Bigg Bossಗೆ ವೈಲ್ಡ್​ ಕಾರ್ಡ್​ ಎಂಟ್ರಿ! Dharmasthala ಸುಜಾತಾ ಭಟ್​ ಕೊಟ್ಟೇ ಬಿಟ್ರು ಬಿಗ್​ ಅಪ್​ಡೇಟ್​!

Published : Oct 12, 2025, 11:23 AM IST

ಸೌಜನ್ಯ ಪ್ರಕರಣದಲ್ಲಿ ಅನನ್ಯಾ ಭಟ್ ಎಂಬ ಕಾಲ್ಪನಿಕ ಪಾತ್ರ ಸೃಷ್ಟಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಸುಜಾತಾ ಭಟ್, ಇದೀಗ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಧರ್ಮಸ್ಥಳದ ಕ್ಷಮೆ ಕೋರುವುದಾಗಿ ಹೇಳಿರುವ ಅವರು, ಬಿಗ್‌ಬಾಸ್‌ಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಹೋಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

PREV
16
ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಸುಜಾತಾ ಭಟ್​

ಸುಜಾತಾ ಭಟ್​ (Sujata Bhat) ಎನ್ನುವ ಹೆಸರು ಕಳೆದ ಕೆಲವು ತಿಂಗಳುಗಳಿಂದ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಮಹಾ ಮೋಸಗಾರರು, ಮಹಾ ಸುಳ್ಳುಗಾರರನ್ನೂ ಮೀರಿಸಿದ, ಕಲ್ಪನೆಯ ಕಥೆಯನ್ನು ಬರೆಯುವ ಬರಹಗಾರರನ್ನೂ ಮೀರಿಸಿದ ಸುಜಾತಾ ಭಟ್​, ಅಸ್ತಿತ್ವದಲ್ಲಿಯೇ ಇಲ್ಲದ ಪಾತ್ರವೊಂದನ್ನು ಸೃಷ್ಟಿಸಿ, ಮಾಧ್ಯಮದವರ ಎದುರೂ ಕಣ್ಣಿಗೆ ಕಟ್ಟುವಂತೆ ಕಥೆ ಹೇಳಿ ಎಲ್ಲರ ಕಣ್ಣಿನಲ್ಲಿಯೂ ನೀರು ತರಿಸಿದ ಮಹಾ ಮಹಿಳೆ ಈಕೆ! ಹಿಂದೂ ಧರ್ಮಕ್ಕೆ, ಧರ್ಮಸ್ಥಳಕ್ಕೆ ಕಪ್ಪು ಚುಕ್ಕೆ ಇಡಲು AI ಮೂಲಕ ವಿಡಿಯೋ ಮಾಡಿ ಹರಿಬಿಡುವವರ, ರಾಜಕೀಯ ದುರುದ್ದೇಶದಿಂದ ವಿಷಬೀಜ ಬಿತ್ತಲು ಬಯಸಿದವರಿಗೆ ದಾಳವಾಗಿ ಬಳಕೆಯಾಗಿದ್ದ ಸುಜಾತಾ ಭಟ್​, ಕೊನೆಗೂ ತಪ್ಪು ಒಪ್ಪಿಕೊಂಡು, ಈಕೆಯನ್ನೇ ನಂಬಿಕೊಂಡಿದ್ದವರಿಗೆ ಶಾಕ್​ ಕೊಟ್ಟಾಕೆ!

