44ನೇ ವಯಸ್ಸಲ್ಲಿ 3ನೇ ಮದುವೆಯಾದ್ರಾ ಶ್ವೇತಾ ತಿವಾರಿ: ನಟನೊಂದಿಗಿನ ಫೋಟೋ ವೈರಲ್!

Published : Nov 21, 2024, 01:46 PM ISTUpdated : Nov 21, 2024, 01:50 PM IST

ಸಾಮಾಜಿಕ ಜಾಲತಾಣದಲ್ಲಿ ಹಿಂದಿ ಸೀರಿಯಲ್ ಲೋಕದ ಪ್ರಸಿದ್ಧ ನಟಿ ಶ್ವೇತಾ ತಿವಾರಿ ಮತ್ತು ನಟ ವಿಶಾಲ್ ಆದಿತ್ಯ ಸಿಂಗ್ ಅವರ ಮದುವೆ ಫೋಟೋಗಳು ವೈರಲ್ ಆಗಿವೆ. ಇದು ಶ್ವೇತಾ ತಿವಾರಿ ಅಭಿಮಾನಿಗಳಿಗೆ ಶಾಕ್‌ ನೀಡಿದೆ.

PREV
15
44ನೇ ವಯಸ್ಸಲ್ಲಿ 3ನೇ ಮದುವೆಯಾದ್ರಾ ಶ್ವೇತಾ ತಿವಾರಿ: ನಟನೊಂದಿಗಿನ ಫೋಟೋ ವೈರಲ್!

44ರ ಹರೆಯದಲ್ಲೂ 18ರ ಹುಡುಗಿಯಂತೆ ಮಿಂಚುತ್ತಿರುವ ನಟಿ ಶ್ವೇತಾ ತಿವಾರಿ ಅವರಿಗೆ ಸಾಮಾಜಿಕ ಜಾಲತಾಣವೂ ಸೇರಿದಂತೆ ಹಲವೆಡೆ ಲಕ್ಷಾಂತರ ಜನ ಅಭಿಮಾನಿಗಳಿದ್ದಾರೆ. ಈಗಾಗಲೇ ನಟಿಗೆ ಎರಡು ಬಾರಿ ಮದುವೆಯಾಗಿದ್ದು, ನಟಿ 24ರ ಹರೆಯದ ಪಾಲಕ್ ತಿವಾರಿಯೂ ಸೇರಿದಂತೆ ಇಬ್ಬರು ಮಕ್ಕಳಿದ್ದಾರೆ. ಹೀಗಿರುವಾಗ ನಟಿ ಟಿವಿ ನಟ ವಿಶಾಲ್ ಆದಿತ್ಯ ಸಿಂಗ್ ಜೊತೆ ಮದುವೆಯಾಗಿರುವಂತೆ ಕಾಣುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ. 

25

ಆದರೆ ಈ ಬಗ್ಗೆ ಪರಿಶೀಲನೆ ಮಾಡಿದಾಗ ಈ ಫೋಟೋಗಳು ನಕಲಿ ಎಂಬುದು ತಿಳಿದು ಬಂದಿದೆ. ನಟಿ ಶ್ವೇತಾ ತಿವಾರಿ ಮತ್ತು ಟಿವಿ ನಟ ವಿಶಾಲ್ ಆದಿತ್ಯ ಸಿಂಗ್ ಅವರ ಎಡಿಟ್ ಮಾಡಿದ ಮದುವೆ ಫೋಟೋ ಇದಾಗಿದ್ದು, ನಿಜ ಜೀವನದಲ್ಲಿ ಅವರಿಬ್ಬರು ಮದುವೆಯಾಗಿಲ್ಲ, ಆದರೆ ಇದನ್ನು ತಿಳಿಯದ ಕೆಲವರು ನಟಿ ಶ್ವೇತಾ ಮೂರನೇ ಬಾರಿ ಮದುವೆಯಾಗಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.


ಬರೀ ಇಷ್ಟೇ ಅಲ್ಲ, ನಟಿ ಮದುವೆ ನಂತರ ಮೊದಲ ಬಾರಿ ಮಾಡುವ ತಿನಿಸು 'ಪೆಹಲಿ ರಸೋಯಿ' ಮಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗುತ್ತಿದೆ. ವೈರಲ್ ಆಗಿರುವ ಒಂದು ಫೋಟೋದಲ್ಲಿ ಶ್ವೇತಾ ಕೆಂಪು ಸೀರೆಯಲ್ಲಿದ್ದರೆ, ವಿಶಾಲ್ ಬಿಳಿ ಕುರ್ತಾ-ಪೈಜಾಮ ಮತ್ತು ಕೆಂಪು ಜಾಕೆಟ್ ಧರಿಸಿದ್ದಾರೆ. ಒಮ್ಮೆಗೆ ನೋಡುವಾಗ ನಿಜವೆಂದು ಕಂಡರೂ, ಈ ಫೋಟೋಗಳು ಅಸಲಿಯಲ್ಲ,ಇವುಗಳು ಎಡಿಟೆಡ್ ಫೋಟೋಗಳಾಗಿವೆ. 

