ಕನ್ನಡ ಕಿರುತೆರೆಯಲ್ಲಿ ನಾಗಿಣಿಯಾಗಿ ಮಿಂಚಿದ ಬೆಡಗಿ ಹಾಗೂ ಬಿಗ್ ಬಾಸ್ ಸೀಸನ್ 7 (Bigg Boss Season 7ರಲ್ಲಿ ಸ್ಪರ್ಧಿಯಲ್ಲಿ ಉತ್ತಮ ಫೈಟ್ ಕೊಡುವ ಮೂಲಕ ಟಾಪ್ 3 ಹಂತ ತಲುಪಿದ ನಟಿ ದೀಪಿಕಾ ದಾಸ್.
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ದೀಪಿಕಾ ದಾಸ್ (Deepika Das) ಪ್ರತಿದಿನ ಒಂದಲ್ಲ ಒಂದು ಫೋಟೊಗಳನ್ನು ಶೇರ್ ಮಾಡುತ್ತಾ, ಅಭಿಮಾನಿಗಳ ಜೊತೆ ಕನೆಕ್ಟ್ ಆಗಿರುತ್ತಾರೆ. ಹೆಚ್ಚಾಗಿ ತಮ್ಮ ಟ್ರಾವೆಲ್ ಫೋಟೊಗಳ ಮೂಲಕವೇ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಟ್ರಾವೆಲ್ ಪ್ರಿಯೆಯಾಗಿರುವ ದೀಪಿಕಾ ದಾಸ್, ಹೆಚ್ಚಾಗಿ ವಿದೇಶದಲ್ಲಿ ಟ್ರಾವೆಲ್ ಮಾಡ್ತಾ ಎಂಜಾಯ್ ಮಾಡುತ್ತಿರುತ್ತಾರೆ. ಮದುವೆಯಾದ ನಂತರವೂ ದೀಪಿಕಾ ತಮ್ಮ ಪತಿ ಜೊತೆ ಟ್ರಾವೆಲ್ ಎಂಜಾಯ್ ಮಾಡ್ತಿರುತ್ತಾರೆ.
ದೀಪಿಕಾ ದಾಸ್ ದೀಪಾವಳಿ ಹಬ್ಬವನ್ನು ಸಹ ಸಂಭ್ರಮದಿಂದ ಆಚರಿಸಿದ್ದು, ಅದರ ಸುಂದರವಾದ ಫೋಟೊಗಳನ್ನು ಸಹ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನಟಿಯ ಹಬ್ಬದ ಸಂಭ್ರಮದ ಫೋಟೋ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ನಟಿಗೆ ದೀಪಾವಳಿಯ ಶುಭ ಕೋರಿದ್ದಾರೆ.
ಮದುವೆಯಾದ ಬಳಿಕ ದೀಪಿಕಾ ದಾಸ್ ಸೆಲೆಬ್ರೇಟ್ ಮಾಡುತ್ತಿರುವ ಮೊದಲ ದೀಪಾವಳಿ ಆಚರಣೆ ಇದಾಗಿತ್ತು. ಹಾಗಾಗಿ ಈ ವರ್ಷದ ದೀಪಾವಳಿ ನಟಿಗೆ ತುಂಬಾನೆ ವಿಶೇಷವಾಗಿದೆ. ತಮ್ಮ ಗಂಡನ ಜೊತೆಗಿನ ವಿಶೇಷ ಫೋಟೊಗಳನ್ನು ಸಹ ಶೇರ್ ಮಾಡಿದ್ದಾರೆ.
ದೀಪಜ್ಯೋತಿಃ ಪರಬ್ರಹ್ಮ ದೀಪಜ್ಯೋತಿರ್ಜನಾರ್ದನಃ| ದೀಪೋ ಹರತು ಮೇ ಪಾಪಂ ದೀಪಜ್ಯೋತಿರ್ನಮೋಸ್ತುತೇ|| ಎನ್ನುವ ಸಾಲುಗಳನ್ನು ಬರೆದಿರುವ ದೀಪಿಕಾ ದಾಸ್ ಕೆಂಪು ಬಣ್ಣದ ಸಲ್ವಾರ್ ಸೂಟ್ ಧರಿಸಿದ್ದು, ಕೈ ತುಂಬಾ ಹಸಿರು ಗಾಜಿನ ಬಳೆಗಳು, ಮುಡಿ ತುಂಬಾ ಮಲ್ಲಿಗೆ ಹೂವು , ಕರಿಮಣಿ ಸರ ಧರಿಸಿ ಕೈಯಲ್ಲಿ ದೀಪ ಹಿಡಿದು ಪೋಸ್ ಕೊಟ್ಟಿದ್ದಾರೆ.
ದೀಪಿಕಾ ದಾಸ್ ಇದೇ ವರ್ಷ ಮಾರ್ಚ್ ತಿಂಗಳಲ್ಲಿ ದೀಪಕ್ ಎನ್ನುವ ಬ್ಯುಸಿನೆಸ್ ಮ್ಯಾನ್ ಜೊತೆ ಗೋವಾದಲ್ಲಿ ಬಹಳ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಇದಾದ ನಂತರ ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮದಲ್ಲಿ ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಆಗಮಿಸಿ ಹರಸಿದ್ದರು.