26
ಸೌಜನ್ಯಳ ಹೆಸರಿನಲ್ಲಿ ಬೇರೆಯದ್ದೇ ಉದ್ದೇಶ

ಬರ್ಬರವಾಗಿ ಹತ್ಯೆಗೀಡಾದ ಸೌಜನ್ಯಳಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಶುರುವಾದ Justice For Soujanya ವಿಭಿನ್ನ ಹಾದಿಯನ್ನೇ ತುಳಿದು, ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿರುವುದು ತಿಳಿದೇ ಇದೆ. ಸೌಜನ್ಯಳ ಹೆಸರಿನಲ್ಲಿ ರಾಜಕೀಯ, ಧರ್ಮ ಎಲ್ಲವನ್ನೂ ಎಳೆದು ತಂದು ಧರ್ಮಸ್ಥಳದ ಹೆಸರನ್ನು ಹಾಳುಮಾಡಲು ದೊಡ್ಡ ಸಂಚೇ ನಡೆದಿದ್ದು, ಅದರ ಸತ್ಯಾಸತ್ಯತೆ ಇನ್ನೂ ಹೊರಬರಬೇಕಿದೆ. ಇದಾಗಲೇ ಕೆಲವು ಪ್ರಮುಖ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡದ್ದೂ ಆಗಿದೆ. ಇದರ ಹಿಂದೆ ಇರುವ ಕೈಗಳ ಬಗ್ಗೆಯೂ ಎಲ್ಲರಿಗೂ ತಿಳಿದೇ ಇದ್ದರೂ, ಸಾಕ್ಷ್ಯಾಧಾರಗಳು ಸಿಕ್ಕು ಅವರೇ ನಿಜವಾದ ಅಪರಾಧಿಗಳು ಎಂದು ಕಾನೂನು ಪ್ರಕಾರ ಸಾಬೀತು ಆಗಬೇಕಿದೆಯಷ್ಟೇ. ಇವೆಲ್ಲವುಗಳ ನಡುವೆಯೇ ಹೈಲೈಟ್​ ಆಗಿದ್ದು ಅಸ್ತಿತ್ವದಲ್ಲಿಯೇ ಇಲ್ಲದ ಅನನ್ಯಾ ಭಟ್​ (Ananya Bhat). ಹಾಗೂ ಈಕೆಯ ಸೃಷ್ಟಿಕರ್ತೆ ಸುಜಾತಾ ಭಟ್​

36
ಬಾಗಿಲು ಬಂದಾದಾಗ ತಪ್ಪು ಒಪ್ಪಿಕೊಂಡಾಕೆ!

ಎಲ್ಲಾ ದಿಕ್ಕುಗಳಿಂದಲೂ ಬಾಗಿಲು ಬಂದಾದಾಗ ತಪ್ಪು ಒಪ್ಪಿಕೊಂಡಿದ್ದಾರೆ ಸುಜಾತಾ ಭಟ್​. ಈಗ ತಮ್ಮ ವರಸೆ ಬದಲಾಯಿಸಿದ್ದಾರೆ. ಜೀವನದಲ್ಲಿ ಒಂದೂ ನನ್ನ ಮೇಲೆ ಕಪ್ಪು ಚುಕ್ಕೆ ಇರಲಿಲ್ಲ. ತುತ್ತು ಅನ್ನಕ್ಕೂ ಕಷ್ಟವಾದಾಗಲೂ ಎಲ್ಲಿಯೂ ಬೇಡದೇ ತಿಂದವಳು ನಾನು. ಅಂಥ ಒಳ್ಳೆಯವಳಾದ ನನ್ನನ್ನು ಬಳಸಿಕೊಂಡು ಬಿಟ್ಟರು. ನಾನು ಧರ್ಮಸ್ಥಳಕ್ಕೆ ಹೋಗಿ ಹೆಗ್ಗಡೆಯವರಲ್ಲಿ ಕ್ಷಮೆ ಕೋರುವೆ ಎಂದು ಮಾಧ್ಯಮಗಳ ಮುಂದೆ ಬಂದು ಗೋಳೋ ಎನ್ನುತ್ತಿದ್ದಾರೆ ಈ ಸುಜಾತಾ ಭಟ್​.

46
ಬಿಗ್​ಬಾಸ್​ಗೆ ವೈಲ್ಡ್​ ಕಾರ್ಡ್​ ಎಂಟ್ರಿ

ಇದೀಗ ಇನ್ನೊಂದು ವಿಷಯವನ್ನೂ ಈಕೆ ಹೊರಗೆಡವಿದ್ದಾರೆ. ಅದೇನೆಂದರೆ, ಬಿಗ್​ಬಾಸ್​ಗೆ ಹೋಗುವ ಆಸೆಯಂತೆ ಇವರಿಗೆ. ಒಂದು ದಿನದ ಮಟ್ಟಿಗಾದರೂ ನಾನು Bigg Bossಗೆ ಹೋಗಬೇಕು. Wild Card Entry ಮೂಲಕ ಹೋಗುವ ಆಸೆ ಇದೆ. ಅದು ನನ್ನ ದೊಡ್ಡ ಆಸೆ. ಬಿಗ್​ಬಾಸ್​​ ಮನೆಯೊಳಕ್ಕೆ ಹೋಗಿ ಬರಲು ತುಂಬಾ ಉತ್ಸುಕಳಾಗಿದ್ದೇನೆ ಎಂದಿದ್ದಾರೆ.

