BBK9 ಮೂತಿ ತಿರುಗಿಸಿಕೊಂಡು ಹೋಗ್ತಿದ್ದ ದೀಪಿಕಾ ದಾಸ್ ಈಗ ಮೈ ಮೇಲೆ ಬಿದ್ದು ಮಾತನಾಡಿಸ್ತಿದ್ದಾರಾ?

First Published | Dec 5, 2022, 4:13 PM IST

ವೈಲ್ಡ್‌ ಕಾರ್ಡ್‌ ಎಂಟ್ರಿ ನಂತರ ಸಖತ್ ವೈಲ್ಡ್‌ ಆಗಿ ವರ್ತಿಸುತ್ತಿರುವ ದೀಪಿಕಾ ದಾಸ್. ವೀಕ್ಷಕರು ಫುಲ್ ಶಾಕ್....

ಕನ್ನಡ ಕಿರುತೆರೆಯ ಬುಸ್ ಬುಸ್ ಎಂದೇ ಹೆಸರು ಪಡೆದಿರುವ ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ 7 ನಂತರ ಸೀಸನ್‌ 9ರಲ್ಲಿ ಪ್ರವೀಣರ ಪಟ್ಟಿಯಲ್ಲಿ ಎಂಟ್ರಿ ಕೊಟ್ಟಿದ್ದಾರೆ.

ಎರಡು  ವಾರಗಳ ಹಿಂದೆ ದೀಪಿಕಾ ದಾಸ್ ಎಲಿಮಿನೇಟ್‌ ಆಗಿದ್ದರು ಆದರೆ ಮನೆಯಿಂದ ಹೊರ ಬರದೆ..ಎರಡು ದಿನಗಳ ನಂತರ ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರು.

Tap to resize

 ದೀಪಿಕಾ ದಾಸ್ ರೀ-ಎಂಟ್ರಿ ಕಂಡು ಮನೆ ಮಂದಿ ಶಾಕ್ ಅಗಿದ್ದರು ಆದರೆ ಮನೆಗೆ ಮತ್ತೊಂದು ರೀತಿ ಗ್ಲೋ ಬಂದಿದೆ ಏಕೆಂದರೆ ದೀಪಿಕಾ ಬದಲಾಗಿದ್ದಾರೆ ಅನಿಸುತ್ತಿದೆ. 

 ದೀಪಿಕಾ ದಾಸ್ ಗುಣದಲ್ಲಿ ಬದಲಾವಣೆ ಕಾಣಿಸುತ್ತಿದ್ಯಾ ಎಂದು ವೀಕೆಂಡ್ ಮಾತುಕಥೆಯಲ್ಲಿ ಕಿಚ್ಚ ಸುದೀಪ್ ಕೇಳಿದ್ದರು ಆಗ ಪ್ರತಿಯೊಬ್ಬರು ಹೌದು ಹೌದು ಎಂದು ಹೇಳಿದ್ದಾರೆ. 

 ಮನೆಯಲ್ಲಿ ದೀಪಿಕಾ ದಾಸ್ ನಡೆದುಕೊಂಡು ಹೋಗುವಾಗ ಯಾರಾದರೂ ಎದುರು ಸಿಕ್ಕರೆ ನೋಡಿದ್ದರೂ ನೋಡದಂತೆ ನಡೆದುಕೊಂಡು ಹೋಗುತ್ತಿದ್ದರು ಆದರೆ ಈಗ ಮೈ ಮುಟ್ಟಿ ಹಾಯ್ ಬೈ ಎಂದು ಮಾತನಾಡಿಸುತ್ತಿದ್ದಾರೆ ಎಂದು ರೂಪೇಶ್ ರಾಜಣ್ಣ ಹೇಳಿದ್ದಾರೆ. 

 ದೀಪಿಕಾ ದಾಸ್ ರೀ- ಎಂಟ್ರಿ ಆದ್ಮೇಲೆ ಅರುಣ್ ಸಾಗರ್, ಆರ್ಯವರ್ಧನ್, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರಗಿ ಗುಂಪಿಗೆ ಸೇರಿಕೊಂಡು ತಮಾಷೆ ಮಾಡುತ್ತಿದ್ದಾರೆ.

Deepika das

ಸೀಸನ್ 9ರ ಮೂಲಕ ಬಿಬಿ ಮನೆಗೆ ಎರಡನೇ ಸಲ ಎಂಟ್ರಿ ಕೊಡಲು ಅವಕಾಶ ಪಡೆದುಕೊಂಡ ದೀಪಿಕಾಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಮೂರನೇ ಅವಕಾಶ ಕೊಟ್ಟಿದೆ. ಈ ಮೂಲಕ ದೀಪಿಕಾಗೆ ಥ್ರಿಬಲ್ ಧಮಾಕ ಸಿಕ್ಕಿದೆ. 

Latest Videos

click me!