35

ಬಾಲಿವುಡ್ ನಟಿ ಸ್ವರ ಭಾಸ್ಕರ್ ಮತ್ತು ರಾಜಕಾರಣಿ ಫಹಾದ್ ಅಹ್ಮದ್ ಅವರ ಖಾಸಗಿ ಮದುವೆಯ ಫೋಟೋವನ್ನು ಎಡಿಟ್ ಮಾಡಿದ ಕಿಡಿಗೇಡಿಗಳು ಅಲ್ಲಿ, ಶ್ವೇತಾ ತಿವಾರಿ ಹಾಗೂ  ವಿಶಾಲ್ ಆದಿತ್ಯ ಸಿಂಗ್ ಅವರನ್ನು ತಂದಿಟ್ಟಿದ್ದಾರೆ. ಫಹಾದ್ ಅಹ್ಮದ್ ಮುಖವನ್ನು ಕತ್ತರಿಸಿ ಅಲ್ಲಿ ವಿಶಾಲ್ ಆದಿತ್ಯ ಸಿಂಗ್ ಫೋಟೋವನ್ನು ಅಂಟಿಸಿದ್ದಾರೆ. ಹಾಗೆಯೇ ಸ್ವರ ಭಾಸ್ಕರ್ ಇದ್ದ ತಲೆ ಕತ್ತರಿಸಿ ಅಲ್ಲಿ ಶ್ವೇತಾ ತಿವಾರಿ ಫೋಟೋವನ್ನು ಜೋಡಿಸಿದ್ದಾರೆ. 

45

ಇತ್ತ ನಟಿ ಶ್ವೇತಾ ತಮ್ಮ ವೈಯಕ್ತಿಕ ಜೀವನಕ್ಕಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಅವರು ಮೊದಲು 1998ರಲ್ಲಿ  ರಾಜಾ ಚೌಧರಿ ಅವರನ್ನು ವಿವಾಹವಾಗಿದ್ದರು, ಆದರೆ 2007ರಲ್ಲಿ ದಂಪತಿ ಪರಸ್ಪರ ದೂರಾಗಿದ್ದು, ಅವರಿಗೆ ಪಾಲಕ್ ತಿವಾರಿ ಎಂಬ ಮಗಳಿದ್ದಾರೆ. ಪಾಲಕ್ ತಿವಾರಿ ಈಗ ಬೆಳೆದ ಹುಡುಗಿಯಾಗಿದ್ದು, ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಖಾನ್ ಜೊತೆಗಿನ ಡೇಟಿಂಗ್ ಕಾರಣಕ್ಕೆ ಅವರು ಸಾಕಷ್ಟು ಸುದ್ದಿಯಲ್ಲಿದ್ದಾರೆ. 

55

ಇತ್ತ ಮೊದಲ ಪತಿಯೊಂದಿಗಿನ ವಿಚ್ಛೇದನದ ನಂತರ ಕೆಲವರ್ಷ ಒಂಟಿಯಾಗಿದ್ದ  ಶ್ವೇತಾ 2013 ರಲ್ಲಿ ಅಭಿನವ್ ಕೊಹ್ಲಿ ಅವರನ್ನು ವಿವಾಹವಾದರು, ಮತ್ತು ದಂಪತಿಗೆ ರೇಯಾನ್ಶ್ ಕೊಹ್ಲಿ ಎಂಬ ಮಗನಿದ್ದಾನೆ. ಆದಾಗ್ಯೂ, ಅವರ ಎರಡನೇ ಮದುವೆಯಲ್ಲಿಯೂ ತೊಂದರೆ ಕಾಣಿಸಿಕೊಂಡಿದ್ದು, ಶ್ವೇತಾ ತಿವಾರಿ ಹಾಗೂ ಮತ್ತು ಅಭಿನವ್ 2019 ರಲ್ಲಿ ಪರಸ್ಪರ ದೂರಾಗಿರುವುದಾಗಿ ಘೋಷಿಸಿಕೊಂಡಿದ್ದಾರೆ.

click me!

Recommended Stories