ಈ ಮಹಿಳಾ ಸ್ಪರ್ಧಿಯಲ್ಲಿ ತಾಯಿಯನ್ನು ಕಾಣುತ್ತೀನಿ ಎಂದು ಕೈಗೆ ಗುಲಾಬಿ ಕೊಟ್ಟ ಮಂಜಣ್ಣ; ಎಣ್ಣೆ ಪವರ್ ಲೆಕ್ಕ ಹಾಕಿದ ನೆಟ್ಟಿಗರು!

First Published | Nov 12, 2024, 11:21 AM IST

ಬಿಗ್‌ ಬಾಸ್ ಮನೆಯಲ್ಲಿ ಕೆಂಪು ಗುಲಾಬಿ - ಕಪ್ಪು ಗುಲಾಬಿ ಆಟ ಶುರು. ಉಗ್ರಂ ಮಂಜು ಕೆಂಪು ಗುಲಾಬಿ ಕೊಟ್ಟಿದ್ದು ಯಾರಿಗೆ? 

ಬಿಗ್ ಬಾಸ್ ಸೀಸನ್ 11ರಲ್ಲಿ ಇರುವ ಓನ್ ಆಂಡ್ ಓನ್ಲಿ ಮಾಸ್ಟರ್ ಮೈಂಡ್, ಗೇಮ್ ಪ್ಲಾನರ್ ಹಾಗೂ ಗೇಮ್ ಚೇಂಜರ್ ಎನ್ನುವ ಪಟ್ಟ ಪಡೆದಿರುವ ಸ್ಪರ್ಧಿ ನಟ ಉಗ್ರಂ ಮಂಜು. 

ಈ ವಾರ ಬಿಗ್ ಬಾಸ್ ಮನೆಯಲ್ಲಿ ಜೋಡಿ ಟಾಸ್ಕ್‌ ಆರಂಭವಾಗಿದೆ. ಈ ವೇಳೆ ಸ್ಪರ್ಧಿಗಳು ತಮ್ಮ ನೆಚ್ಚಿನ ಒಬ್ಬ ಸ್ಪರ್ಧಿಗೆ ಕೆಂಪು ಗುಲಾಬಿ ಹೂವು ಹಾಗೂ ಬಿಬಿ ಮನೆಯಿಂದ ಹೊರ ಬಂದ ಮೇಲೆ ಸ್ನೇಹ ಉಳಿಸಿಕೊಳ್ಳಲು ಇಷ್ಟ ಪಡದ ನಂಬಿಕೆಗೆ ಅರ್ಹನಲ್ಲ ವ್ಯಕ್ತಿಗೆ ಕಪ್ಪು ಗುಲಾಬಿ ನೀಡಬೇಕು. 

Tap to resize

ಈ ವೇಳೆ ಉಗ್ರಂ ಮಂಜು ಮೊದಲು ಕಪ್ಪು ಗುಲಾಬಿಯನ್ನು ಗೋಲ್ಡ್‌ ಸುರೇಶ್‌ಗೆ ನೀಡುತ್ತಾರೆ ನಂತರ ಕೆಂಪು ಗುಲಾಬಿಯನ್ನು ಗೌತಮಿಗೆ ನೀಡುತ್ತಾರೆ. ಈ ವೇಳೆ ಗೌತಮಿಯಲ್ಲಿ ತಾಯಿಯನ್ನು ನೋಡುತ್ತೀನಿ ಎಂದು ಹೇಳಿರುವುದಕ್ಕೆ ಪಾಸಿಟಿವ್ ಆಂಡ್ ನೆಗೆಟಿವ್ ಎರಡೂ ಟ್ರೋಲ್ ಆಗುತ್ತಿದೆ.

'ಸ್ನೇಹಿತನಾಗಿ ಗೌತಮಿಗೆ ಸಿಕ್ಕಾಪಟ್ಟೆ ಕನೆಕ್ಟ್‌ ಆಗಿದ್ದೀನಿ ಏಕೆಂದರೆ ಯಾವುದೇ ಮುಜುಗರವಿಲ್ಲದೆ ಏನೂ ಇಲ್ಲದೆ...ಒಂದು ಆಯಿಂಟ್‌ಮೆಂಟ್ ಹಾಕುವುದು ಊಟಾ ಅಯ್ತಾ ಇಲ್ಲ ಎಂದು ವಿಚಾರಿಸುತ್ತಾರೆ' ಎಂದು ಕೆಂಪು ಗುಲಾಬಿ ಹಿಡಿದು ಮಂಜು ಮಾತನಾಡಿದ್ದಾರೆ.

'ಹೊರಗಡೆ ನನಗೆ ಊಟ ಅನ್ನೋದು ಸೇರುತ್ತನೇ ಇರಲಿಲ್ಲ...ಬಿಗ್ ಬಾಸ್‌ ಮನೆಗೆ ಬಂದ ಮೇಲೆ ಊಟ ಚೆನ್ನಾಗಿ ಸೇರುತ್ತಿದೆ ಚೆನ್ನಾಗಿ ಊಟ ಮಾಡಲು ಶುರು ಮಾಡಿದ್ದೀನಿ. ನನ್ನಲ್ಲಿ ಕೆಲವೊಂದು ಅಭ್ಯಾಸಗಳು ಬದಲಾಗಿದೆ' ಎಂದು ಮಂಜು ಹೇಳಿದ್ದಾರೆ.

'ಹೊಟ್ಟೆ ಹಸಿವಾಗುತ್ತಿದೆ ಅನ್ನೋದು ಆ ತಾಯಿಗೆ ಮನೆಯಲ್ಲಿ ಗೊತ್ತಾಗುತ್ತದೆ ಮಗ ಎಷ್ಟು ತಿನ್ನುತ್ತಾನೆ ಅನ್ನೋದನ್ನು..ಅದನ್ನು ಅರ್ಥ ಮಾಡಿಕೊಂಡು ತಾಯಿ ಗುಣದಲ್ಲಿ ಹಂಚಿಕೊಂಡು ತಿನ್ನುವುದು ನಿಜಕ್ಕೂ ಗ್ರೇಟ್' ಎಂದದಿದ್ದಾರೆ ಮಂಜು.

'ಒಂದು ಚಾಪತಿ ಎಕ್ಸ್‌ಟ್ರಾ ಕೊಡುವುದು...ನೀವು ತಿನ್ನಬೇಕು ಅಂತ ಪ್ರೀತಿಯಿಂದ ಕೊಡುವುದು ಗುಣ ತೋರಿಸುವ ಹುಡುಗ ಗೌತಮಿ ಮಾತ್ರ. ಹೊರ ಹೋದ ಮೇಲೂ ಈ ಸ್ನೇಹ ಮುಂದುವರೆಸಬೇಕು' ಎಂದು ಗುಲಾಬಿ ಪಡೆದು ಅಪ್ಪುಗೆ ನೀಡಿ ಮುಂದೆ ಸಾಗುತ್ತಾರೆ. 

Latest Videos

click me!