ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ, ಸ್ಪರ್ಧಿ ಒಬ್ಬರು ಅವರು ನಿಂದನೀಯ ಪದ ಬಳಕೆಯ ಆರೋಪ ಮತ್ತು ಇತರ ಸ್ಪರ್ಧಿಗಳೊಂದಿಗೆ ತೀವ್ರ ಜಗಳದ ನಂತರ ತಾವೇ ಶೋ ತೊರೆಯುವ ಬಗ್ಗೆ ಮಾತನಾಡಿದ್ದಾರೆ. ಅವರ ಈ ವರ್ತನೆಯು ಮನೆಯಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಯಾರವರು?
ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada 12) ವೀಕೆಂಡ್ನಲ್ಲಿ ಇದೀಗ ಮತ್ತೊಂದು ಎಲಿಮಿನೇಷನ್ ನಡೆಯಲಿದೆ. ಯಾರು ಮನೆಯಿಂದ ಹೊರಕ್ಕೆ ಹೋಗುತ್ತಾರೆ ಎನ್ನುವ ಬಗ್ಗೆ ವೀಕ್ಷಕರಲ್ಲಿ ಕುತೂಹಲವಿದ್ದು, ಒಬ್ಬೊಬ್ಬರು ಒಂದೊಂದು ಹೆಸರುಗಳನ್ನು ಸೂಚಿಸುತ್ತಿದ್ದಾರೆ.
27
ಖುದ್ದು ಷೋ ಬಿಟ್ಟು ಹೋಗುವ ಮಾತು
ಇವುಗಳ ನಡುವೆಯೇ, ತಾವೇ ಖುದ್ದು ಷೋ ಬಿಟ್ಟು ಹೋಗುವ ಬಗ್ಗೆ ಸ್ಪರ್ಧಿಯೊಬ್ಬರು ಮಾತನಾಡಿದ್ದು, ಈ ವಾರ ಅವರೇ ಮನೆಯಿಂದ ಆ ಕಡೆ ಹೋಗಬಹುದು ಎನ್ನಲಾಗಿದೆ.
37
ಇತರರ ಆರೋಪ
ಒಳ್ಳೆಯ ಮನುಷ್ಯರನ್ನು ಹಾಳು ಮಾಡುವುದೇ ಇವರ ಉದ್ದೇಶ ಎಂದು ಮಾಳು ಹೇಳಿದ್ರು, ಇದೊಂದು ಕುತಂತ್ರಿಕೆಲಸ ಎಂಬ ಆರೋಪ ಕೂಡ ಕೇಳಿಬಂದಾಗ, ಇವೆಲ್ಲಾ ಕೇಳುವ ಬದಲು ಬಿಗ್ಬಾಸ್ ಷೋ ಬಿಟ್ಟು ಹೋಗುತ್ತೇನೆ ಎಂದರು.
ಅಂದಹಾಗೆ ಅವರೇ ಧ್ರುವಂತ್ (Bigg Boss Dhruvanth). ಶೋ ಬಿಡ್ತಾರಾ ಧ್ರುವಂತ್? ಎನ್ನುವ ಶೀರ್ಷಿಕೆಯಲ್ಲಿ ಕಲರ್ಸ್ ಕನ್ನಡ ಇದನ್ನು ಶೇರ್ ಮಾಡಿದೆ. ಧ್ರುವಂತ್ ವಿರುದ್ಧ ಆರೋಪಗಳ ಕೇಳಿಬಂದಾಗ ಅವರಿಗೆ ಕೊಟ್ಟ ಟ್ಯಾಗ್ ಅನ್ನು ಧರಿಸುವಂತೆ ಕಿಚ್ಚ ಸುದೀಪ್ ಹೇಳಿದರು. ಆಗ ಬೇಸರದಿಂದ ಧ್ರುವಂತ್ ಹೀಗೆ ಮಾಡುವ ಬದಲು ಷೋ ಬಿಟ್ಟು ಹೋಗಲು ಇಷ್ಟಪಡುತ್ತೇನೆ ಎಂದಿದ್ದಾರೆ!
