ಸುದ್ದಿ ಇಲ್ಲದೇ ಕದ್ದು ಮುಚ್ಚಿ ಮದುವೆ ಆಗ್ಬಿಟ್ರ Shobha Shetty... ವೈರಲ್ ಆಗ್ತಿದೆ ವಿಡಿಯೋ

Published : Oct 29, 2025, 01:19 PM IST

ನಿಶ್ಚಿತಾರ್ಥ ಆಗಿ ಎರಡು ವರ್ಷ ಆಗುತ್ತಿದ್ದರೂ ಕನ್ನಡ ಬಿಗ್ ಬಾಸ್ ಬೆಡಗಿ-ನಟಿ ಶೋಭಾ ಶೆಟ್ಟಿ ಯಾಕೆ ಮದುವೆ ಆಗುತ್ತಿಲ್ಲ ಎಂದು ಅಭಿಮಾನಿಗಳು ಗುಸುಗುಸು ಮಾಡುತ್ತಿರುವಾಗಲೇ ಇದೀಗ ಶೋಭಾ ಶೆಟ್ಟಿ ಮದುವೆ ವಿಡಿಯೋ ವೈರಲ್ ಆಗಿದೆ. ಹಾಗಿದ್ರೆ ಕದ್ದು ಮುಚ್ಚಿ ಮದುವೆಯಾದ್ರಾ ಶೋಭಾ ಶೆಟ್ಟಿ.

PREV
17
ಶೋಭಾ ಶೆಟ್ಟಿ

ಕನ್ನಡ ಕಿರುತೆರೆ ನಟಿ, ತೆಲುಗಿನ ಜನಪ್ರಿಯ ನಟಿ ಹಾಗೂ ಕನ್ನಡ ಮತ್ತು ತೆಲುಗು ಬಿಗ್ ಬಾಸ್ ನಲ್ಲಿ ಸದ್ದು ಮಾಡಿದ್ದ ಬೆಡಗಿ ಶೋಭಾ ಶೆಟ್ಟಿ ಅವರ ನಿಶ್ಚಿತಾರ್ಥವಾಗಿ ವರ್ಷಗಳು ಎರಡು ಕಳೆಯುತ್ತಿದ್ದರೂ ನಟಿ ಯಾಕೆ ಮದುವೆ ಆಗುತ್ತಿಲ್ಲ ಎಂದು ಜನರು ಕೇಳುತ್ತಿರುವ ಹೊತ್ತಿಗೆ ಇದೀಗ ನಟಿಯ ಮದುವೆ ವಿಡಿಯೋ ವೈರಲ್ ಆಗುತ್ತಿದೆ.

27
ಬಿಗ್ ಬಾಸ್ ಸೀಸನ್ 11 ವೈಲ್ಡ್ ಕಾರ್ಡ್ ಎಂಟ್ರಿ

ಕನ್ನಡದವರೇ ಆದ ಶೋಭಾ ಶೆಟ್ಟಿ ಅಗ್ನಿ ಸಾಕ್ಷಿ ಸೀರಿಯಲ್ ಮೂಲಕ ಪರಿಚಿತರಾದರೂ ಕೂಡ ಅವರು ಜನಪ್ರಿಯತೆ ಗಳಿಸಿದ್ದು, ತೆಲುಗು ಕಿರುತೆರೆಯಲ್ಲಿ. ಬಳಿಕ ತೆಲುಗು ಬಿಗ್ ಬಾಸ್ ಮೂಲಕ ಫೇಮಸ್ ಆದ ನಟಿ, ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ 11 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಭರ್ಜರಿ ಮನರಂಜನೆ ಕೊಟ್ಟಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಹೊರ ನಡೆದಿದ್ದರೂ ಕೂಡ.

37
ಸಹ ನಟನೊಂದಿಗೆ ಲವ್ ನಿಶ್ಚಿತಾರ್ಥ

ತೆಲುಗು ಬಿಗ್ ಬಾಸ್ ಮನೆಯಲ್ಲಿರುವಾಗಲೇ ಶೋಭಾ ಶೆಟ್ಟಿ ತಾವು ತಮ್ಮ ಸೀರಿಯಲ್ ಸಹ ನಟನನ್ನು ಪ್ರೀತಿಸುತ್ತಿರುವುದಾಗಿ ಸಹ ಹೇಳಿದ್ದರು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಇಬ್ಬರು ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು.

