ಗುಲಾಬಿ ಹಾರ್ಟ್ ಡ್ರೆಸ್‌ನಲ್ಲಿ ಜಗಮಗಿಸಿದ ನಿವೇದಿತಾ ಗೌಡ: ಲಿಪ್‌ಸ್ಟಿಕ್‌ ಹಚ್ಚಿಕೊಂಡಿದ್ದಕ್ಕೆ ಬೇಜಾರಾದ ಫ್ಯಾನ್ಸ್!

First Published | Sep 15, 2024, 10:52 PM IST

ಬಿಗ್‌ಬಾಸ್ ಹಾಗೂ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಖ್ಯಾತಿಯ ನಿವೇದಿತಾ ಗೌಡ ದಿನದಿಂದ ದಿನಕ್ಕೆ ಸಖತ್ ಆಗಿ ಮಿಂಚಿದ್ದರು. ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡ ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗುತ್ತಲೇ ಇರುತ್ತದೆ.

ಚಂದನ್​ ಶೆಟ್ಟಿಗೆ ಡಿವೋರ್ಸ್ ನೀಡಿದ ಬಳಿಕವೂ ಹಾಟ್ ಬ್ಯೂಟಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿರುತ್ತಾರೆ. ಬಿಗ್​ಬಾಸ್, ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡು ಆಗಾಗ ನಿವೇದಿತಾ ಗೌಡ ಸುದ್ದಿಯಲ್ಲಿ ಇರುತ್ತಿದ್ದರು. 

ಅದರಲ್ಲೂ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ಹೊಸ ಫೋಟೋಸ್​ ಹಾಗೂ ವಿಡಿಯೋಸ್​ ಶೇರ್ ಮಾಡಿಕೊಳ್ಳುವ ಮೂಲಕ ಸುದ್ದಿಯಲ್ಲಿ ಇರುತ್ತಾರೆ. ಗಾಯಕ ಚಂದನ್ ಶೆಟ್ಟಿಗೆ ಡಿವೋರ್ಸ್‌ ಕೊಟ್ಟ ಬಳಿಕವಂತೂ ಸಾಕಷ್ಟು ಸದ್ದು ಮಾಡುತ್ತಿದ್ದ ನಿವೇದಿತಾ ಅವರು ಇದೀಗ ಹೊಸ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

Tap to resize

ಶೇರ್​ ಮಾಡಿಕೊಂಡ ವಿಡಿಯೋದಲ್ಲಿ ನಿವೇದಿತಾ ಗೌಡ ಜೀನ್ಸ್, ಹಾಗೂ ಗುಲಾಬಿ ಹಾರ್ಟ್ ಡ್ರೆಸ್ ತೊಟ್ಟು ಇಂಗ್ಲೀಷ್ ಬೇಬಿ ಡಾಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಲ್ಲದೇ ತುಟಿಗೆ ಲಿಪ್‌ಸ್ಟಿಕ್‌ ಸಹ ಹಚ್ಚಿಕೊಂಡಿದ್ದಾರೆ. 
 

ವಿಡಿಯೋ ನೋಡಿದ ನಿವೇದಿತಾ ಗೌಡ ಫ್ಯಾನ್ಸ್ ಬೇಸರ ಹೊರ ಹಾಕಿ, ನೆಗೆಟಿವ್ ಕಮೆಂಟ್ ಮಾಡಿದ್ದಾರೆ. ಈ ಲುಕ್​ನಲ್ಲಿ ನಿಮ್ಮನ್ನು ನೋಡೋದಕ್ಕೆ ಆಗೋದಿಲ್ಲ ಅಂತೆಲ್ಲ ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ನಿವೇದಿತಾ ಗೌಡ ಜೀವನದಲ್ಲಿ ಸಾಮಾಜಿಕ ಜಾಲತಾಣದ ರೀಲ್ಸ್‌ಗಳಿಂದ ಬಹಳಷ್ಟು ಗಳಿಸಿದ್ದಾರೆ. ಇನ್ನು ಹಣ ಗಳಿಕೆಯಲ್ಲಿಯೂ ನಿವೇದಿತಾಗೆ ತುಂಬಾ ಅನುಕೂಲವಾಗಿದೆ. ಸ್ವತಂತ್ರವಾಗಿ ಜೀವನ ನಡೆಸಲು ತೊಂದರೆಯಾಗದಷ್ಟು ಹಣ ಗಳಿಕೆ ಇದೆ.

ಇನ್ನು ಟಿಕ್ ಟಾಕ್ ಮತ್ತು ಇನ್ಸ್ಟಾಗ್ರಾಮ್ ಮೂಲಕ ರೀಲ್ಸ್ ಮಾಡುತ್ತಾ ಲಕ್ಷಾಂತರ ಫಾಲೋವರ್ಸ್‌ಗಳನ್ನು ಪಡೆದಿರುವ ನಿವೇದಿತಾ ಗೌಡ ಇದೀಗ ಸಿನಿಮಾ ನಟಿಯಾಗಿ ಪಯಣ ಆರಂಭಿಸಿದ್ದಾರೆ.

Latest Videos

click me!