BBK9 ವಿನೋದ್ ಗೊಬ್ಬರಗಾಲ ಔಟ್; ಬಡವರ ಮನೆ ಮಕ್ಲು ಬೆಳಿಯೋಕೆ ಬಿಡ್ರೋ...

Published : Nov 27, 2022, 01:37 PM IST

 ಬಿಬಿ ಮನೆಯಿಂದ ಹೊರ ನಡೆದ 7ನೇ ಸ್ಪರ್ಧಿ ವಿನೋದ್....ನೆಟ್ಟಿಗರ ಆಕ್ರೋಶ..... 

PREV
17
BBK9 ವಿನೋದ್ ಗೊಬ್ಬರಗಾಲ ಔಟ್; ಬಡವರ ಮನೆ ಮಕ್ಲು ಬೆಳಿಯೋಕೆ ಬಿಡ್ರೋ...

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 9 ರಿಯಾಲಿಟಿ ಶೋನಲ್ಲಿ ಹಾಸ್ಯಕಲಾವಿದ ವಿನೋದ್ ಗೊಬ್ಬರಗಾಲ ಸ್ಪರ್ಧಿಸುತ್ತಿದ್ದರು. 

27

9 ನವೀನರು ಮತ್ತು 9 ಪ್ರವೀಣರುರಲ್ಲಿ ಈಗಾಗಲೆ 6 ಸ್ಪರ್ಧಿಗಳು ಹೊರ ಬಂದಿದ್ದಾರೆ. ಈಗ ನವೀನರ ಪಟ್ಟಿಯಿಂದ ವಿನೋದ್ ಹೊರ ಬಂದಿದ್ದಾರೆ. 

37

ಬಿಬಿ ಎಲಿಮಿನೇಷನ್‌ ವಿಚಾರ ಟಿವಿ ಅಥವಾ ಓಟಿಟಿಯಲ್ಲಿ ಪ್ರಸಾರವಾಗುವ ಮುನ್ನವೇ ಟ್ರೋಲ್‌ ಪೇಜ್‌ಗಳಲ್ಲಿ ಹರಿದಾಡುತ್ತದೆ. ಆ ಮಾಹಿತಿ ಪ್ರಕಾರ ವಿನೋದ್ ಹೊರ ಬಂದಿದ್ದಾರೆ ಎನ್ನಲಾಗಿದೆ. 

47

ಬಿಬಿ 9ನೇ ಸೀಸನ್‌ನ ಮೊದಲ ವಾರದ ಕ್ಯಾಪ್ಟನ್ ಆಗಿದ್ದ ವಿನೋದ್ ಎರಡು ಸಲ ಕಿಚ್ಚನ ಚಪ್ಪಾಳೆ ಕೂಡ ಗಿಟ್ಟಿಸಿಕೊಂಡಿದ್ದಾರೆ. ಆಟದಲ್ಲಿ ಯಾರಿಗಿಂತ ಕಡಿಮೆ ಇಲ್ಲ ಅಷ್ಟು ಇದ್ದ ಮೇಲೆ ಯಾಕೆ ಎಲಿಮಿನೇಟ್ ಆದ್ದರು ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

57

ಅನಾರೋಗ್ಯದಿಂದ ಬಳಲುತ್ತಿದ್ದರೂ ಚಿಕಿತ್ಸೆ ಪಡೆದುಕೊಂಡು ವಿನೋದ್ ಆಟ ಶುರು ಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ ಆದರೂ ಹೊರ ಬಂದಿರುವ ಕಾರಣ 'ವಿನೋದ್ ಗೊಬ್ಬರಗಳ' ಎಂದು ಮೀಮ್ಸ್‌ ಮಾಡಿ ವೈರಲ್ ಮಾಡಲಾಗುತ್ತಿದೆ.

67

ಜೀವದಲ್ಲಿ ತುಂಬಾ ಕಷ್ಟಗಳನ್ನು ನೋಡಿ ಬೆಳೆದಿರುವ ವಿನೋದ್‌ ಮನೆಯಲ್ಲಿದ್ದ ಇನ್ನಿತ್ತರ ಸ್ಪರ್ಧಿಗಳಿಗಿಂತ ಕೊಂಚ ಸೂಕ್ಷ್ಮವಾಗಿದ್ದರು. ತಾಯಿ ಅಂದ್ರೆ ಪಂಚಪ್ರಾಣ. ಅರುಣ್ ಸಾಗರ್, ಕಾವ್ಯಾಶ್ರೀ, ಆರ್ಯವರ್ಧನ್ ಜೊತೆ ಹೆಚ್ಚಿಗೆ ಸಮಯ ಕಳೆಯುತ್ತಿದ್ದರು. 

77

ಈಗಾಗಲೆ ಬಿಬಿ ಮನೆಯಿಂದ ಐಶ್ವರ್ಯ ಪಿಸ್ಸೆ, ಸೈಕ್ ನವಾಜ್, ದರ್ಶ್‌ ಚಂದ್ರಪ್ಪ, ಮಯೂರಿ, ನೇಹಾ ಮತ್ತು ಸಾನ್ಯಾ ಐಯರ್ ಹೊರ ಬಂದಿದ್ದಾರೆ.
 

Read more Photos on
click me!

Recommended Stories