47
ಯಶ್ವಂತ್ ರೆಡ್ಡಿ ಜೊತೆ ನಿಶ್ಚಿತಾರ್ಥ

ಶೋಭಾ ಶೆಟ್ಟಿ ತೆಲುಗಿನಲ್ಲಿ ಕಾರ್ತಿಕ ದೀಪಂ ಧಾರವಾಹಿ ನಟಿಸಿದ್ದು, ಈ ಧಾರಾವಾಹಿ ಅವರಿಗೆ ಹೆಸರು ತಂದುಕೊಟ್ಟಿತು. ಇದೇ ಧಾರವಾಹಿಯಲ್ಲಿ ಆದಿತ್ಯ ಪಾತ್ರ ನಿರ್ವಹಿಸಿದ್ದ ಯಶ್ವಂತ್ ರೆಡ್ಡಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು ಶೋಭಾ ಶೆಟ್ಟಿ. 2024ರ ಎಪ್ರಿಲ್ ನಲ್ಲಿ ಯಶ್ವಂತ್ ರೆಡ್ಡಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಶೋಭಾ, ಈ ವರ್ಷ ಎಂಗೇಜ್ ಮೆಂಟ್ ಆನಿವರ್ಸರಿ ಕೂಡ ಆಚರಿಸಿಕೊಂಡಿದ್ದರು.

57
ಈ ವರ್ಷವೇ ಮದುವೆ ಎಂದಿದ್ದ ಶೋಭಾ

ಅಷ್ಟೇ ಅಲ್ಲ ಶೋಭಾ ಬಳಿ ಮದುವೆಯ ಬಗ್ಗೆ ಕೇಳಿದಾಗ ತಾವು ಈ ವರ್ಷವೇ ಮದುವೆಯಾಗುವುದಾಗಿ ಕೂಡ ಹೇಳಿದ್ದರು. ಆದರೆ ಇಲ್ಲಿವರೆಗೂ ಮದುವೆಯ ಬಗ್ಗೆ ಹೆಚ್ಚು ಮಾಹಿತಿ ಕೊಟ್ಟಿರಲಿಲ್ಲ ನಟಿ. ಆದರೆ ಇದೀಗ ಮದುವೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

67
ಸದ್ದಿಲ್ಲದೇ ಮದುವೆಯಾದ್ರಾ ಶೋಭಾ ಶೆಟ್ಟಿ

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಶೋಭಾ ಶೆಟ್ಟಿ ಮತ್ತು ಯಶ್ವಂತ್ ರೆಡ್ಡಿ ಮದುವೆಯಾಗುತ್ತಿರುವುದನ್ನು ಕಾಣಬಹುದು. ಹಳದಿ ಬಣ್ಣದ ಸೀರೆಯಲ್ಲಿ ಶೋಭಾ ಹಾಗೂ ಪಂಚೆ ಶರ್ಟಲ್ಲಿ ಯಶ್ವಂತ್ ಅಕ್ಷತೆಯನ್ನು ತಲೆ ಮೇಲೆ ಹಾಕುವ ಆಚರಣೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಎಲ್ಲರೂ ಮದುವೆ ಆಗೋಯ್ತ ಎಂದು ಕೇಳುತ್ತಿದ್ದಾರೆ. ಆದರೆ ಇದು ಶೂಟಿಂಗ್ ಗಾಗಿ ಮಾಡಿಕೊಂಡ ವಿಡಿಯೋ ಆಗಿದೆ.

77
ಜ್ಯುವೆಲ್ಲರಿ ಜಾಹೀರಾತು

ಜ್ಯುವೆಲ್ಲರಿ ಶಾಪ್ ಒಂದರ ಜಾಹೀರಾತು ಇದಾಗಿದ್ದು, ಮದುವೆ ಸೀಸನ್ ಗಳಲ್ಲಿ ಮುಖ್ಯವಾಗಿ ಬೇಕಾಗುವ ಚಿನ್ನವನ್ನು ಕೊಳ್ಳುವ ಬಗ್ಗೆ ಶೋಭಾ ಶೆಟ್ಟಿ ಮತ್ತು ಯಶ್ವಂತ್ ರೆಡ್ಡಿ ಮದುವೆಯಾಗುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಅಂದ ಹಾಗೇ ಈ ಜೋಡಿಯ ರಿಯಲ್ ಮದುವೆ ಯಾವಾಗ ಆಗುತ್ತೆ ಅನ್ನೋದನ್ನು ಕಾದು ನೋಡಬೇಕು.

Read more Photos on
click me!

Recommended Stories