56
ಹೋದರೂ ಅಚ್ಚರಿಯಿಲ್ಲ ಬಿಡಿ!

ಅಷ್ಟಕ್ಕೂ ಇಂಥವರಿಗಾಗಿಯೇ ಬಿಗ್​ಬಾಸ್​ನ ಬಾಗಿಲು ಸದಾ ತೆರೆದಿರುವುದು ಗುಟ್ಟಾಗಿ ಉಳಿದಿರುವ ವಿಷಯವೇನಲ್ಲ. ಕಾಂಟ್ರವರ್ಸಿ ಮಾಡಿಕೊಂಡವರು, ಜೈಲಿಗೆ ಹೋದವರು, ಕೆಟ್ಟ ಹೆಸರು ಪಡೆದವರು, ಕ್ರಿಮಿನಲ್​ ಮೈಂಡ್​ನವರು ಇಂಥವರಿಗೇ ಮಣೆ ಹಾಕುವುದು ಎಲ್ಲಾ ಭಾಷೆಗಳ ಬಿಗ್​ಬಾಸ್​​ನಲ್ಲಿ ಇದ್ದೇ ಇದೆ. ಮೊದಲ ಕೆಲವು ವಾರಗಳಲ್ಲಿಯೇ ಎಲಿಮಿನೇಟ್​ ಮಾಡಿ ಮನೆಯಿಂದ ಹೊರಕ್ಕೆ ಹಾಕುವ ಸಂಬಂಧ ಒಂದಿಷ್ಟು ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಿದವರನ್ನು ಬಿಗ್​ಬಾಸ್​ ಆಯ್ಕೆ ಮಾಡುತ್ತಾರೆ ಎನ್ನುವ ಮಾತು ಮೊದಲಿನಿಂದಲೂ ಇದೆ.

66
ಇಂಥವರಿಗೆ ತಾನೇ ಮಣೆ?

ಇದೇ ಕಾರಣಕ್ಕೆ, ಇದೀಗ ಸುಜಾತಾ ಭಟ್​ ಹೋದರೂ ಅಚ್ಚರಿಯೇನಿಲ್ಲ. ಅಷ್ಟಕ್ಕೂ ಇವರು ಯಾವಾಗ ಧರ್ಮಸ್ಥಳದ ಪ್ರಕರಣದಲ್ಲಿ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳಿನ ಕಂತೆಗಳನ್ನೇ ತೆರೆದಿಟ್ಟರೋ, ನನ್ನ ಕಾಣೆಯಾದ ಮಗಳು ಅನನ್ಯಾ ಭಟ್​ ಬೇಕು ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಸುರಿಸಿದರೋ, ಅನನ್ಯಾ ಎನ್ನುವವರು ಇಲ್ಲೇ ಇಲ್ಲ ಎಂದು ಸಾಬೀತಾದಾಗಲೂ ಅವಳು ಇದ್ದಾಳೆ ಎಂದು ಒಂದಿನಿತು ಸಂಶಯ ಬರದಂತೆ ರಪರಪ ಎನ್ನುತ್ತಾ ರೀಲು ಬಿಟ್ಟರೋ ಆಗಲೇ ಬಿಗ್​ಬಾಸ್​ಗೆ ಹೋಗುತ್ತಾರೆ ಎಂದು ಸುದ್ದಿಯಾಗಿತ್ತು. ಅದ್ಯಾಕೋ ಆಗ ಆಗಿರಲಿಲ್ಲ. ಈಗ ವೈಲ್ಡ್​ ಕಾರ್ಡ್​ ಎಂಟ್ರಿ ಸಿಕ್ಕರೆ ಅಚ್ಚರಿಯೇನಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.

Read more Photos on
click me!

Recommended Stories