ಖುಷಿ ಸುದ್ದಿ ಹಂಚಿಕೊಂಡ ಸೀರಿಯಲ್‌ ಗೊಂಬೆ ನೇಹಾ ಗೌಡ!

Published : May 31, 2024, 07:48 PM ISTUpdated : May 31, 2024, 07:57 PM IST

Neha Gowda  Lakshmi Baramma serial Actress pregnant ಇಲ್ಲಿಯವರೆಗೂ ಸಂಬಂಧಿಯ ಮಗುವನ್ನು ಎತ್ತಿಕೊಂಡು ಫೋಟೋಗೆ ಪೋಸ್‌ ನೀಡ್ತಿದ್ದ ಬೊಂಬೆ ಖ್ಯಾತಿಯ ನೇಹಾ ಗೌಡ ಖುಷಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

PREV
110
ಖುಷಿ ಸುದ್ದಿ ಹಂಚಿಕೊಂಡ ಸೀರಿಯಲ್‌ ಗೊಂಬೆ ನೇಹಾ ಗೌಡ!

ಸೀರಿಯಲ್‌ ನಟಿ ನೇಹಾ ಗೌಡ ಖುಷಿ ವಿಚಾರವನ್ನು ಹಂಚಿಕೊಂಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಈ ವಿಚಾರ ತಿಳಿಸಿದ್ದಾರೆ.

210


2018ರಲ್ಲಿ ವಿವಾಹವಾಗಿದ್ದ ಈ ಜೋಡಿ ಮದುವೆಯಾದ ಆರು ವರ್ಷಗಳ ಬಳಿಕ ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಿದ್ಧವಾಗಿದ್ದಾರೆ.
 

310


ಸೋಶಿಯಲ್‌ ಮೀಡಿಯಾದಲ್ಲಿ ಇದರ ಕ್ಯೂಟ್‌ ವಿಡಿಯೋವನ್ನು ಹಂಚಿಕೊಂಡಿರುವ ನೇಹಾ ಗೌಡ, ತಮ್ಮ ಕುಟುಂಬ ದೊಡ್ಡದಾಗುತ್ತಿದೆ ಎಂದು ಹೇಳಿದ್ದಾರೆ.
 

410

'ನಮ್ಮ ಕುಟುಂಬಕ್ಕೆ ಹೊಸ ಜೀವ ಸ್ವಾಗತಿಸಲು ನಾವು ತಯಾರಿ ನಡೆಸುತ್ತಿರುವಾಗ, ನಮ್ಮ ಹೃದಯವು ಸಂತೋಷ ಮತ್ತು ನಿರೀಕ್ಷೆಯಿಂದ ತುಂಬಿ ತುಳುಕುತ್ತಿದೆ' ಎಂದು ಅವರು ಬರೆದಿದ್ದಾರೆ.
 

510

'ನಿಮ್ಮಲ್ಲಿ ಹಲವರು ಅದನ್ನು ಊಹಿಸಿದ್ದಾರೆ ಮತ್ತು ಹೌದು, ನೀವು ಹೇಳಿದ್ದು ಸರಿ! ನಮ್ಮ ಕುಟುಂಬ ಎರಡರಿಂದ ಮೂರಕ್ಕೆ ಬೆಳೆಯುತ್ತಿದೆ. ನಿದ್ದೆಯಿಲ್ಲದ ರಾತ್ರಿಗಳು, ಅಂತ್ಯವಿಲ್ಲದ ನಗು ಮತ್ತು ಮಿತಿಯಿಲ್ಲದ ಪ್ರೀತಿಯಿಂದ ತುಂಬಿರುವ ಈ ಹೊಸ ಅಧ್ಯಾಯಕ್ಕಾಗಿ ನಾವು ಹೆಚ್ಚು ಉತ್ಸುಕರಾಗದೇ ಇರಲು ಸಾಧ್ಯವಿಲ್ಲ..' ಎಂದು ನೇಹಾ ವಿಡಿಯೋ ಜೊತೆ ಬರೆದುಕೊಂಡಿದ್ದಾರೆ.
 

610

ಈಗಾಗಳೇ ಹಲವು ಬಾರಿ ನೇಹಾ ಗೌಡ ಹಾಗೂ ಅವರ ಪತಿ ಚಂದನ್‌ ಗೌಡ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿಗಳು ಬರುತ್ತಿದ್ದವು. ಆದರೆ, ಈ ಸುದ್ದಿಯನ್ನು ಸ್ವತಃ ನೇಹಾ ಗೌಡ ತಳ್ಳಿ ಹಾಕಿದ್ದರು.

710

ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಗೊಂಬೆ ಪಾತ್ರದ ಮೂಲಕ ಜನಪ್ರಿಯರಾಗಿದ್ದ ನೇಹಾ ಗೌಡ, 2018ರಲ್ಲಿ ಬಾಲ್ಯದ ಗೆಳೆಯ ಚಂದನ್‌ ಗೌಡ ಅವರನ್ನು ವಿವಾಹವಾಗಿದ್ದರು. 

810

ಇದಕ್ಕೂ ಮುನ್ನ ಅಮೆರಿಕ ಹಾಗೂ ಹಾಂಕಾಂಗ್‌ನಲ್ಲಿ ಕೆಲಸ ಮಾಡಿದ್ದ ಚಂದನ್‌ ಗೌಡ, ಇತ್ತೀಚೆಗೆ ಸೀರಿಯಲ್‌ ನಟರಾಗಿಯೂ ಪಾದಾರ್ಪಣೆ ಮಾಡಿದ್ದಾರೆ. 

910

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಂತರಪಟ ಸೀರಿಯಲ್‌ನಲ್ಲಿ ಚಂದನ್‌ ಗೌಡ ನಾಯಕ ಪಾತ್ರ ಮಾಡುತ್ತಿದ್ದಾರೆ. 

1010

ಇನ್ನು ನೇಹಾ ಗೌಡ ಹಾಗೂ ಚಂದನ್‌ ಗೌಡ ಜೋಡಿ ಸೀರಿಯಲ್‌ಗಳಲ್ಲಿ ಮಾತ್ರವಲ್ಲದೆ, ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಮೂಲಕ ಜನರಿಗೆ ಪರಿಚಿತರಾಗಿದ್ದಾರೆ.

Read more Photos on
click me!

Recommended Stories