ಕ್ರಿಯೇಟರ್ ಎಂದು ಹೆಸರಿಸಿತು.
57
ಒಟ್ಟು 415 ಮಿಲಿಯನ್‌ಗಿಂತಲೂ ಹೆಚ್ಚು ಸಬ್’ಸ್ಕ್ರೈಬರ್ಸ್
ಮಿಸ್ಟರ್ ಬೀಸ್ಟ್ ಕೇವಲ ಯೂಟ್ಯೂಬರ್ ಮಾತ್ರವಲ್ಲ, ಒಬ್ಬ ಕ್ರಿಯೇಟಿವ್ ಉದ್ಯಮಿಯೂ ಆಗಿದ್ದಾರೆ. ಮಿಸ್ಟರ್‌ಬೀಸ್ಟ್, ಮಿಸ್ಟರ್‌ಬೀಸ್ಟ್ ಗೇಮಿಂಗ್, ಬೀಸ್ಟ್ ರಿಯಾಕ್ಟ್‌ಗಳು ಮತ್ತು ಮಿಸ್ಟರ್‌ಬೀಸ್ಟ್ ಫಿಲಾಂತ್ರಪಿ ಸೇರಿದಂತೆ ಅವರ ಯೂಟ್ಯೂಬ್ ಚಾನೆಲ್‌ಗಳು ಒಟ್ಟು 415 ಮಿಲಿಯನ್‌ಗಿಂತಲೂ ಹೆಚ್ಚು ಸಬ್’ಸ್ಕ್ರೈಬರ್ಸ್ ಹೊಂದಿದ್ದಾರೆ.
67
ಹಲವು ಬ್ಯುಸಿನೆಸ್ ಗಳನ್ನು ಮಾಡುವ ಮಿಸ್ಟರ್ ಬೀಸ್ಟ್
ವರದಿಯ ಪ್ರಕಾರ, ಅವರು ಜೂನ್ 2023 ರಿಂದ ಜೂನ್ 2024 ರವರೆಗೆ ಸುಮಾರು $85 ಮಿಲಿಯನ್ ಅಥವಾ ಸರಿಸುಮಾರು 372 ಕೋಟಿ ರೂ. ಗಳಿಸಿದ್ದಾರೆ. ಅವರು ಯೂಟ್ಯೂಬ್ ಜೊತೆಗೆ ಹಲವಾರು ಇತರ ವ್ಯವಹಾರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
77
₹8,350 ಕೋಟಿ ನೆಟ್ ವರ್ತ್
ಸೆಲೆಬ್ರಿಟಿ ನೆಟ್ ವರ್ತ್ ಪ್ರಕಾರ, ಅವರು ವಿಶ್ವದಾದ್ಯಂತ ಎಂಟನೇ ಕಿರಿಯ ಬಿಲಿಯನೇರ್ ಆಗಿದ್ದು, ಅಂದಾಜು $1 ಬಿಲಿಯನ್ ನೆಟ್ ವರ್ತ್ (₹8,350 ಕೋಟಿ) ಹೊಂದಿದ್ದಾರೆ.