ನಾಗಿಣಿ ಸೀರಿಯಲ್ ಮೂಲಕ ಕನ್ನಡಿಗರ ಮನಗೆದ್ದು, ಬಿಗ್ ಬಾಸ್ ಸೀಸನ್ 7 (Bigg Boss Season 7) ಮೂಲಕ ಬಾಸ್ ಲೇಡಿಯಾಗಿ ಗುರುತಿಸಿಕೊಂಡ ಕಿರುತೆರೆಯ ಫೇವರಿಟ್ ನಟಿ ದೀಪಿಕಾ ದಾಸ್ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳೋದೆ ತಮ್ಮ ಟ್ರಾವೆಲ್ ಫೋಟೊಗಳ ಮೂಲಕ.
ಹೌದು ದೀಪಿಕಾ ದಾಸ್ ಹೆಚ್ಚಾಗಿ ದೇಶ -ವಿದೇಶ ಸುತ್ತಿಕೊಂಡೇ ಇರ್ತಾರೆ, ಒಂದ್ಸಲ ದುಬೈ, ಇನ್ನೊಂದು ಸಲ ಬಾಲಿ, ಮತ್ತೊಂದ್ಸಲ ಲಂಡನ್ ಹೀಗೆ ಹೆಚ್ಚಾಗಿ ವಿದೇಶಗಳಲ್ಲಿ ಪ್ರವಾಸಿ ತಾಣಗಳಲ್ಲಿ ಸುತ್ತುತ್ತಾ, ಅಲ್ಲಿನ ಜನರೊಂದಿಗೆ ಎಂಜಾಯ್ ಮಾಡ್ತಿರೋದನ್ನ ನೀವು ನೋಡಿರಬಹುದು.
ಈ ಬಾರಿಯೂ ದೀಪಿಕಾ ದಾಸ್ (Deepika Das) ವಿದೇಶದಲ್ಲೆಲ್ಲೋ ಟ್ರಾವೆಲ್ ಮಾಡಿರೋ ಫೋಟೊಗಳನ್ನ ಶೇರ್ ಮಾಡಿ Just chill Lady ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಡೆನಿಮ್ ಮಿನಿ ಸ್ಕರ್ಟ್ ಮತ್ತು ಬ್ಲ್ಯಾಕ್ ಟೀ ಶರ್ಟ್ ಧರಿಸಿರುವ ದೀಪಿಕಾ ಬೀಚ್, ಶಾಪಿಂಗ್ ಮಾಡ್ತಾ ಎಂಜಾಯ್ ಮಾಡ್ತಿರೋ ಫೋಟೊಸ್ ಇದಾಗಿದೆ.
ಪ್ರತಿ ಬಾರಿಯೂ ವಿದೇಶಗಳಲ್ಲೇ ಟ್ರಾವೆಲ್ ಮಾಡೋ ದೀಪಿಕಾ ದಾಸ್ ಗೆ ಅಭಿಮಾನಿಯೊಬ್ಬರು ಕಿವಿಮಾತು ಹೇಳಿದ್ದಾರೆ. ಯಾವ ದೇಶದಲ್ಲಿದ್ದೀರಾ ಮೇಡಂ, ನಮ್ಮ ಹುಬ್ಬಳ್ಳಿಗೂ ಬನ್ನಿ, ಯಾವಾಗ್ಲೂ ವಿದೇಶಕ್ಕೆ ಹೋಗ್ತೀರಲ್ಲಾ ನಮ್ಮ ಕರ್ನಾಟಕದಲ್ಲೂ ಟ್ರಾವೆಲ್ ಮಾಡಿ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ ದೀಪಿಕಾ ಫೋಟೊ ನೋಡಿ ಸ್ಯಾಂಡಲ್ ವುಡ್ ಗಾಡೆಸ್, ಬ್ಯೂಟಿ, ಅಪ್ಸರೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ದೀಪಿಕಾ ದಾಸ್ ಇದೀಗ ಸಿನಿಮಾದಲ್ಲಿ ನಟಿಸುತ್ತಿದ್ದು, ಪಾರು ಪಾರ್ವತಿ ಎನ್ನುವ ಟ್ರಾವೆಲಿಂಗ್ ಸ್ಟೋರಿ ಹೊಂದಿರುವ ಸಿನಿಮಾದಲ್ಲಿ ಇವರು ನಟಿಸುತ್ತಿದ್ದಾರೆ. ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ.
ದೀಪಿಕಾ ದಾಸ್ ಮಾರ್ಚ್ 1 ರಂದು ಸೀಕ್ರೆಟ್ ಆಗಿ ತಮ್ಮ ಬಹುದಿನಗಳ ಗೆಳೆಯ ದೀಪಕ್ ಗೌಡ ಜೊತೆ ಗೋವಾದಲ್ಲಿ ವೈವಾಗಿಕ ಜೀವನಕ್ಕೆ ಕಾಲಿಟ್ಟಿದ್ದರು. ಹಲವು ದಿನಗಳ ಬಳಿಕ ಬೆಂಗಳೂರಿನಲ್ಲಿ ಕುಟುಂಬ, ಸ್ನೇಹಿತರಿಗೆ ರಿಸೆಪ್ಶನ್ ನೀಡಿದ್ದರು. ವಿವಾಹದ ಬಳಿಕ ನಟಿ ಹೆಚ್ಚಾಗಿ ವಿದೇಶದಲ್ಲೇ ಟ್ರಾವೆಲ್ ಮಾಡ್ತಿದ್ದಾರೆ.