57
ತಿ* ಗಾಂಚಲಿ ಪದ
ಇದಾಗಲೇ ಧ್ರುವಂತ್ ಅವರ ವಿರುದ್ಧ ಗಂಭೀರ ಆರೋಪ ಕೂಡ ಕೇಳಿಬಂದಿದೆ. ಅವರು ಕೆಟ್ಟ ಶಬ್ದ ಬಳಸಿದ್ದಾರೆ ಎನ್ನಲಾಗಿದೆ. ಸದ್ಯ ಬಿಗ್‌ಬಾಸ್ ಮನೆಯಲ್ಲಿ ತಿ* ಗಾಂಚಲಿ ಪದ ಬಳಸಿ ಸ್ಪರ್ಧಿಗಳು ಒಬ್ಬರನ್ನೊಬ್ಬರನ್ನು ನಿಂದಿಸುತ್ತಿದ್ದಾರೆ. ಈ ಪದದ ಬಳಕೆಯನ್ನು ಧ್ರುವಂತ್ ಆರಂಭಿಸಿದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿಂದೆ ಕಾಕ್ರೋಚ್ ಸುಧಿ ಬಳಸಿದ್ದ ಸಡೆ ಎಂಬ ಪದವೂ ಚರ್ಚೆಗೆ ಕಾರಣವಾಗಿತ್ತು.
67
ಧ್ರುವಂತ್ ವಿರುದ್ಧ ಆಕ್ರೋಶ
ಮನೆ ಲಕ್ಷುರಿ ಐಟಂ ಪಡೆದುಕೊಳ್ಳುವ ವೇಳೆ ನಡೆದ ಮಾತಿನ ಚಕಮಕಿಯಲ್ಲಿ ಧ್ರುವಂತ್ ನಿಮಗೆ 'ಟಿ ಗಾಂಚಾಲಿ' ಎಂಬ ಪದ ಬಳಸಿದ್ರು ಎಂದು ಧನುಷ್ ಮುಂದೆ ಸೂರಜ್ ಹೇಳಿದ್ದರು. ಇದೇ ವಿಷಯವಾಗಿ ಧ್ರುವಂತ್ ಮತ್ತು ಧನುಷ್ ನಡುವೆ ಜಗಳ ಆರಂಭವಾಗುತ್ತದೆ. ಈ ಜಗಳದ ವೇಳೆ ಹಿಂದಿನ ದಿನ ಮಹಿಳಾ ಸ್ಪರ್ಧಿಗೂ ಈ ರೀತಿ ಬಳಕೆ ಮಾಡಿದ್ದೀರಿ ಎಂದು ಧ್ರುವಂತ್ ಹೇಳಿದ್ರು ಎಂದು ಧನುಷ್ ಹೇಳಿದ್ದರು.
77
ಎಲ್ಲರ ಅಸಮಾಧಾನ
ಧ್ರುವಂತ್ ಅವರು ಅತಿರೇಕದ ಪದ ಬಳಕೆ ಮಾಡಿದ್ದಕ್ಕೆ ಸೂರಜ್ ಸಿಂಗ್ ಕೂಡ ಕೋಪಗೊಂಡಿದ್ದರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಧನುಷ್ ಈ ಜಗಳದಲ್ಲಿ ಮಧ್ಯ ಬಂದಿದ್ದರು. ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು ಜಗಳ. ಜಗಳದ ವೇಳೆ ಸ್ಪಂದನಾ ಮೇಲೆ ಕೂಡ ಧ್ರುವಂತ್ ಅವರು ಕೂಗಾಡಿದ್ದರು. ಇವೆಲ್ಲವುಗಳ ನಡುವೆ ಈಗ ಈ ಮಾತು ಕೇಳಿಬಂದಿದೆ.